ಸಾರಾಂಶ
ಕಳೆದ ಸಲ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರಂಜಾನ್ ಆಚರಣೆ ಮಾಡಲಾಗಿತ್ತು. ಹಾಗಾದರೆ ಇದು ಮುಸ್ಲಿಂ ವಿಶ್ವವಿದ್ಯಾಲಯವೆ? ಜಿಲ್ಲಾ ಉಸ್ತುವಾರಿ ಸಚಿವರು ಹೋಗಿ ಕ್ಯಾಂಪಸ್ಸಲ್ಲೇ ನೌಕರರ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದರು, ಹಾಗಾದರೆ ಅದು ರಾಜಕೀಯ ಕೇಂದ್ರನಾ? ಎಂದು ಬಗಲಿ ಖಾರವಾಗಿ ಪ್ರಶ್ನಿಸಿ ಹೇಳಿಕೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಕಡಗಂಚಿ ಕೇಂದ್ರೀಯ ವಿವಿ ಮುಖ್ಯ ಕ್ಯಾಂಪಸ್ಸಲ್ಲಿ ರಂಜಾನ್, ಕ್ರಿಸ್ಮಸ್ ಆಚರಣೆಗಳನ್ನು ಮಾಡಲಾಗುತ್ತಿದೆ. ಇವಕ್ಕೆಲ್ಲ ಇಲ್ಲದ ವಿರೋಧ ಆರ್‌ಎಸ್‌ಎಸ್ ಗುರು ಪೂಜಾ ಉತ್ಸವಕ್ಕೆ ಮಾತ್ರ ಯಾಕೆ? ಎಂಬ ಪ್ರಶ್ನೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಎತ್ತಿದೆ.ಈ ಕುರಿತಂತೆ ಹೇಳಿಕೆ ನೀಡಿರುವ ಗುವಿವಿ ಸಂಶಧನಾ ವಿದ್ಯಾರ್ಥಿ ಹನುಮಂತ ಬಗಲಿ, ಕಳೆದ ಸಲ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರಂಜಾನ್ ಆಚರಣೆ ಮಾಡಲಾಗಿತ್ತು. ಹಾಗಾದರೆ ಇದು ಮುಸ್ಲಿಂ ವಿಶ್ವವಿದ್ಯಾಲಯವೆ? ಜಿಲ್ಲಾ ಉಸ್ತುವಾರಿ ಸಚಿವರು ಹೋಗಿ ಕ್ಯಾಂಪಸ್ಸಲ್ಲೇ ನೌಕರರ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದರು, ಹಾಗಾದರೆ ಅದು ರಾಜಕೀಯ ಕೇಂದ್ರನಾ? ಎಂದು ಬಗಲಿ ಖಾರವಾಗಿ ಪ್ರಶ್ನಿಸಿ ಹೇಳಿಕೆ ನೀಡಿದ್ದಾರೆ.
ಕ್ಯಾಂಪಸ್ಸಲ್ಲಿ ಕ್ರಿಶ್ಚಿಯನ್ ವಿದ್ಯಾರ್ಥಿಗಳು ಕ್ರಿಸ್ಮಸ್ ಆಚರಣೆ ಮಾಡಿದ್ದರು. ಹಾಗಾದರೆ ಇದು ಕ್ರಿಶ್ಚಿಯನ್ ವಿಶ್ವವಿದ್ಯಾಲಯನಾ? ಬೇರೆ ಬೇರೆ ಸಂಘಟನೆ ಅವರು ಬೇರೆ ಬೇರೆ ರೀತಿಯಾದ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಇದಕ್ಕೆಲ್ಲ ರಾಜಕೀಯ, ಕೋಮು ಬಣ್ಣ ಬಳಿಯೋದು ಸರಿಯಲ್ಲ.ಬಂಗಾಳಿ ದಿವಸ್. ಕ್ರಿಸ್ಮಸ್. ರಂಜಾನ್. ಡಾ. ಬಿ ಆರ್ ಅಂಬೇಡ್ಕರ್ ಅವರ ಕಾರ್ಯಕ್ರಮ. ಬಸವಣ್ಣನವರ ಕಾರ್ಯಕ್ರಮ. ಸಾಂಸ್ಕೃತಿಕ ಕಾರ್ಯಕ್ರಮಗಳು. ಹೋಳಿ. ಹೀಗೆ ದಿನನಿತ್ಯ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ . ಈ ಎಲ್ಲ ಕಾರ್ಯಕ್ರಮಗಳಿಗೆ ಇಲ್ಲದ ವಿರೋಧ ಗುರು ಪೂಜಾ ಉತ್ಸವಕ್ಕೆ ಮಾತ್ರ ಏಕೆ? ಎಂದು ಹನುಮಂತ ಬಗಲಿ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಅಷ್ಟಕ್ಕೂ ಆರ್‌ಎಸ್‌ಎಸ್ ಎಂಬುದು ದೇಶದಲ್ಲಿ ಬ್ಯಾನ್ ಇದೆಯೇನು? ಕೇಂದೀಯ ವಿವಿಯಲ್ಲಿ ಯಾಕೆ ಮಾಡಬಾರದು? ಗುರು ಪೂಜೆ ಉತ್ಸವ ಅನ್ನೋದು ಭಾರತದ ಪರಂಪರೆಯಲ್ಲಿ ಇದೆ. ಇದನ್ನ ಗುರು ಶಿಷ್ಯರ ಸಂಬಂಧದ ಅರ್ಥವಾಗಿ ಮಾಡುವ ಕಾರ್ಯಕ್ರಮವಾಗಿದೆ. ಇದನ್ನು ಶಿಕ್ಷಣ ಕೇಂದ್ರಗಳಲ್ಲಿ ಮಾಡುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಶಿಕ್ಷಕರ. ಮೇಲಿರುವ ಗೌರವದ ಹೆಚ್ಚಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರದೇ ಆದ ಧಾರ್ಮಿಕ ಸ್ವಾತಂತ್ರ್ಯ ಇದೆ. ಕಾರ್ಯಕ್ರಮಗಳನ್ನು ಮಾಡಲು ಅವಕಾಶವಿದೆ ಕಾರ್ಯಕ್ರಮ ಮಾಡಿದ್ದಾರೆ.
ಬುದ್ಧಿಜೀವಿಗಳು. ರಾಜಕಾರಣಿಗಳು. ಜಿಲ್ಲೆಯಲ್ಲಿ ಶೈಕ್ಷಣಿಕ ಅನೇಕ ಸಮಸ್ಯೆಗಳಿವೆ ಅದರ ಕುರಿತು ಚರ್ಚೆ ಮಾಡಿ. ಈ ಭಾಗದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿ, ಇದನ್ನೆಲ್ಲ ಬಿಟ್ಟು ಇಲ್ಲ ಸಲ್ಲದ ಸಂಗತಿಗಳನ್ನೇ ದೊಡ್ಡದು ಮಾಡಿ ಹೇಳಿಕೆ ನೀಡುತ್ತ ಕೆಸರು ಎರಚೋದನ್ನ ಬಿಡಲಿ ಎಂದು ಹನುಮಂತ ಬಗಲಿ ಕಿವಿಮಾತು ಹೇಳಿದ್ದಾರೆ.