ಕುಂದಾಪುರ ತಾಲೂರಿನ ಹೆನ್ನಾಬೈಲು ಎಂಬಲ್ಲಿ ಯಕ್ಷಗಾನ ಮೇಳವೊಂದರ ಪ್ರದರ್ಶನವೊಂದರ ನಡುವೆ ಶಿಳ್ಳೆ ಹೊಡೆದ ಪ್ರೇಕ್ಷಕರನ್ನು ಹಿರಿಯ ಕಲಾವಿದರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಉಡುಪಿ: ಇಲ್ಲಿನ ಕುಂದಾಪುರ ತಾಲೂರಿನ ಹೆನ್ನಾಬೈಲು ಎಂಬಲ್ಲಿ ಯಕ್ಷಗಾನ ಮೇಳವೊಂದರ ಪ್ರದರ್ಶನವೊಂದರ ನಡುವೆ ಶಿಳ್ಳೆ ಹೊಡೆದ ಪ್ರೇಕ್ಷಕರನ್ನು ಹಿರಿಯ ಕಲಾವಿದರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ರಂಗದಲ್ಲಿ ಹಿರಿಯ ಕಲಾವಿದ ಅಶೋಕ್ ಭಟ್ ಉಜಿರೆ ಅವರು ಕುಣಿಯುತಿದ್ದಾಗ ಭಾಗವತರ ಹಾಡುಗಾರಿಕೆಗೆ ಪ್ರೇಕ್ಷಕರಲ್ಲೊಬ್ಬರು ಪದೇಪದೆ ಶಿಳ್ಳೆ ಹಾಕುತಿದ್ದರು. ಹಾಡು ಮುಗಿದ ಮೇಲೆ ಅಶೋಕ್ ಭಟ್ ಉಜಿರೆ ಅವರು ಶಿಳ‍್ಳೆ ಹೊಡೆಯುತಿದ್ದ ವ್ಯಕ್ತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ವೇಷ ಧರಿಸಿ ಪಾಠ ಮಾಡಿದ್ದಕ್ಕೆ ಹಲವರಿಂದ ವಿರೋಧ ಕಲಾವಿದರು ಮಾಡಿದ್ದು ಸರೀನಾ ತಪ್ಪಾ ವ್ಯಾಪಕ ಚರ್ಚೆಅತ್ಯಂತ ಜನಪ್ರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಪರ ವಿರೋಧ ಚರ್ಚೆ ಯಕ್ಷಗಾನ ಪ್ರದರ್ಶನ ವೇಳೆ ಶಿಳ್ಳೆ ಹಾಕಿ ಸೌಜನ್ಯ ಮೀರಬೇಡಿ, ಭಾಗವತರ ಕಂಠವನ್ನು ಹಾಳು ಮಾಡಬೇಡಿ, ಇದು ಶ್ರೇಷ್ಠ ಕಲೆ, ನಮಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ ಎಂದು ಇಲ್ಲಿ ಬಂದು ಕುಣಿಯುತ್ತಿಲ್ಲ, ಇದೊಂದು ಆರಾಧನೆ, ನಿಮ್ಮಂಥ ಪ್ರೇಕ್ಷಕರ ಅಗತ್ಯ ಇಲ್ಲ, ಸುಮ್ಮನಿರುವುದಕ್ಕೆ ಸಾದ್ಯವಿಲ್ಲದಿದ್ದರೆ ಎದ್ದು ಹೋಗಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ವಿಡಿಯೋ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಪಾತ್ರಧಾರಿಯಾಗಿ ಕಲಾವಿದ ಮಾಡಿದ್ದು ಸರಿಯೋ ತಪ್ಪೊ ಎಂಬ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಯಕ್ಷಗಾನದಲ್ಲಿ ಪ್ರೇಕ್ಷಕರು ಮೆಚ್ಚುಗೆಯಿಂದ ಖುಶಿಯಿಂದ ಶಿಳ್ಳೆ ಹಾಕುವುದು ಮಾಮೂಲಿ, ಪ್ರೇಕ್ಷಕರಿಗೆ ಈ ರೀತಿ ಕಟ್ಟಪಾಡು ವಿಧಿಸುವುದು ಸರಿಯಲ್ಲ ಎಂಬ ವಾದವೂ ಆಗುತ್ತಿದೆ. ಪ್ರೇಕ್ಷಕರ ಕಲಾವಿದರ ಪ್ರದರ್ಶನಕ್ಕೆ ಭಂಗವಾಗುವಂತೆ ವರ್ತಿಸಬಾರದು ಎಂದೂ ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ.