ಮಾಯಕೊಂಡಕ್ಕೆ ಕೈಗಾರಿಕೆ, ಶಿಕ್ಷಣ ಸಂಸ್ಥೆ ಏಕೆ ತರಲಿಲ್ಲ: ವಿನಯಕುಮಾರ್ ಪ್ರಶ್ನೆ

| Published : Apr 30 2024, 02:11 AM IST

ಮಾಯಕೊಂಡಕ್ಕೆ ಕೈಗಾರಿಕೆ, ಶಿಕ್ಷಣ ಸಂಸ್ಥೆ ಏಕೆ ತರಲಿಲ್ಲ: ವಿನಯಕುಮಾರ್ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಯಕೊಂಡ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಏಕೆ ತರಲು ಆಗಿಲ್ಲ. 30 ವರ್ಷಗಳ ಕಾಲ ಅಧಿಕಾರ ಅನುಭವಿಸಿದರೆ ಜನಸೇವೆ ಏಕೆ ಮಾಡಲಿಲ್ಲ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಕೇಳಬೇಕಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಪ್ರಶ್ನಿಸಿದ್ದಾರೆ.

ದಾವಣಗೆರೆ: ಮಾಯಕೊಂಡ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಏಕೆ ತರಲು ಆಗಿಲ್ಲ. 30 ವರ್ಷಗಳ ಕಾಲ ಅಧಿಕಾರ ಅನುಭವಿಸಿದರೆ ಜನಸೇವೆ ಏಕೆ ಮಾಡಲಿಲ್ಲ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಕೇಳಬೇಕಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಪ್ರಶ್ನಿಸಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೋಳಹುಣಸೆ, ಹಿರೇತೊಗಲೇರಿ, ಚಿಕ್ಕತೊಗಲೇರಿ, ಅತ್ತಿಗೆರೆ, ರಾಮಗೊಂಡನಹಳ್ಳಿ, ದ್ಯಾಮೇನಹಳ್ಳಿ, ಕಂದಗಲ್ಲು, ಮಾಯಕೊಂಡ ಇತರೆ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಅವರು, ಮಾಯಕೊಂಡ ಕ್ಷೇತ್ರವು ಇಷ್ಟೊತ್ತಿಗೆ ಅಭಿವೃದ್ಧಿ ಆಗಿರಬೇಕಿತ್ತು. ಜನರಿಗೆ ಉದ್ಯೋಗ ನೀಡುವಂಥ ಕೈಗಾರಿಕೆಗಳು ಬಂದಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂಥ ಶಿಕ್ಷಣ ಸಂಸ್ಥೆಗಳು ಬಂದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವೂ ಆಗಿಲ್ಲ ಎನಿಸುತ್ತದೆ ಎಂದರು.

ನೂರಾರು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಹಳ್ಳಿಗಳಲ್ಲಿ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ಅರಿಯುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಹಳ್ಳಿಗಳಿಗೆ ಅಭಿವೃದ್ಧಿ ತರಬೇಕಿದೆ. ಕುಟುಂಬ ರಾಜಕಾರಣ ಅಂತ್ಯ ಆಗಬೇಕಾದರೆ ಈ ಚುನಾವಣೆಯಲ್ಲಿ ಗ್ಯಾಸ್ ಸಿಲಿಂಡರ್‌ಗೆ ಮತ ನೀಡಿ. ಹಳ್ಳಿ ಹುಡುಗ, ಸಾಮಾನ್ಯ ವ್ಯಕ್ತಿ, ಬಡತನ, ಹಸಿವಿನ ನೋವು ಅರ್ಥ ಮಾಡಿಕೊಂಡ ಅಭ್ಯರ್ಥಿಯನ್ನು ಲೋಕಸಭೆಗೆ ಕಳಿಸಿದರೆ ನಿಮಗೆ ಪುಣ್ಯ ಬರುತ್ತದೆ ಎಂದು ಹೇಳಿದರು.

- - - -29ಕೆಡಿವಿಜಿ41ಃ: