ಸಾರಾಂಶ
ರಸ್ತೆಯಲ್ಲಿ ವಾಹನ ಪರಸ್ಪರ ತಾಕಿದ ವಿಚಾರವಾಗಿ ಬೈಕ್ ಸವಾರ ಹಾಗೂ ಕೇಂದ್ರ ಸರ್ಕಾರದ ಇಲಾಖೆಯ ಕಾರಿನ ಚಾಲಕ ಬಡಿದಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಸರ್ಕಲ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಸ್ತೆಯಲ್ಲಿ ವಾಹನ ಪರಸ್ಪರ ತಾಕಿದ ವಿಚಾರವಾಗಿ ಬೈಕ್ ಸವಾರ ಹಾಗೂ ಕೇಂದ್ರ ಸರ್ಕಾರದ ಇಲಾಖೆಯ ಕಾರಿನ ಚಾಲಕ ಬಡಿದಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಸರ್ಕಲ್ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಕಾರಿಗೆ ಬೈಕ್ ತಾಕಿದ ವಿಚಾರವಾಗಿ ಈ ಗಲಾಟೆ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ‘ಎಕ್ಸ್’ ತಾಣದಲ್ಲಿ ಪೊಲೀಸರಿಗೆ ವಿಡಿಯೋ ಸಮೇತ ಸಾರ್ವಜನಿಕರು ದೂರು ನೀಡಿದ್ದಾರೆ. ಕೊಡಿಗೇಹಳ್ಳಿ ಸರ್ಕಲ್ ಬಳಿ ಬೈಕ್ ಸವಾರ ಹಾಗೂ ಕಾರಿನ ಚಾಲಕ ಮಧ್ಯೆ ಜಗಳವಾಗಿದೆ.ಆ ಕಾರಿನಲ್ಲಿ ಗೌವರ್ನಮೆಂಟ್ ಆಫ್ ಇಂಡಿಯಾ ಎಂದು ಬರೆಯಲಾಗಿದೆ. ಆದರೆ ಘಟನೆ ಬಳಿಕ ಬೈಕ್ ಸವಾರ ಹಾಗೂ ಕಾರಿನ ಚಾಲಕ ತೆರಳಿದ್ದಾರೆ. ಈ ಬಗ್ಗೆ ಯಾರೂ ಲಿಖಿತ ದೂರು ಕೊಟ್ಟಿಲ್ಲ. ಎಕ್ಸ್ ತಾಣದಲ್ಲಿ ದೂರು ಸಲ್ಲಿಕೆಯಾಗಿದೆ. ಇನ್ನು ಆ ಕಾರು ಸರ್ಕಾರಿ ವಾಹನವೇ ಎಂಬುದು ಖಚಿತವಾಗಿಲ್ಲ. ನೊಂದಣಿ ಸಂಖ್ಯೆ ಆಧರಿಸಿ ಕಾರು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಕಾರಿನ ಮೇಲೆ ಕೇಂದ್ರ ಸರ್ಕಾರ ಎಂದು ಬರೆಯಲಾಗಿದೆ.