ಇತಿಹಾಸ ಮರೆತವನು ಹೊಸ ಇತಿಹಾಸ ಸೃಷ್ಟಿಸಲಾರ: ವಸಂತ್ ಕುಮಾರ್

| Published : Jan 16 2024, 01:45 AM IST

ಇತಿಹಾಸ ಮರೆತವನು ಹೊಸ ಇತಿಹಾಸ ಸೃಷ್ಟಿಸಲಾರ: ವಸಂತ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಹಳೇಬೀಡು ಅಂದಿನ ದ್ವಾರಸಮುದ್ರ ಹೊಯ್ಸಳರ ರಾಜ್ಯಧಾನಿಯಾಗಿ ಮೆರೆದಂತಹ ಪ್ರಸಿಧ್ಧ ಸ್ಥಳವಾಗಿತ್ತು. ಇಂತಹ ವೈಭವಯುತ ಇತಿಹಾಸ ಮರೆಯಬಾರದು. ಇತಿಹಾಸ ಮರೆತವನು ಹೊಸ ಇತಿಹಾಸ ಸೃಷ್ಟಿಸಲಾರ ಎಂದು ಹಳೇಬೀಡಿನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಸಂತ್ ಕುಮಾರ್ ಅಭಿಪ್ರಾಯಪಟ್ಟರು. ಹಳೇಬೀಡಿನಲ್ಲಿ ಅವರು ಮಾತನಾಡಿದರು.

ಪ್ರಬಂಧ ಸ್ಪರ್ಧೆ । ಜಿಲ್ಲಾ ಮಟ್ಟದ ಇತಿಹಾಸದ ಸ್ಮಾರಕಗಳನ್ನು ಉಳಿಸಿ-ಬೆಳೆಸಿ ಎಂಬ ನಿಬಂಧ । ರಾಜ್ಯ ಪುರಾತತ್ವ ಇಲಾಖೆ ಆಯೋಜನೆ

ಕನ್ನಡಪ್ರಭ ವಾರ್ತೆ ಹಳೇಬೀಡು

ಇಂದಿನ ಹಳೇಬೀಡು ಅಂದಿನ ದ್ವಾರಸಮುದ್ರ ಹೊಯ್ಸಳರ ರಾಜ್ಯಧಾನಿಯಾಗಿ ಮೆರೆದಂತಹ ಪ್ರಸಿಧ್ಧ ಸ್ಥಳವಾಗಿತ್ತು. ಇಂತಹ ವೈಭವಯುತ ಇತಿಹಾಸ ಮರೆಯಬಾರದು. ಇತಿಹಾಸ ಮರೆತವನು ಹೊಸ ಇತಿಹಾಸ ಸೃಷ್ಟಿಸಲಾರ ಎಂದು ಹಳೇಬೀಡಿನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಸಂತ್ ಕುಮಾರ್ ಅಭಿಪ್ರಾಯಪಟ್ಟರು.

ರಾಜ್ಯ ಪುರಾತತ್ವ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಇತಿಹಾಸದ ಸ್ಮಾರಕಗಳನ್ನು ಉಳಿಸಿ-ಬೆಳೆಸಿ ಎಂಬ ಮಕ್ಕಳ ಪ್ರಬಂಧ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಈ ಸ್ಥಳ ಪುಣ್ಯದ ಸ್ಥಳವಾಗಿದೆ. ಇದು ಶ್ರೀ ಹೊಯ್ಸಳೇಶ್ವರ ದೇವಾಲಯದ ಒಂದು ಪವಿತ್ರವಾದ ಸ್ಥಳದಲ್ಲಿ ಹಲವಾರು ಅವಶೇಷಗಳು ಸಿಕ್ಕಿದೆ. ಏಕೆಂದರೆ ಹಳೇಬೀಡಿನಲ್ಲಿ ಯಾವುದೇ ಭಾಗದಲ್ಲೂ ತಳಹದಿ ಬಗೆದರೆ ದೇವಸ್ಥಾನಗಳ ಅವಶೇಷಗಳು ಸಿಗುತ್ತದೆ. ನಮ್ಮ ದೇಶದ ಸ್ಮಾರಕಗಳ ದೊಡ್ಡ ಸಂಪತ್ತಿನ ನಿಧಿ,ಹೊಯ್ಸಳರ ಇತಿಹಾಸದಲ್ಲಿ ಹೊಯ್ಸಳರ ದೇವಾಲಯಗಳು ಕರ್ನಾಟಕ ರಾಜ್ಯದಿಂದ ತಮಿಳನಾಡು, ಆಂಧ್ರದವರೆಗೂ ೧೪೦೦ ದೇವಾಲಯಗಳನ್ನು ನಿರ್ಮಾಣಗೊಂಡಿದೆ. ಅದರಲ್ಲಿ ಹಳೆಬೀಡು ರಾಜಧಾನಿ ದ್ವಾರಸಮುದ್ರ ಈ ಸ್ಥಳದಲ್ಲಿ ಧರ್ಮ ಅನುಸಾರವಾಗಿ ದೇವಾಲಯ ಕೆತ್ತಿನೆಯಾಗಿದೆ. ಹಳೇಬೀಡು ದೇವಾಲಯ ಶೈವ ಪದ್ಧತಿ, ಬಸ್ತಿಹಳ್ಳಿ ಜೈನ ಪದ್ಧತಿ ಇರುವ ದೇವಾಲಯ, ಬೇಲೂರು ಚೆನ್ನಕೇಶವ ವೈಷ್ಣವ ಪದ್ಧತಿರುವ ದೇವಾಲಯ ಇವರುಗಳು ಎಲ್ಲಾ ಧರ್ಮಗಳನ್ನು ಅನುಸರಿಸಿಕೊಂಡ ರಾಜರಾಗಿದ್ದರು. ಇವರಲ್ಲಿ ಮೂರನೇ ವೀರಬಲ್ಲಾಳ ಪ್ರಮುಖ ರಾಜನಾಗಿ ಇದ್ದವನು. ನಂತರ ಹೊಯ್ಸಳ ಸಾಮ್ರಾಜ್ಯ ಅಂತ್ಯ. ಪರಂಪರೆಯನ್ನು ಉಳಿಸಿ ಬೆಳೆಸಿ ಪರಂಪರೆ ಉಳಿಸಿದರೆ ಮುಂದಿನ ಸಾವಿರಾರು ವರ್ಷಗಳು ನೋಡಲು ಸಾಧ್ಯವಾಗಿದೆ ಆದಕಾರಣ ಮಕ್ಕಳಲ್ಲಿ ಸ್ಮಾರಕಗಳ ಬಗ್ಗೆ ಅಪಾರ ಗೌರವವನ್ನು ಉಳಿಸಿಕೊಳ್ಳಬೇಕು’ ಎಂದು ತಿಳಿಸಿದರು.

ರಾಜ್ಯ ಪುರಾತತ್ವ ಇಲಾಖೆಯ ಕ್ಯೊರೇಟರ್ ಕುಮಾರ್ ಮಾತನಾಡಿ, ‘ಪುಸ್ತಕಗಳ ಓದುವ ಹವ್ಯಾಸವನ್ನು ಬೆಳೆಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಸ್ಮಾರಕಗಳನ್ನು ಉಳಿಸಿದರೆ ನಮ್ಮ ದೇಶದ ಸಂಪತ್ತು ಈ ಸ್ಮಾರಕಗಳು. ಇವು ಸಾವಿರಾರು ವರ್ಷಗಳ ಹಳೆಯವು. ಇವುಗಳನ್ನು ನಾವು ಕಣ್ಣಲ್ಲಿ ನೋಡಲು ಆನಂದ ಪಡುತ್ತೇವೆ. ಅದೇ ರೀತಿ ಇಂದಿನ ಮಕ್ಕಳು ಸಹ ಮುಂದೆ ಪ್ರಜೆಗಳಾದ ನಂತರ ಈ ಸ್ಮಾರಕಗಳ ಬಗ್ಗೆ ಅಪಾರ ಗೌರವ ನೀಡಬೇಕು. ಸ್ಮಾರಕವನ್ನು ಉಳಿಸಿ ಬೆಳೆಸಿದರೆ ಮುಂದಿನ ಮಕ್ಕಳು ಸಹ ನೋಡಬಹುದು’ ಎಂದು ತಿಳಿಸಿದರು.

ಹಾಸನ ಜಿಲ್ಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಶೇಖರೇಗೌಡ ಮಾತನಾಡಿ, ‘ಪುರಾತತ್ವ ಇಲಾಖೆಯಿಂದ ಪ್ರತಿ ವರ್ಷವೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುತ್ತ ಬಂದಿದೆ. ಅದರಿಂದ ಮಕ್ಕಳಲ್ಲಿ ಜ್ಞಾನ ಅಭಿವೃದ್ದಿ ಹೆಚ್ಚು ಅನುಕೂಲವಾಗುತ್ತದೆ’ ಎಂದು ಮಕ್ಕಳಿಗೆ ತಿಳಿಸಿದರು.

ಹಳೇಬೀಡಿನ ಉಪಪ್ರಾಂಶುಪಾಲ ಮುಳ್ಳಯ್ಯ, ಕೇಂದ್ರ ಪುರಾತತ್ವ ಇಲಾಖೆಯ ಕುಮಾರಸ್ವಾಮಿ, ರಮೇಶ್, ಕೃಷ್ಣ, ಶಿಕ್ಷಣ ಇಲಾಖೆಯ ಶಿಕ್ಷಕ ವರ್ಗ ಹಾಗೂ ಮಕ್ಕಳು ಭಾಗವಹಿಸಿದ್ದರು.ಹಳೇಬೀಡಲ್ಲಿ ರಾಜ್ಯ ಪುರಾತತ್ವ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದ ಇತಿಹಾಸದ ಸ್ಮಾರಕಗಳನ್ನು ಉಳಿಸಿ-ಬೆಳೆಸಿ ಎಂಬ ಮಕ್ಕಳ ಪ್ರಬಂಧ ಸ್ಪರ್ಧೆಯಲ್ಲಿ ಹಳೇಬೀಡಿನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಸಂತ್ ಕುಮಾರ್ ಮತ್ತಿತರರಿದ್ದರು.