- ಅಗ್ನಿಶಾಮಕ ದಳ ಸಿಬ್ಬಂದಿ ತುರ್ತು ಸ್ಪಂದನೆಗೆ ಮೆಚ್ಚುಗೆ

---

ಕನ್ನಡಪ್ರಭ ವಾರ್ತೆ ಹನೂರು

30 ಅಡಿ ಅಗಲ, 70 ಅಡಿ ಆಳದ ಬಾವಿಯಲ್ಲಿ ಬಿದ್ದಿದ್ದು, ಒದ್ದಾಡುತ್ತಿದ್ದ ಕಾಡುಹಂದಿಯನ್ನು ಇಲ್ಲಿನ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿ ಮೇಲೆತ್ತಿ, ರಕ್ಷಿಸಿರುವ ಘಟನೆ ಹನೂರು ತಾಲೂಕಿನಲ್ಲಿ ಭಾನುವಾರ ನಡೆದಿದೆ.

ತಾಲೂಕಿನ ವೈಶಂ ಪಾಳ್ಯ ಗ್ರಾಮದ ರೈತ ಲಿಂಗರಾಜು ಎಂಬುವರಿಗೆ ಸೇರಿದ ಜಮೀನಿನಲ್ಲಿ 30 ಅಡಿ ಅಗಲ, 70 ಅಡಿ ಆಳದ ತೋಡುಬಾವಿ ಇದ್ದು, ಈ ಬಾವಿಗೆ ಕಾಡು ಹಂದಿ ಬಿದ್ದಿದೆ. ಸ್ಥಳೀಯರು ಕಾಡುಹಂದಿಯನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ಕೊಟ್ಟಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿಯ ಯಶಸ್ವಿ ಕಾರ್ಯಾಚರಣೆಯ ಫಲವಾಗಿ ಕಾಡು ಹಂದಿಯನ್ನು ಮೇಲೆತ್ತಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಮಹೇಶ್‌ ಮತ್ತು ಸಿಬ್ಬಂದಿ ಪೆರಿಯ ನಾಯಕ, ಹರ್ಷ, ಮಹೇಶ್‌ ಕುಮಾರ್‌, ಲೋಕೇಶ್‌ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಚಿನ್ನಸ್ವಾಮಿ, ಲಾಯಪ್ಪ, ನಂದೀಶ್‌, ನಿಂಗರಾಜು, ಅಭಿಕೃಷ್ಣ ಉಪಸ್ಥಿತರಿದ್ದರು.


---

22ಸಿಎಚ್ಎನ್‌14

ವೈಶಂಪಾಳ್ಯದಲ್ಲಿ ಯಶಸ್ವಿ ಕಾಡುಹಂದಿ ರಕ್ಷಣೆ