ಹಿಂದಿನ ಸಿಡಿಪಿಓಗೆ ಆದ ಗತಿ ನಿಮಗೂ ಆಗುತ್ತೆ: ಶಾಸಕ ಎಚ್ಚರಿಕೆ

| Published : Jan 07 2024, 01:30 AM IST

ಹಿಂದಿನ ಸಿಡಿಪಿಓಗೆ ಆದ ಗತಿ ನಿಮಗೂ ಆಗುತ್ತೆ: ಶಾಸಕ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಸಿಡಿಪಿಓ ನಾಗೇಶ್ ಅವರಿಗೆ ಬಂದ ಸ್ಥಿತಿ ನಿಮಗೂ ಆಗುತ್ತೆ ಎಂದು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಎಚ್ಚರಿಸಿದ ಘಟನೆ ಜರುಗಿತು. ಸಭೆಯಲ್ಲಿ ಹೊಸ ಹಂಪಾಪುರ ಲಿಂಗರಾಜು, ಶಂಕನಪುರ ಲಿಂಗರಾಜು , ದಿಲೀಪ್ ಸಿದ್ದಪ್ಪಾಜಿ ಇನ್ನಿತರು ಮಾತನಾಡಿ, ಬಹುತೇಕ ಅಂಗನವಾಡಿ ಕೇಂದ್ರದಲ್ಲಿ ಕಳಪೆ ಆಹಾರ ಪದಾರ್ಥ ಪೂರೈಕೆಯಾಗುತ್ತಿದೆ. ಮೊಟ್ಟೆಗಳನ್ನು ಬೇಯಿಸಿ ನಾಲ್ಕು ಭಾಗ ಮತ್ತು ಎರಡು ಭಾಗ ಮಾಡಿ ಕೆಲವು ಕಡೆಗಳಲ್ಲಿ ನೀಡಲಾಗುತ್ತಿದೆ. ಬಾಣಂತಿಯರಿಗೆ ನೀಡುವ ಆಹಾರದಲ್ಲಿ ಕಳಪೆ, ಹಾಗೂ ಹುಳು ಮಿಶ್ರಿತ ಆಹಾರ ವಿತರಿಸಲಾಗುತ್ತಿದೆ. ಕಾಳುಗಳು ಸಹಾ ಕಳಪೆ ಗುಣಮಟ್ಟದ್ದಾಗಿದೆ. ಆ ಕಾಳುಗಳಿಗೆ ಮಣಿಯನ್ನು ಪೊಣಿಸಬಹುದು. ಅಷ್ಟರ ಮಟ್ಟಿಗೆ ಕಾಳುಗಳು ಕಳಪೆಯಾಗಿದ್ದು, ಅಧಿಕಾರಿಗಳು ಪರಿಶೀಲಿಸಬೇಕು, ಕೆಲವು ಕಡೆ ಹುಳು ಮಿಶ್ರಿತ ಆಹಾರ ಸಹಾ ಪೂರೈಸಲಾಗುತ್ತಿದ್ದು ಗಮನ ಹರಿಸಬೇಕು ಎಂದರು.

