ಸಾರಾಂಶ
ಯಶವಂತಪುರ-ಬೀದರ್ ರೈಲಿಗೆ ಸ್ವಾಗತ
ಕನ್ನಡಪ್ರಭ ವಾರ್ತೆ ಯಾದಗಿರಿ
ದೀಪಾವಳಿ ಹಬ್ಬದ ನಿಮಿತ್ತ ವಿಶೇಷ ರೈಲು ಒಡಿಸಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಯಶವಂತಪುರದಿಂದ ಬೀದರ್‌ವರೆಗೆ ಆರಂಭಗೊಂಡ ವಿಶೇಷ ರೈಲಿಗೆ ಸ್ವಾಗತಿಸಲಾಯಿತು.ನ.10ರಿಂದ ರಾತ್ರಿ 11.15ಕ್ಕೆ ಯಶವಂತಪುರದಿಂದ ಬೀದರ್‌ವರೆಗೆ ಮತ್ತು ನ.14ರಿಂದ ಬೀದರ್‌ದಿಂದ ಯಶವಂತಪುರಕ್ಕೆ ರೈಲು ತೆರಳಲಿದ್ದು, ಶನಿವಾರ ಬೆ.7.11ಕ್ಕೆ ಯಾದಗಿರಿ ರೈಲು ನಿಲ್ದಾಣಕ್ಕೆ ಆಗಮಿಸಿದಾಗ ರೈಲ್ವೆ ಲೋಕೊ ಪೈಲಟ್‌ಗಳಿಗೆ ಸನ್ಮಾನಿಸಿ, ರೈಲು ಸಂಚಾರಕ್ಕೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ, ವಿಶೇಷ ಹಬ್ಬಗಳಿಗೆ ರೈಲು ಓಡಿಸುವಂತೆ ಸಲ್ಲಿಸಿದ ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಸರ್ಕಾರಕ್ಕೆ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆಗಳು ಸಲ್ಲಿಸಿದ ಅವರು, ಈ ಮಾದರಿಯಲ್ಲಿ ಜಿಲ್ಲೆಯಾಗಿ 13 ವರ್ಷವಾದರೂ ಇನ್ನು ಅನೇಕ ರೈಲುಗಳು ನಿಲ್ಲುತ್ತಿಲ್ಲ. ಅವುಗಳನ್ನು ನಿಲುಗಡೆಗೆ ಕ್ರಮ ಕೈಗೊಳ್ಳಲು ತಿಳಿಸಿದರು.ಕೋವಿಡ್ ವೇಳೆ ತಡೆಹಿಡಿಯಲಾಗಿರುವ ವಿಜಯಪುರ-ಗುಂತಕಲ್ ರೈಲು ಪುನರಾರಂಭಿಸಬೇಕು ಮತ್ತು ನಿಲ್ದಾಣದಲ್ಲಿ ಲಿಫ್ಟ್ ಹಾಗೂ ವಿದ್ಯುತ್ ಚಾಲಿತ ವಾಹನಗಳ ಸೌಲಭ್ಯವನ್ನು ಒದಗಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಗಿರಿನಾಡು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಇಟಿಗಿ, ಉಪಾಧ್ಯಕ್ಷರಾದ ಶರಣು ನಾರಾಯಣಪೇಟ್, ಕಾರ್ಯದರ್ಶಿ ಶರಣು ಜೋತಾ, ಖಜಾಂಚಿ ಸಾಬಯ್ಯ ಗುತ್ತೆದಾರ, ಬನಶಂಕರ, ಪವನ್, ವಿಶಾಲ ಮುದ್ನಾಳ, ಅನಿಲ್ ಮುದ್ನಾಳ ಸೇರಿದಂತೆ ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))