ಪ್ರಧಾನಿ ಮೋದಿ ಅಚ್ಚುಕಟ್ಟು ಪ್ರದೇಶಕ್ಕೆ ಕೊಟ್ಟ ಭರವಸೆ ಏನಾಯಿತು?: ಸಚಿವ ತಂಗಡಗಿ

| Published : Apr 20 2024, 01:01 AM IST

ಪ್ರಧಾನಿ ಮೋದಿ ಅಚ್ಚುಕಟ್ಟು ಪ್ರದೇಶಕ್ಕೆ ಕೊಟ್ಟ ಭರವಸೆ ಏನಾಯಿತು?: ಸಚಿವ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತು ವರ್ಷ ಅಧಿಕಾರ ನಡೆಸಿರುವ ಪ್ರಧಾನಮಂತ್ರಿ ಮೋದಿ ಈ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಹೀಗಾಗಿ ಬಿಜೆಪಿ ನಾಯಕರು ಸುಳ್ಳು ಹೇಳುತ್ತಾ ಮೋದಿ ಮೋದಿ ಎಂದು ಪ್ರಚಾರ ಮಾಡಲು ಹೊರಟಿದ್ದಾರೆ ಎಂದು ಸಚಿವ ಶಿವರಾಜ ತಂಗಡಿ ಟೀಕಿಸಿದ್ದಾರೆ.

ಕಾರಟಗಿ: ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆ ಗಂಗಾವತಿಗೆ ಬಂದು ಪ್ರಧಾನಿ ಮೋದಿ ಅಚ್ಚುಕಟ್ಟು ಪ್ರದೇಶಕ್ಕೆ ಕೊಟ್ಟ ಭರವಸೆ ಏನಾಯಿತು? ಎನ್ನುವುದನ್ನು ಮೊದಲು ಬಿಜೆಪಿಗರು ಹೇಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸವಾಲೆಸೆದಿದ್ದಾರೆ.

ಇಲ್ಲಿನ ತಮ್ಮ ನಿವಾಸದಲ್ಲಿ ಶುಕ್ರವಾರ ಬಿಜೆಪಿ ಮುಖಂಡರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷ ಅಧಿಕಾರ ನಡೆಸಿರುವ ಪ್ರಧಾನಮಂತ್ರಿ ಮೋದಿ ಈ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಹೀಗಾಗಿ ಬಿಜೆಪಿ ನಾಯಕರು ಸುಳ್ಳು ಹೇಳುತ್ತಾ ಮೋದಿ ಮೋದಿ ಎಂದು ಪ್ರಚಾರ ಮಾಡಲು ಹೊರಟಿದ್ದಾರೆ. ಕಳೆದ ಬಾರಿ ಗಂಗಾವತಿಗೆ ಪ್ರಚಾರಕ್ಕೆ ಬಂದಾಗ ಮೋದಿ ಅವರು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಒಂದೂವರೆ ಸಾವಿರ ಕೋಟಿ ರು. ಅನುದಾನ ಕೊಡುತ್ತೇನೆ ಎಂದು ಕೊಟ್ಟ ಭರವಸೆ ಏನಾಯಿತು ಎನ್ನುವುದನ್ನು ಈ ಬಿಜೆಪಿಯವರೇ ಉತ್ತರ ಕೊಡಬೇಕು ಎಂದರು.

ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ನನ್ನ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡುವ ಮೊದಲು ತಾವು ಶಾಸಕರಾಗಿ ಒಂದು ವರ್ಷದಲ್ಲಿ ಏನು ಮಾಡಿದ್ದಾರೆ ಎಂಬುದನ್ನು ತೋರಿಸಲಿ. ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಅವರು ಮೋದಿ ಈ ದೇಶ ಮತ್ತು ನಮ್ಮ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ತೋರಿಸಲಿ. ನಾವು ಏನು ಮಾಡಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತೇವೆ ಎಂದು ಸವಾಲು ಹಾಕಿದರು.

ಪ್ರಮುಖರಾದ ಶಶಿಧರಗೌಡ ಪಾಟೀಲ್, ಚನ್ನಬಸವ ಸುಂಕದ್, ಶಿವರೆಡ್ಡಿ ನಾಯಕ, ಬೂದಿ ಗಿರಿಯಪ್ಪ, ಶರಣೇಗೌಡ ಮಾಲಿ ಪಾಟೀಲ್, ಕೆ. ಸಿದ್ದನಗೌಡ, ಪುರಸಭೆ ಸದಸ್ಯರಾದ ಈಶಪ್ಪ ಇಟ್ಟಂಗಿ, ಹಿರೇಬಸಪ್ಪ ಸಜ್ಜನ್, ಸಿದ್ದಪ್ಪ ಬೇವಿನಾಳ, ಶ್ರೀನಿವಾಸ ಕಾನುಮಲ್ಲಿ ಮತ್ತು ಜಿ. ಯಂಕನಗೌಡ, ಚಿದಾನಂದಪ್ಪ ಈಡಿಗೇರ್, ಬಿ. ಶರಣಯ್ಯಸ್ವಾಮಿ, ಲಿಂಗಪ್ಪ ಗಿಣಿವಾರ್, ಅಯ್ಯಪ್ಪ ಉಪ್ಪಾರ, ಮಹೇಶ್ ಕಂದಗಲ್, ಟಿವಿಎಸ್ ವೀರೇಶ್ ಇದ್ದರು. ಕಾಂಗ್ರೆಸ್ ಸೇರ್ಪಡೆ: ಇಲ್ಲಿನ ಸಚಿವರ ಗೃಹ ಕಚೇರಿಯಲ್ಲಿ ಶುಕ್ರವಾರ ಬಿಜೆಪಿ ತೊರೆದು ಶುಕ್ರವಾರ ಕಾಂಗ್ರೆಸ್ ಸೇರ್ಪಡೆಗೊಂಡರು. ಇಲ್ಲಿನ ಸಂಜೀವಪ್ಪ ಸಾಲೋಣಿ, ಪರುಶುರಾಮ್ ಸಾಲೋಣಿ, ಪಂಪಾಪತಿ ಶೆಟ್ಟರ್, ಚಂದ್ರು ಉದ್ದಿಹಾಳ್, ರಮೇಶ ಉದ್ದಿಹಾಳ್, ಸೋಮನಾಥ ಗಚ್ಚಿನಮನಿ, ಪರಸಪ್ಪ ಉಪ್ಪಾರ್, ಫಕ್ಕೀರಪ್ಪ ವಾಲಿಕಾರ್, ಶಿವಪ್ಪ ಉದ್ದಿಹಾಳ್ ಸೇರಿದಂತೆ ೩೦ಕ್ಕೂ ಹೆಚ್ಚು ಬಿಜೆಪಿಯಲ್ಲಿದ್ದವರು ಸಚಿವ ಶಿವರಾಜ ತಂಗಡಗಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.