ಸಾರಾಂಶ
ಕಷ್ಟಪಟ್ಟು ಬೆಳೆದ ಫಸಲು ಕಾಡು ಹಂದಿಗಳ ದಾಳಿಗೆ ಹಾನಿಯಾಗಿರುವುದನ್ನು ಕಂಡು ಮರುಕ ವ್ಯಕ್ತಪಡಿಸಿದ ಮಕ್ಕಳು. ತಾಲೂಕಿನ ಪಳನಿಮೇಡು ಗ್ರಾಮದ ರೈತ ಪೆರುಮಾಳ್ ತಮ್ಮ ಒಂದು ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಫಸಲನ್ನು ಹಾಕಿದ್ದು, ತೆನೆ ಕಟ್ಟಿ ಕಾಳು ಕಟ್ಟುವ ಸಮಯದಲ್ಲಿ ಕಾಡು ಹಂದಿಗಳ ಹಿಂಡು ಹಿಂಡಾಗಿ ರಾತ್ರಿ ವೇಳೆ ಜಮೀನಿಗೆ ನುಗ್ಗಿ ಅಪಾರ ಪ್ರಮಾಣವಾದ ಬೆಳೆಯನ್ನು ತಿಂದು ತುಳಿದು ಹಾನಿ ಮಾಡಿರುವುದನ್ನು ಕಂಡ ಮಕ್ಕಳು ಮರುಕ ವ್ಯಕ್ತಪಡಿಸಿದರು. ರೈತನ ಬೆಳೆದ ಫಸಲಿಗೆ ಕಾಡು ಹಂದಿಗಳ ಕಾಟ ಉಪಟಳವನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ, ಹನೂರು
ಕಷ್ಟಪಟ್ಟು ಬೆಳೆದ ಫಸಲು ಕಾಡು ಹಂದಿಗಳ ದಾಳಿಗೆ ಹಾನಿಯಾಗಿರುವುದನ್ನು ಕಂಡು ಮರುಕ ವ್ಯಕ್ತಪಡಿಸಿದ ಮಕ್ಕಳು. ತಾಲೂಕಿನ ಪಳನಿಮೇಡು ಗ್ರಾಮದ ರೈತ ಪೆರುಮಾಳ್ ತಮ್ಮ ಒಂದು ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಫಸಲನ್ನು ಹಾಕಿದ್ದು, ತೆನೆ ಕಟ್ಟಿ ಕಾಳು ಕಟ್ಟುವ ಸಮಯದಲ್ಲಿ ಕಾಡು ಹಂದಿಗಳ ಹಿಂಡು ಹಿಂಡಾಗಿ ರಾತ್ರಿ ವೇಳೆ ಜಮೀನಿಗೆ ನುಗ್ಗಿ ಅಪಾರ ಪ್ರಮಾಣವಾದ ಬೆಳೆಯನ್ನು ತಿಂದು ತುಳಿದು ಹಾನಿ ಮಾಡಿರುವುದನ್ನು ಕಂಡ ಮಕ್ಕಳು ಮರುಕ ವ್ಯಕ್ತಪಡಿಸಿದರು. ರೈತನ ಬೆಳೆದ ಫಸಲಿಗೆ ಕಾಡು ಹಂದಿಗಳ ಕಾಟ ಉಪಟಳವನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ.ಸೂಕ್ತ ಪರಿಹಾರಕ್ಕೆ ಒತ್ತಾಯ:ಕಾಡು ಹಂದಿಗಳ ಹಾವಳಿಯಿಂದ ಪಳನಿ ಮೇಡು ಗ್ರಾಮದ ರೈತರ ಜಮೀನುಗಳಲ್ಲಿ ಕಾಡು ಹಂದಿಗಳ ಹಿಂಡು ಫಸಲನ್ನು ನಾಶಗೊಳಿಸಿವೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ, ನಷ್ಟ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಕಾಡುಪ್ರಾಣಿಗಳ ಉಪಟಳವನ್ನು ತಪ್ಪಿಸಲು ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.