ವಿಭಾಗೀಯ ಆಸ್ಪತ್ರೆಯಾಗಿ ವೆನ್‌ಲಾಕ್‌, ಲೇಡಿಗೋಶನ್‌: ಐವನ್‌ ಡಿಸೋಜ

| Published : Mar 09 2025, 01:45 AM IST

ವಿಭಾಗೀಯ ಆಸ್ಪತ್ರೆಯಾಗಿ ವೆನ್‌ಲಾಕ್‌, ಲೇಡಿಗೋಶನ್‌: ಐವನ್‌ ಡಿಸೋಜ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಜಿಲ್ಲಾ ವೆನ್‌ಲಾಕ್‌ ಆಸ್ಪತ್ರೆ ಮತ್ತು ಲೇಡಿಗೋಶನ್‌ ಆಸ್ಪತ್ರೆಗಳನ್ನು ವಿಭಾಗೀಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ ಬಜೆಟ್‌ನಲ್ಲಿಯೂ ಅನುದಾನ ಮೀಸಲಿರಿಸಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಜಿಲ್ಲಾ ವೆನ್‌ಲಾಕ್‌ ಆಸ್ಪತ್ರೆ ಮತ್ತು ಲೇಡಿಗೋಶನ್‌ ಆಸ್ಪತ್ರೆಗಳನ್ನು ವಿಭಾಗೀಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ ಬಜೆಟ್‌ನಲ್ಲಿಯೂ ಅನುದಾನ ಮೀಸಲಿರಿಸಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆನ್‌ಲಾಕ್‌ನಲ್ಲಿ ದಿನಕ್ಕೆ 1500ರಿಂದ 1800ರವರೆಗೆ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರೆ, 200ರಷ್ಟು ಮಂದಿ ಒಳರೋಗಿಗಳಾಗಿ ದಾಖಲಾಗುತ್ತಾರೆ. ಹಾಗಾಗಿ ಇವೆರಡು ಆಸ್ಪತ್ರೆಗಳನ್ನು ವಿಭಾಗೀಯ ಆಸ್ಪತ್ರೆಗಳನ್ನಾಗಿ ಮಾಡುವಂತೆ ವಿಧಾನ ಪರಿಷತ್‌ ಅಧಿವೇಶನದಲ್ಲಿ ಗಮನ ಸೆಳೆದಿದ್ದೆ. ಇದಕ್ಕೆ ಆರೋಗ್ಯ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಸರ್ಕಾರದಿಂದ 250 ಕೋಟಿ ರು. ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ವಿಭಾಗೀಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇ ಏರುವುದರಿಂದ ಅಗತ್ಯ ಸಿಬ್ಬಂದಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳು ದೊರೆಯಲಿದ್ದು, ಇದು ಜಿಲ್ಲೆಗೆ ಬಹುದೊಡ್ಡ ಕೊಡುಗೆಯಾಗಲಿದೆ ಎಂದು ಐವನ್‌ ಡಿಸೋಜ ತಿಳಿಸಿದರು.

ಮುಖಂಡರಾದ ಶಾಲೆಟ್‌ ಪಿಂಟೊ, ಸುರೇಂದ್ರ ಕಾಂಬ್ಳಿ, ವಿಕಾಸ್‌ ಶೆಟ್ಟಿ, ಸುಧಾಕರ ಜೋಗಿ, ಯಶವಂತ ಪ್ರಭು ಮತ್ತಿತರರಿದ್ದರು.