ಪ್ರೀತಿ ಇದ್ದಾಗ ಅನಾಥಾಶ್ರಮ, ವೃದ್ಧಾಶ್ರಮ ಅನಗತ್ಯ

| Published : Dec 25 2023, 01:31 AM IST / Updated: Dec 25 2023, 01:32 AM IST

ಪ್ರೀತಿ ಇದ್ದಾಗ ಅನಾಥಾಶ್ರಮ, ವೃದ್ಧಾಶ್ರಮ ಅನಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೀತಿ ಧಾರೆ ಎರೆಯುವ ಪತಿ, ಆಸರೆ ನೀಡುವ ಮಕ್ಕಳು ಇದ್ದಾಗ ಯಾವುದೇ ಅನಾಥಾಶ್ರಮವಾಗಲಿ, ವೃದ್ಧಾಶ್ರಮವಾಗಲಿ, ಮಹಿಳಾ ಸಾಂತ್ವನ ಕೇಂದ್ರದ ಅವಶ್ಯಕತೆ ಇರುವುದಿಲ್ಲ. ಪುರುಷರು ನಿಮ್ಮ ಪತ್ನಿ, ತಾಯಿ-ತಂದೆ, ಸಹೋದರಿಯರಿಗೆ ಏನೂ ಕೊಡದೇ ಇದ್ದರೂ ಚಿಂತೆಯಿಲ್ಲ, ಪ್ರೀತಿ, ಗೌರವ ನೀಡಿ ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ತಾಲೂಕಿನ ಬಿಸನಳ್ಳಿ ಗ್ರಾಮದ ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಸಾಮೂಹಿಕ ಇಷ್ಠಲಿಂಗ ಮಹಾಪೂಜೆಯ ೪ನೇ ದಿನದ ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿದರು.

ಋತು ಆಧಾರಿತ ಬೆಳೆ ಬೆಳೆಯುವ ಮೂಲಕ ಅಧಿಕ ಆದಾಯದ ಮೂಲವನ್ನು ಹೆಚ್ಚಿಸಿಕೊಂಡು, ಯಾವುದೇ ಸರ್ಕಾರಿ ನೌಕರರಿಗೆ ಕಡಿಮೇ ಇಲ್ಲದಂತೆ ಕೋಟಿ ರೂ. ಆದಾಯದ ಮೂಲವನ್ನು ಕಂಡುಕೊಂಡಿದ್ದೇನೆ. ಅದಲ್ಲದೇ ಶ್ರೀ ಗಂಧ ಬೆಳೆಯುವ ತರಬೇತಿ ಪಡೆದು, ದೇಶಾದ್ಯಂತ ಸಸಿಗಳನ್ನು ಮಾರಾಟ ಮಾಡುವ ಮೂಲಕ ಕೃಷಿ ಉದ್ಯಮಿಯಾಗಿ ಹೋರ ಹೊಮ್ಮಿದ್ದೇನೆ ಎಂದರು.

ಮಣ್ಣಿನಲ್ಲಿ ಮಣ್ಣಾಗಿ, ನನ್ನ ಬಣ್ಣವನ್ನು ಭೂಮಿತಾಯಿಗೆ ಧಾರೆ ಎರೆದು, ಭೂಮಿ ತಾಯಿಯ ಬಣ್ಣವನ್ನು ನಾನು ಪಡೆದ ಪ್ರತಿಫಲವಾಗಿ ಅನೇಕ ಪ್ರಶಸ್ತಿಗಳು ಒದಗಿ ಬಂದಿವೆ. ಈ ಗೌರವ ನಮ್ಮೆಲ್ಲ ಮಹಿಳೆಯರಿಗೆ ಲಭಿಸುವಂತಾಗಬೇಕು. ಮಹಿಳೆ ಅಬಲೆಯಲ್ಲ, ಸಬಲೆ ಎಂದು ನಿರೂಪಿಸಬೇಕು ಎಂದು ಹೇಳಿದರು.

ಬೆಂಗಳೂರ ವಿಭೂತಿಮಠದ ಡಾ. ಮಹಾಂತಲಿಂಗ ಶಿವಾಚಾರ್ಯರು ಮಾತನಾಡಿದರು.

ಕಾರ್ಯಕ್ರಮದಲ್ಲಿಲ್ಲಿ ಕೈಲಾಸ ಹಿರೇಮಠರಿಗೆ ಸೇವಾ ರತ್ನ ಪ್ರಶಸ್ತಿ, ಡಾ ನಾಗಪ್ಪ ಬಕ್ಕಣ್ಣವರರಿಗೆ ಧರ್ಮ ಪ್ರಕಾಶ ಪ್ರಶಸ್ತಿ ಹಾಗೂ ತೇಜೋಮಯಿ ಗದ್ದಿಯವರಿಗೆ ನಾಟ್ಯ ಮಯೂರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗುಳೇದಗುಡ್ಡದ ಡಾ. ನೀಲಕಂಠ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಶ್ರೀಗಳು ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾಡಿನ ಹರಗುರು ಚರಮೂರ್ತಿಗಳು, ಗಣ್ಯರು ಉಪಸ್ಥಿತರಿದ್ದರು. ಜ್ಯೋತಿ ವಸ್ತ್ರದಮಠ ಸ್ವಾಗತಿಸಿದರು. ಗಂಗೂಬಾಯಿ ದೇಸಾಯಿ ಹಾಗೂ ಸಿದ್ದಲಿಂಗೇಶ ಹಿರೇಮಠ ನಿರೂಪಿಸಿದರು.