ಕಾಡುಹಂದಿ ಉಪಟಳ: ಕಂಗೆಟ್ಟ ಬೆಳೆಗಾರ

| Published : Dec 23 2023, 01:45 AM IST

ಸಾರಾಂಶ

ರಾತ್ರಿ ಹೊತ್ತಿನಲ್ಲಿ ಗದ್ದೆಗಳಿಗೆ ನುಗ್ಗುವ ಕಾಡು ಹಂದಿಗಳು ಬೆಳೆಯನ್ನು ತಿಂದು ಧ್ವಂಸ ಮಾಡುತ್ತಿದ್ದು, ಕಷ್ಟ ಪಟ್ಟು ಬೆಳೆದು ನಿಂತ ಫಸಲು ಕೈಗೆ ಬಂದ ತುತ್ತು ಬಾಯಿಗೆ ಸಿಕ್ಕ ದಂತಾಗಿದೆ ಎಂದು ಬೆಳೆಗಾರರು ಅಲವತ್ತುಗೊಂಡಿದ್ದಾರೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಪೋಕ್ಲು ವ್ಯಾಪ್ತಿಯಲ್ಲಿ ಭತ್ತದ ಬೆಳೆಯ ಕಟಾವಿನ ಹಂತದಲ್ಲಿ ಬೆಳೆಗಾರರು ಕಾಡು ಹಂದಿಗಳ ಉಪಟಳದಿಂದ ಕಂಗೆಟ್ಟಿದ್ದಾರೆ.

ಈಗಾಗಲೇ ಬೆಳೆಗಾರರ ಕೃಷಿಭೂಮಿಯನ್ನು ಕಾಡು ಹಂದಿಗಳು ಅಷ್ಟಾಗಿ ಬಾಧಿಸಿಲ್ಲ. ಆದರೆ ಕೆಲವು ಕಾರಣದಿಂದಾಗಿ

ಅಲ್ಲಲ್ಲಿ ಕೊಯ್ಲು ಮಾಡದೆ ಬಾಕಿ ಉಳಿದಿರುವ ಗದ್ದೆಗಳಿಗೆ ಹಂದಿಗಳು ನಿರಂತರ ಗುಂಪು ಗುಂಪಾಗಿ ದಾಳಿ ಮಾಡುತ್ತಿದ್ದು

ಬೆಳೆಗಾರರು ಕಾಡು ಹಂದಿಗಳ ಉಪಟಳದಿಂದ ಚಿಂತಿತರಾಗಿದ್ದಾರೆ.

ಮಳೆ ಹಾಗೂ ಮೋಡ ವಾತಾವರಣದಿಂದಾಗಿ ಬೆಳೆ ಕೊಯ್ಲು ವಿಳಂಬವಾಗಿತ್ತು. ಇದೀಗ ಕಾಡು ಹಂದಿಗಳು ಇಳುವರಿಯನ್ನು ಸಂಪೂರ್ಣ ತಿಂದು ನಾಶಪಡಿಸುತ್ತಿವೆ.

ರಾತ್ರಿ ಹೊತ್ತಿನಲ್ಲಿ ಗದ್ದೆಗಳಿಗೆ ನುಗ್ಗುವ ಕಾಡು ಹಂದಿಗಳು ಬೆಳೆಯನ್ನು ತಿಂದು ಧ್ವಂಸ ಮಾಡುತ್ತಿದ್ದು, ಕಷ್ಟ ಪಟ್ಟು ಬೆಳೆದು ನಿಂತ ಫಸಲು ಕೈಗೆ ಬಂದ ತುತ್ತು ಬಾಯಿಗೆ ಸಿಕ್ಕ ದಂತಾಗಿದೆ ಎಂದು ಬೆಳೆಗಾರರು ಅಲವತ್ತುಗೊಂಡಿದ್ದಾರೆ.

ಇಲ್ಲಿಗೆ ಸಮೀಪದ ಹಳೆ ತಾಲೂಕಿನ ಬೋಪ್ಪಂಡ ಕಾಶಿ ನಂಜಪ್ಪ ಹಿರಿಯರ ಕಾಳದಿಂದಲೂ ನಿರಂತರ ಭತ್ತದ ಬೇಸಾಯ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಪ್ರತಿ ವರ್ಷ ನಾಟಿ ಓಟ ಸ್ಪರ್ಧೆಯನ್ನು ಏರ್ಪಡಿಸುತ್ತಿರುವ ಈ ಗದ್ದೆಯ

ಎಕರೆಗಟ್ಟಲೆ ಭತ್ತದ ಇಳುವರಿ ಹಂದಿಗಳ ಉದರ ಸೇರಿ ನಾಶವಾಗಿವೆ.

---------------------

ರೈತರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ.ಇದೀಗ ಕೊಯ್ಲಿನ ಅವಧಿಯಲ್ಲಿ ಕಾಡುಹಂದಿಗಳ ಉಪಟಳ ವಿಪರೀತವಾಗಿದೆ. ಉಪಟಳ ತಡೆಯಲು ಸಾಧ್ಯವಾಗುತ್ತಿಲ್ಲ. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಿ ಸರ್ಕಾರ ರಕ್ಷಣೆಗೆ ಮುಂದಾಗಬೇಕು.

-ಕಾಶಿ ನಂಜಪ್ಪ, ಭತ್ತದ ಬೆಳೆಗಾರ.