ಶುಚಿತ್ವ, ಪೌಷ್ಟಿಕ ಆಹಾರ ಪೂರೈಕೆಯಾಗದಿದ್ದಲ್ಲಿ ನಿಮ್ಮ ಮೇಲೆ ಕ್ರಮಕೈಗೊಳ್ಳಬೇಕಾಗುತ್ತೆ

ಕನ್ನಡಪ್ರಭ ಕೊಳ್ಳೇಗಾಲಹಿಂದಿನ ಸಿಡಿಪಿಓ ನಾಗೇಶ್ ಅವರಿಗೆ ಬಂದ ಸ್ಥಿತಿ ನಿಮಗೂ ಆಗುತ್ತೆ ಎಂದು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಎಚ್ಚರಿಸಿದ ಘಟನೆ ಜರುಗಿತು. ಸಭೆಯಲ್ಲಿ ಹೊಸ ಹಂಪಾಪುರ ಲಿಂಗರಾಜು, ಶಂಕನಪುರ ಲಿಂಗರಾಜು , ದಿಲೀಪ್ ಸಿದ್ದಪ್ಪಾಜಿ ಇನ್ನಿತರು ಮಾತನಾಡಿ, ಬಹುತೇಕ ಅಂಗನವಾಡಿ ಕೇಂದ್ರದಲ್ಲಿ ಕಳಪೆ ಆಹಾರ ಪದಾರ್ಥ ಪೂರೈಕೆಯಾಗುತ್ತಿದೆ. ಮೊಟ್ಟೆಗಳನ್ನು ಬೇಯಿಸಿ ನಾಲ್ಕು ಭಾಗ ಮತ್ತು ಎರಡು ಭಾಗ ಮಾಡಿ ಕೆಲವು ಕಡೆಗಳಲ್ಲಿ ನೀಡಲಾಗುತ್ತಿದೆ. ಬಾಣಂತಿಯರಿಗೆ ನೀಡುವ ಆಹಾರದಲ್ಲಿ ಕಳಪೆ, ಹಾಗೂ ಹುಳು ಮಿಶ್ರಿತ ಆಹಾರ ವಿತರಿಸಲಾಗುತ್ತಿದೆ. ಕಾಳುಗಳು ಸಹಾ ಕಳಪೆ ಗುಣಮಟ್ಟದ್ದಾಗಿದೆ. ಆ ಕಾಳುಗಳಿಗೆ ಮಣಿಯನ್ನು ಪೊಣಿಸಬಹುದು. ಅಷ್ಟರ ಮಟ್ಟಿಗೆ ಕಾಳುಗಳು ಕಳಪೆಯಾಗಿದ್ದು, ಅಧಿಕಾರಿಗಳು ಪರಿಶೀಲಿಸಬೇಕು, ಕೆಲವು ಕಡೆ ಹುಳು ಮಿಶ್ರಿತ ಆಹಾರ ಸಹಾ ಪೂರೈಸಲಾಗುತ್ತಿದ್ದು ಗಮನ ಹರಿಸಬೇಕು ಎಂದರು. ಉಳಿಕೆ ಆಹಾರದಲ್ಲಿ ಹುಳುಗಳಿರಬಹುದು- ಸಿಡಿಪಿಓವಿತರಿಸಿದ ಬಳಿಕ ಉಳಿಕೆ ಆಹಾರದಲ್ಲಿ ಹುಳುಗಳು ಬಂದಿರಬಹುದು, ಪ್ರತಿ ತಿಂಗಳ ಆಹಾರ ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಂಜಮಣಿ ಸಮಜಾಯಿಸಿ ನೀಡಿದರು.ಸಾಕಷ್ಟು ದೂರುಗಳಿವೆ ಅಂದ್ರು ಶಾಸಕರು: ಅಧಿಕಾರಿ ಉತ್ತರ ಕೇಳಿ ಗರಂಆದ ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ಹುಳು ಮಿಶ್ರಿತ ಆಹಾರ ಪದಾರ್ಥ ವಿತರಿಸುತ್ತಿರುವ ಸಂಬಂಧ ನನಗೂ ಸಾಕಷ್ಟು ದೂರುಗಳಿವೆ, ಸಾರ್ವಜನಿಕರಿಂದ ದೂರು ಬರದಂತೆ ಕರ್ತವ್ಯ ನಿರ್ವಹಿಸಿ, ನಿಮ್ಮ ಮೇಲೆ ಗಂಬೀರ ದೂರುಗಳು