ಸಾರಾಂಶ
ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ಪಟ್ಟಣದ ಸಾಯಿಬಾಬಾ ದೇವಸ್ಥಾನದ ಹತ್ತಿರವಿರುವ ಬಾವಿ ನೀರು ತುಂಬುವ ಹಂತಕ್ಕೆ ಬಂದಿದ್ದು, ಅನಾಹುತವಾಗುವ ಮುಂಚೆ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.ಪುರಸಭೆ ವ್ಯಾಪ್ತಿಯ ಈ ಪುರಾತನ ಕಾಲದ ಬಾವಿ ನೆಲಮಟ್ಟದಲ್ಲಿ ಇರುವುದರಿಂದ ಇಲ್ಲಿನ ನಿವಾಸಿಗಳಿಗೆ ಆತಂಕ ಎದುರಾಗಿದೆ. ಪಕ್ಕದಲ್ಲಿ ದೇವಸ್ಥಾನವಿದ್ದು ದಿನಂಪ್ರತಿ ಭಕ್ತರು ಬರುತ್ತಿದ್ದು ಚಿಕ್ಕಮಕ್ಕಳು ಆಟವಾಡುವ ಸಮಯದಲ್ಲಿ ಅನಾಹುತವಾದರೆ ಹೇಗೆ ಎನ್ನುವ ಆತಂಕ ಕಾಡುತ್ತಿದ್ದು, ಸ್ಥಳೀಯ ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.
ಗಣೇಶ ಚತುರ್ಥಿಯಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ತೆರೆದ ಬಾವಿಗೆ ನೀರು ಬಿಡಲಾಗಿತ್ತು. ಜತೆಗೆ ಇತ್ತೀಚಿಗೆ ಸುರಿದ ಮಳೆಗೆ ಬಾವಿಯಲ್ಲಿ ನೀರಿನ ಸೆಲೆ ಹೆಚ್ಚಾಗಿತ್ತು. ಸದ್ಯ ಬಾವಿ ತುಂಬಿ ನೀರು ಹೊರಗಡೆ ಹರಿಯಲು ಕೇವಲ ಮೂರ್ನಾಲ್ಕು ಅಡಿಯಷ್ಟು ಮಾತ್ರ ಬಾಕಿಯಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಶಾಶ್ವತ ಕ್ರಮಕ್ಕೆ ಮುಂದಾಗಿ ಅನಾಹುತ ತಪ್ಪಿಸಲು ಸೂಕ್ತ ಕ್ರಮಕೈಗೊಳ್ಳಬೇಕಿದೆ.ಮಲಿನಗೊಂಡ ಬಾವಿ: ತೆರೆದ ಬಾವಿ ನಿರುಪಯುಕ್ತವಾಗಿರುವ ಹಿನ್ನೆಲೆಯಲ್ಲಿ ಸುತ್ತಲಿನ ನಿವಾಸಿಗಳು ಕಸಕಡ್ಡಿ ತಂದು ಹಾಕುತ್ತಿದ್ದಾರೆ. ಬಾವಿ ಸಂಪೂರ್ಣ ಮಲಿನವಾಗಿದ್ದು, ದುರ್ವಾಸನೆ ಬೀರುತ್ತಿದೆ. ಇದರ ಸುತ್ತಲೂ ಕಲ್ಲಿನ ಗೋಡೆಯಿದ್ದು, ಕೆಲವು ವಿಗ್ರಹಗಳಿವೆ. ನೀರು ಸ್ವಚ್ಛಗೊಳಿಸಿ ಪುನಶ್ಚೇತನ ಮಾಡಬೇಕು ಎನ್ನುತ್ತಾರೆ ನಾಗರಿಕರು.
ಕುಷ್ಟಗಿ ಪಟ್ಟಣದ ಸಾಯಿಬಾಬಾ ದೇವಸ್ಥಾನದ ಪಕ್ಕದಲ್ಲಿರುವ ದೇಸಾಯಿ ಬಾವಿಯಲ್ಲಿ ನೀರು ಉಕ್ಕಿ ಹರಿದು ತುಂಬುವ ಹಂತಕ್ಕೆ ಬಂದಿದೆ. ಇದು ನೆಲಮಟ್ಟದ ಬಾವಿಯಾಗಿರುವುದರಿಂದ ಜನರಿಗೆ ಆತಂಕ ಎದುರಾಗಿದೆ. ಪುರಸಭೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಷ್ಟಗಿ ಪಟ್ಟಣದ ನಿವಾಸಿ ಚನ್ನಪ್ಪ ನಾಲಗಾರ ತಿಳಿಸಿದ್ದಾರೆ.ಕುಷ್ಟಗಿ ಪಟ್ಟಣದ ಸಾಯಿಬಾಬಾ ದೇವಸ್ಥಾನದ ಪಕ್ಕದಲ್ಲಿರುವ ಬಾವಿ ದೇಸಾಯಿ ಮನೆತನದವರಿಗೆ ಸೇರಿದ್ದು ಬಾವಿ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸುವಂತೆ ತಿಳಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))