ವಾಟ್ಸಾಪ್‌ ಮಾಡಿ, ಉಚಿತ ಮಣ್ಣಿನ ಗಣಪ ಪ್ರತಿಮೆ ಪಡೆಯಿರಿ!

| Published : Sep 06 2024, 01:04 AM IST

ಸಾರಾಂಶ

Whatsapp, Get Free Clay Ganesha Statue!

- ಗಣೇಶ ಪ್ರತಿಮೆ ನೀರಲ್ಲಿ ನೆನೆಯಿಟ್ಟರೆ ಸಸಿಯೊಂದರ ಮೊಳಕೆ!

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಪರಿಸರಸ್ನೇಹಿ, "ಮನೆ ಮನೆಗೂ ಮಣ್ಣಿನ ಗಣಪ " ಎಂಬ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಲು, ಜಾಗೃತಿ ಮತ್ತು ಮಣ್ಣಿನ ಗಣಪತಿಗಳನ್ನು ಉಚಿತವಾಗಿ ಹಂಚುವ ಕಾರ್ಯಕ್ರಮ ಯಾದಗಿರಿ ನಗರದ ವಿಜಯ ವಿಠಲ ಸೇವಾ ಸಂಸ್ಥೆ, ಶಶಿ ಚಾರಿಟೆಬಲ್ ಮತ್ತು ಶಿಕ್ಷಣ ಸಂಸ್ಥೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ, ಪಾರ್ಲಿಮೆಂಟ್ ಗೆಳೆಯರ ಬಳಗ ಹಾಗೂ ಶ್ರೀ ಲಕ್ಷ್ಮೀ ದೇವಸ್ಥಾನ ಸಮಿತಿಯವರು ಆಯೋಜಿಸಿದೆ. ಈ ಬಾರಿ ವಿಶೇಷವಾಗಿ 750 ಮಣ್ಣಿನ ಗಣೇಶ ಪ್ರತಿಮೆಗಳನ್ನು ಉಚಿತ ವಿತರಿಸುವ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಉಚಿತವಾಗಿ ಪಡೆಯಬೇಕೆನ್ನುವವರು ಮೊಬೈಲ್ ಸಂಖ್ಯೆ 9739519803 ನೋಂದಣಿ ಮಾಡಿಸಿಕೊಳ್ಳಬೇಕು ವಾಟ್ಸಾಪ್‌ ಮುಖಾಂತರ ನೋಂದಣಿ ಮಾಡಿಕೊಳ್ಳಬಹುದು. ವಿತರಣೆ ಮಾಡುವ ಪ್ರತಿ ಗಣೇಶನ ಒಡಲಲ್ಲಿ ಬೀಜಗಳನ್ನು ಇಟ್ಟು ತಯಾರಿಸಲಾಗಿದ್ದು ಭಕ್ತಾದಿಗಳು ತಮ್ಮ ಮನೆಯ ಮುಂದೆ ಪಾಟ್ ಗಳಲ್ಲಿಯೂ ಗಣೇಶನನ್ನು ವಿಸರ್ಜಿಸುವ ಮೂಲಕ ಹಬ್ಬ ಪೂರ್ಣಗೊಳಿಸಬೇಕು, ತದನಂತರ 15 ದಿನಗಳಲ್ಲಿ ಗಣೇಶನಿಂದ ಒಂದು ಸಸಿ ಹುಟ್ಟಲಿದ್ದು ಆ ಮೂಲಕ ಪರಿಸರಕ್ಕೆ ಸಸಿಯೊಂದರ ಕೊಡುಗೆಯೂ ಆಗಲಿದೆ ಎಂದು ಶಶಿ ಸೂಪರ್‌ ಬಜಾರ್‌ ಮಾಲೀಕ ಮಲ್ಲಿಕಾರ್ಜುನ ಶಿರಗೋಳ ತಿಳಿಸಿದರು.

ವಿಜಯ ವಿಠಲ್ ಸೇವಾ ಸಂಸ್ಥೆ ಅಧ್ಯಕ್ಷ ವಿಠಲ್ ಕುಲಕರ್ಣಿ ಮಾತನಾಡಿ, ಕಳೆದ ವರ್ಷ 750 ಅದಕ್ಕೂ ಮುನ್ನ 600, ಅದಕ್ಕೂ ಮುನ್ನ 160 ಮಣ್ಣಿನ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಲಾಗಿತ್ತು. ಈ ಬಾರಿ ಲಕ್ಷ್ಮೀ ನಗರವನ್ನು ಪಿಒಪಿ ಮುಕ್ತ ಗಣೇಶ ಮಾಡಲು ಉದ್ದೇಶಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾದಗಿರಿಯ ಎಲ್ಲ ವಾರ್ಡುಗಳನ್ನು ಪಿಒಪಿ ಮುಕ್ತ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.

ಲಕ್ಷ್ಮೀ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಶರಣಪ್ಪ ಬೆನಕನಹಳ್ಳಿ ಉಪಸ್ಥಿತರಿದ್ದರು.

-----

5ವೈಡಿಆರ್‌14 : ಪರಿಸರ ಸ್ನೇಹಿ ಮಣ್ಣಿನ ಗಣೇಶ ಪ್ರತಿಮೆ.