ಬಂದರೆ ಹಿಂದಿನ ಸಿಡಿಪಿಓ ನಾಗೇಶ ಅವರನ್ನು ಎತ್ತಗಂಡಿ ಮಾಡಿದಂತೆ ನಿಮಗೂ ಅದೇ ಗತಿಯಾಗಬಹುದು ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ಕೊಳ್ಳೇಗಾಲದಲ್ಲಿ ಅಪೂಣ೯ಗೊಂಡಿರುವ ಅಂಬೇಡ್ಕರ್ ಸಮುದಾಯ ಭವನ ಪೂಣ೯ಕ್ಕೆ ಇನ್ನು 3ಕೋಟಿ ಅನುದಾನ ಅಗತ್ಯವಿದ್ದು, ಸರ್ಕಾರದ ಗಮನ ಸೆಳೆದು ಕಾಮಗಾರಿ ಪೂರ್ಣಗೊಳಿಸಲು ಸಹಕರಿಸುವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಅಂಗನವಾಡಿ ಉತ್ತಮ ರೀತಿ ನಿರ್ವಹಣೆಗೆ ಮುಂದಾಗದಿದ್ದರೆ, ಸಾಕಷ್ಟು ದೂರುಗಳು ಬಂದರೆ ನಾನು ಸಹಿಸುವುದಿಲ್ಲ,ಅಕ್ರಮ ಮದ್ಯ, ಗಾಂಜಾ ಮಾರಾಟ, ಇಸ್ವತ್ತು ವಿತರಣೆಯಲ್ಲಿ ಲೋಪ, ಆರೋಪ

ಕೊಳ್ಳೇಗಾಲ ಡಿ.6. ಕುಡಿಯುವ ನೀರಿನ ಪೂರೈಕೆಯಲ್ಲಿ ಲೋಪ, ಅಕ್ರಮ ಮದ್ಯ ಮಾರಾಟ, ಸಮುದಾಯ ಭವನ ಅಪೂರ್ಣ, ಅಕ್ರಮ ಗಾಂಜಾ, ಅಂಗನವಾಡಿಗಳಲ್ಲಿ ಅಕ್ರಮ, ಸ್ಕ್ಯಾನಿಂಗ್ ದಂಧೆ, ಸಮಯಕ್ಕೂ ಮುನ್ನ ಬಾರ್ ತೆರವು, ಇ-ಸ್ವತ್ತು, ಬೀದಿ ದೀಪಗಳು, ಅನೈಮ೯ಲ್ಯ ಸೇರಿದಂತ ಅನೇಕ ಸಮಸ್ಯೆಗಳು ಮಹಾಪೂರ ಶನಿವಾರ ನಡೆದ ಎಸ್ಸಿ ಎಸ್ಚಿ ಸಭೆಯಲ್ಲಿ ಕಂಡು ಬಂತು.19 ವರುಷಗಳಾದರೂ ಅಂಬೇಡ್ಕರ್ ಭವನ ಸಂಪೂರ್ಣಗೊಂಡಿಲ್ಲ, ಪೌರ ಕಾರ್ಮಿಕರಿಗೆ ದಾರಿ ಬಿಡಲು ಹಿಂದಿನ ಡಿಸಿ ಆದೇಶಿಸಿದ್ದಾರೆ. ಕೂಡಲೆ ಭವನ ನಿಮಾ೯ಣಕ್ಕೆ ಸಹಕರಿಸಿ, ನಿಮ್ಮ ಶಾಸಕರ ಅವಧಿಯಲ್ಲಿಯೇ ಪೂಣ೯ಗೊಳ್ಳಲು ಸಹಕರಿಸಿ ಎಂದು ಸಭೆಯಲ್ಲಿ ದಲಿತ ಮುಖಂಡರು ಮನವಿ ಮಾಡಿದರು. ಈ ವೇಳೆ ಶಾಸಕರು ಪ್ರತಿಕ್ರಿಯಿಸಿ ಹಿಂದಿನ ಜಿಲ್ಲಾಧಿಕಾರಿಗಳ ಆದೇಶ ಸರಿ ಇದೆ ಎಂದು ಭಾವಿಸುವೆ ಎಲ್ಲರೂ ಅನುಮತಿ ಕೊಡಿ, ಪೌರ ಕಾರ್ಮಿಕರಿಗೆ ರಸ್ತೆ ಬಿಡುವ ವಿಚಾರದಲ್ಲಿ ಮಾನವೀಯಕತೆ ಮೆರೆಯೋಣ ಎಲ್ಲರೂ ಸಹಕರಿಸಿ, ಭವನ ಶೀಘ್ರ ಪೂರ್ಣಗೊಳ್ಳಲು ಅಗತ್ಯ ಕ್ರಮವಹಿಸೋಣ ಎಂದರು.