ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಉಡುಪಿಯಲ್ಲಿ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಸರ್ಕಾರ ಅ‍ವರ ಅಧಿಕೃತ ಕಾರ್ಯಕ್ರಮಗಳ ವಿವರ ಬಿಡುಗಡೆ ಮಾಡಿದೆ. ಪೂರ್ವನಿಗದಿಗಿಂತ 40 ನಿಮಿಷ ಮುಂಚಿತವಾಗಿ ಆವರು ಆಗಮಿಸುವರು ಎಂದು ಗುರುವಾರ ಸಂಜೆ ತಿಳಿದುಬಂದಿದೆ.

ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಉಡುಪಿಯಲ್ಲಿ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಸರ್ಕಾರ ಅ‍ವರ ಅಧಿಕೃತ ಕಾರ್ಯಕ್ರಮಗಳ ವಿವರ ಬಿಡುಗಡೆ ಮಾಡಿದೆ. ಪೂರ್ವನಿಗದಿಗಿಂತ 40 ನಿಮಿಷ ಮುಂಚಿತವಾಗಿ ಆವರು ಆಗಮಿಸುವರು ಎಂದು ಗುರುವಾರ ಸಂಜೆ ತಿಳಿದುಬಂದಿದೆ.

* 11 ಗಂಟೆಗೆ ಮೋದಿ ಆದಿಉಡುಪಿ ಹೆಲಿಪ್ಯಾಡಿಗೆ ಆಗಮನ

* ಅಲ್ಲಿಂದ ಕಾರಿನಲ್ಲಿ ಬನ್ನಂಜೆ ನಾರಾಯಣ ಗುರು ವೃತ್ತಕ್ಕೆ

* ಬನ್ನಂಜೆಯಿಂದ ಸುಮಾರು 1 ಕಿ.ಮೀ. ರೋಡ್ ಶೋ ಆರಂಭ

* ನಡುವೆ 3 ಕಡೆಗಳಲ್ಲಿ ಹುಲಿವೇಷ, ಯಕ್ಷಗಾನ ವೇಷ ವೀಕ್ಷಣೆ

* ಜಯಲಕ್ಷ್ಮೀ ಸಿಲ್ಕ್ಸ್ - ಕಲ್ಸಂಕ ವೃತ್ತದವರೆಗೆ ರೋಡ್ ಶೋ

* 11.30ಕ್ಕೆ ಕೃಷ್ಣಮಠಕ್ಕೆ, ಮಠದ ಸಾಂಪ್ರದಾಯಿಕ ಸ್ವಾಗತ

* ಶ್ರೀ ಕೃಷ್ಣ ದರ್ಶನ, ಸುವರ್ಣ ತೀರ್ಥ ಮಂಟಪ ಉದ್ಘಾಟನೆ

* ಪರ್ಯಾಯ ಪುತ್ತಿಗೆ ಶ್ರೀಗಳಿಂದ ಕೋಟಿ ಗೀತಾ ದೀಕ್ಷೆ ಪ್ರದಾನ

* ಚಂದ್ರಶಾಲೆಯಲ್ಲಿ ಅಷ್ಟ ಮಠಾಧೀಶರ ಭೇಟಿ, ಸಮಾಲೋಚನೆ

* 11.45 ಕ್ಕೆ ಗೀತಾ ಪಾರಾಯಣ ಸ್ಥಳಕ್ಕೆ ಆಗಮನ, 10 ಶ್ಲೋಕ ಪಠಣ

* ಸಭಾ ಕಾರ್ಯಕ್ರಮ, ಸ್ವಾಮೀಜಿ, ಮೋದಿ ಅವರಿಂದ ಭಾಷಣ

* ಮೋದಿ ಅವರಿಗೆ ಗಣ್ಯರ ಸಮ್ಮುಖ ವೈಶಿಷ್ಟ್ಯಪೂರ್ಣ ಸನ್ಮಾನ

* 12.45ಕ್ಕೆ ಸಭಾ ಕಾರ್ಯಕ್ರಮ ಮುಕ್ತಾಯ, ಮಠದಿಂದ ನಿರ್ಗಮನ

* 1 ಗಂಟೆಗೆ ಆದಿಉಡುಪಿ ಹೆಲಿಪ್ಯಾಡಿನಿಂದ ಗೋವಾಕ್ಕೆ