ನಿರಂತರವಾಗಿ ಕಾಡುಪ್ರಾಣಿಗಳು ಈ ಭಾಗದಲ್ಲಿ ದಿನನಿತ್ಯ ರೈತರ ಜಮೀನುಗಳಲ್ಲಿ ಬೆಳೆಯಲಾಗಿರುವ ಫಸಲುಗಳನ್ನು ತಿಂದು ನಾಶಪಡಿಸುತ್ತಿವೆ, ಹೀಗಾಗಿ ಅರಣ್ಯ ಅಧಿಕಾರಿಗಳು ರೈತರ ಜಮೀನಿಗೆ ಪ್ರಾಣಿಗಳು ಬರದಂತೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಸಂಘಟನೆಯ ಜೊತೆಗೂಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಮುಖಂಡ ಶ್ರೀನಿವಾಸ್ ಮತ್ತು ಪ್ರಕಾಶ್ ರಘು ಕಾಳಪ್ಪ ವೆಂಕಟೇಶ್ ಜಯರಾಜ್ ಮುಂತಾದವರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹನೂರು
ಕಾಡು ಹಂದಿಗಳ ಹಾವಳಿಗೆ ಮುಸುಕಿನ ಜೋಳದ ಫಸಲು ಹಾನಿಯಾಗಿರುವ ಘಟನೆ ತಾಲೂಕಿನ ಎಂ.ಟಿ. ದೊಡ್ಡಿ ಗ್ರಾಮದಲ್ಲಿನಡೆದಿದೆ. ಗ್ರಾಮದ ರೈತ ಪುಟ್ಟಸ್ವಾಮಿ ಬಿನ್ ಕಾಳೇಗೌಡ ಅವರಿಗೆ ಸೇರಿದ ಸರ್ವೇ ನಂಬರ್ 294ರಲ್ಲಿ 1.5 ಎಕರೆ ಜಮೀನಿನಲ್ಲಿ ಮುಸುಕಿನ ಜೋಳದ ಫಸಲನ್ನು ಬೆಳೆಯಲಾಗಿತ್ತು. ಬುಧವಾರ ತಡರಾತ್ರಿ 50ಕ್ಕೂ ಹೆಚ್ಚು ಕಾಡು ಹಂದಿಗಳು ಜಮೀನಿನಲ್ಲಿ ದಾಳಿ ನಡೆಸಿ ಹುಲುಸಾಗಿ ಬೆಳೆದಿದ್ದ ಮುಸುಕಿನ ಜೋಳದ ಫಸಲನ್ನು ತಿಂದು ಹಾಳು ಮಾಡಿ ನಷ್ಟ ಉಂಟು ಮಾಡಿದ್ದು, ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ನಷ್ಟ ಪರಿಹಾರಕ್ಕೆ ಒತ್ತಾಯ: ಮಳೆ ಇಲ್ಲದೆ ಬಿರುಬಿಸಿಲಿನಿಂದ ತತ್ತರಿಸಿರುವ ರೈತರು, ಅಲ್ಪ ಸ್ವಲ್ಪ ನೀರಿನಲ್ಲಿ ಒಂದೂವರೆ ಎಕರೆ ಜಮೀನಿನಲ್ಲಿ ಮುಸುಕಿನ ಜೋಳವನ್ನು ಸಾಲ ಮಾಡಿ ಬೆಳೆದಿದ್ದರು. ತಡರಾತ್ರಿ ಕಾಡು ಹಂದಿಗಳ ದಾಳಿಯಿಂದ ಮುಸುಕಿನ ಜೋಳದ ಫಸಲು ಸಂಪೂರ್ಣ ಹಾನಿಗೊಳಗಾಗಿದೆ, ಈ ಬಗ್ಗೆ ಅರಣ್ಯ ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡಿ ನಷ್ಟದ ಅಂದಾಜು ಪಟ್ಟಿ ತಯಾರಿಸಿ, ರೈತನಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.ಕಾಡು ಪ್ರಾಣಿಗಳ ತಡೆಗಟ್ಟಲು ಅಗ್ರಹ: