ಸಾರಾಂಶ
ಗುಳೇದಗುಡ್ಡ: ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಹಾಗೂ ಸಾವಿತ್ರಿಭಾಯಿ ಪುಲೆ ಶಿಕ್ಷಕಿಯರ ಸಂಘದ ಆಶ್ರಯದಲ್ಲಿ ಪಟ್ಟಣದ ಸರಸ್ವತಿ ವಿದ್ಯಾಮಂದಿರದ ಸಭಾಭವನದಲ್ಲಿ ಶನಿವಾರ ಭಾಗೀರಥಿ ಆಲೂರ ಅವರ ನೆನಪಿನಂಗಳ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಬನ್ನಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ನಶಿಸಿ ಹೋಗುತ್ತಿಲ್ಲ. ಬದಲಾಗಿಭಾಷೆ ಪ್ರಬುದ್ಧವಾಗಿ ಬೆಳೆಯುತ್ತಿದೆ. ಭಾಷೆ, ಭಾವನೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಸಾಹಿತಿ ಚಂದ್ರಶೇಖರ ಹೆಗಡೆ ಪುಸ್ತಕ ಅವಲೋಕನ ಮಾಡಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಕನ್ನಡ ಭಾಷೆ, ಸಾಹಿತ್ಯ ನಶಿಸಿ ಹೋಗುತ್ತಿಲ್ಲ. ಬದಲಾಗಿಭಾಷೆ ಪ್ರಬುದ್ಧವಾಗಿ ಬೆಳೆಯುತ್ತಿದೆ. ಭಾಷೆ, ಭಾವನೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಟಿವಿ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ, ಭಾಷೆ ಹಾಳು ಮಾಡುತ್ತಿವೆ. ಭಾಷೆ ಸತ್ತರೆ ಒಂದು ಜನಾಂಗ ಸಂತ್ತಂತೆ ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಬನ್ನಿ ಹೇಳಿದರುಶನಿವಾರ ಪಟ್ಟಣದ ಸರಸ್ವತಿ ವಿದ್ಯಾಮಂದಿರದ ಸಭಾಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಹಾಗೂ ಸಾವಿತ್ರಿಭಾಯಿ ಪುಲೆ ಶಿಕ್ಷಕಿಯರ ಸಂಘದ ಆಶ್ರಯದಲ್ಲಿ ಭಾಗೀರಥಿ ಆಲೂರ ಅವರ ನೆನಪಿನಂಗಳ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತಿ ಚಂದ್ರಶೇಖರ ಹೆಗಡೆ ಪುಸ್ತಕ ಅವಲೋಕನ ಮಾಡಿ ಮಾತನಾಡಿ, ಕಾವ್ಯದ ಮೂಲಕ ಸಮಾಜ ಸಮಸ್ಸೆಗಳಿಗೆ ಉತ್ತರ ನೀಡಿದ್ದಾರೆ. ಇಲ್ಲಿನ ಕವಿತೆಗಳು ಬದುಕನ್ನು ಬದಲಿಸಿ ಸನ್ಮಾರ್ಗದಲ್ಲಿ ಹೋಗುವಂತೆ ಮಾಡುತ್ತವೆ ಎಂದರು.ಹನುಮಂತ ಮಾವಿನಮರ, ಸಾನ್ನಿಧ್ಯ ವಹಿಸಿದ್ದ ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಸ್ವಾಮೀಜಿ ಮಾತನಾಡಿದರು.
ಗುರುಬಸವ ದೇವರು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಕಸಾಪ ತಾಲೂಕಾಧ್ಯಕ್ಷ ಎಚ್.ಎಸ್. ಘಂಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಲವಾರು ಸಂಘ,ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಿಕ್ಷಕರು ಭಾಗೀರಥಿ ಆಲೂರ ಅವರನ್ನು ಸನ್ಮಾನಿಸಿ ಗೌರವಿಸಿದರು.ಮುಖ್ಯ ಅತಿಥಿಗಳಾಗಿ ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಜಮುನಾ ಸಿಂಗದ ಶಿಕ್ಷಣ ತಜ್ಞ ಡಾ.ವಿ.ಎ.ಬೆನಕನಾಳ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ವಿ.ಜಾಧವ, ಮುದ್ರಕ ಗಣೇಶ ರಾಜನಾಳ, ಕವಯತ್ರಿ ಭಾಗೀರಥಿ ಆಲೂರ, ಮೋಹನ ಕರನಂದಿ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಭಾಗೀರಥಿ ಆಲೂರ ಅವರ ನೆನಪಿನಂಗಳ ಕೃತಿಯನ್ನು ಜೆಡಿಎಸ್ ಮಲ್ಲಿಕಾರ್ಜುನ ಬನ್ನಿ ಬಿಡುಗಡೆಗೊಳಿಸಿದರು.