ಅಬಕಾರಿ ಇಲಾಖೆ ಸಮಪ೯ಕ ರೀತಿ ಕೆಲಸ ಮಾಡುತ್ತಿಲ್ಲ, ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಕ್ರಮ ಗಾಂಜಾ ಮಾರಾಟ ಸಹಾ ಜರುಗುತ್ತಿದ್ದು ಉದ್ದೇಶ ಪೂವ೯ಕವಾಗಿ ಗಾಂಜಾ ಬೆಳೆದವರ ಮೇಲೆಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ, ಭೀಮಮನಗರ ಸೇರಿದಂತೆ ದಲಿತರ ಬಡಾವಣೆಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಬೀದಿ ದೀಪ ನಿರ್ವಹಣೆ ಸರಿ ಇಲ್ಲ, ಬಹುತೇಕ ಸಮಸ್ಯೆಗಳಿಗೆ ನಗರಸಭೆ ಕಾರಣವಾಗಿದೆ. ಇಸ್ವತ್ತು ವಿತರಣೆಯಲ್ಲೂ ಅನೇಕ ಗೊಂದಲಗಳಿವೆ, ಸರಪಡಿಸಿ ಬಡವರಿಗೆ ಖಾತೆ ಮಾಡಿಸಲು ಸಹಕರಿಸಿ ಎಂದು ದಲಿತ ಮುಖಂಡರುಗಳಾದ ನಟರಾಜಮಾಳಿಗೆ, ಆಟೋ ಶಿವು, ದಿಲೀಪ್, ನಿಂಗರಾಜು ಇನ್ನಿತರರು ವಿಚಾರ ಪ್ರಸ್ತಾಪಿದರು. ಅಬಕಾರಿ ಅಧಿಕಾರಿಗಳು ಇದೆ ವೇಳೆ ಮಾತನಾಡಿ ಅಕ್ರಮ ಮದ್ಯ. ಮಾರಾಟ ಸಂಬಂಧಿಸಿದೆ ಈವರ್ಷ 172 ಪ್ರಕರಣ ದಾಖಲಾಗಿದೆ. ಸಾದ್ಯವಾಗಷ್ಟು ಅಕ್ರಮ ಮದ್ಯತಡೆಗೆ ಶ್ರಮಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು

ವೈದ್ಯರನ್ನು ದೇವರೆನ್ನುತ್ತಾರೆ ಅದರಂತೆ ಇರಿ, ಸರ್ಕಾರಿ ಆಸ್ಪತ್ರೆಗೆ ಬಡವರೆ ಹೆಚ್ಚು ಬರುವುದು. ಅಲ್ಲಿನ ನ್ಯೂನ್ಯತೆ ಬಗ್ಗೆ ಬಹಳ ದೂರು ಬಂದಿದೆ. ವ್ಯೆದ್ಯರು ಜನರಿಗೆ ಉತ್ತಮ ಸೇವೆ ನೀಡಿ. ನಿಮ್ಮನ್ನು ದೇವರು ಎಂದು ಪೂಜಿಸುತ್ತಾರೆ. ಮುಂದೆ ದೂರು ಬಾರದಂತೆ ಕ್ರಮವಹಿಸಿ ಇಲ್ಲವೇ ಕ್ರಮವಹಿಸಿ ಎಂದು ಸೂಚಿದರಲ್ಲದೆ ರಲ್ಲದೆ ಅಂಬೇಡ್ಕರ್ ಸಮುದಾಯ ಭವನ ಸ್ಥಳ ವಿಶಾಲವಾಗಿದೆ. ಹಿಂದಿನ ಡಿಸಿ ರಮೇಶ್ ಪೌರಕಾರ್ಮಿಕರ ಕಾಲೋನಿ ಕಡೆಗೆ 30 ಅಡಿ ರಸ್ತೆ ಬಿಡಬೇಕೆಂದು ಆದೇಶ ಮಾಡಿದ್ದಾರೆ. ಅದರಂತೆ ಕೆಲಸ ಮಾಡಿ ಎಂದು ಕೆಆರ್‍ಐಡಿಎಲ್ ಎಇಇ ಚಿಕ್ಕಲಿಂಗಯ್ಯಗೆ ಸೂಚಿಸಿದರು