ಸಾರಾಂಶ
ಚನ್ನಪಟ್ಟಣ: ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು ಗುರುವಾರ ಕೋಡಂಬಳ್ಳಿ ಕೆರೆಯಲ್ಲಿ ೫ ಆನೆಗಳ ಹಿಂಡು ಪ್ರತ್ಯಕ್ಷಗೊಂಡು ಜಲಕ್ರೀಡೆಯಲ್ಲಿ ತೊಡಗಿದ್ದವು.
ಚನ್ನಪಟ್ಟಣ: ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು ಗುರುವಾರ ಕೋಡಂಬಳ್ಳಿ ಕೆರೆಯಲ್ಲಿ ೫ ಆನೆಗಳ ಹಿಂಡು ಪ್ರತ್ಯಕ್ಷಗೊಂಡು ಜಲಕ್ರೀಡೆಯಲ್ಲಿ ತೊಡಗಿದ್ದವು.
ಕಳೆದೊಂದು ವಾರದಿಂದ ತಾಲೂಕಿನಲ್ಲಿ ಆನೆಗಳ ಹಾವಳಿ ತೀವ್ರಗೊಂಡಿದೆ. ಚಕ್ಕೆರೆ, ಸಂತೆಮೊಗೇನಹಳ್ಳಿಯಲ್ಲಿ ಆನೆಗಳು ಪ್ರತ್ಯಕ್ಷಗೊಂಡಿದ್ದವು. ಈಗ ಕೋಡಂಬಳ್ಳಿ ಕೆರೆಯಲ್ಲಿ ಜಲಕ್ರೀಡೆ ನಡೆಸಿವೆ. ಮಂಗಳವಾರವಷ್ಟೇ ತಾಲೂಕಿನ ಸಂತೆಮೊಗೇಹಳ್ಳಿ ಕೆರೆಯಲ್ಲಿ ಎರಡು ಆನೆಗಳು ಪ್ರತ್ಯಕ್ಷಗೊಂಡಿದ್ದವು. ಇವುಗಳ ಜತೆಗೆ ಇನ್ನು ಮೂರು ಆನೆಗಳನ್ನು ಸೇರಿಸಿ ಕಬ್ಬಾಳು ಅರಣ್ಯ ಪ್ರದೇಶಕ್ಕೆ ಅರಣ್ಯಾಧಿಕಾರಿಗಳು ಹಿಮ್ಮಟ್ಟಿಸಿದ್ದರು. ಕಬ್ಬಾಳು ಅರಣ್ಯ ಪ್ರದೇಶದಿಂದ ಹಿಂದಿರುಗಿರುವ ಆನೆಗಳು ಕೋಡಂಬಳ್ಳಿ ಕೆರೆಯಲ್ಲಿ ಪ್ರತ್ಯಕ್ಷವಾಗಿವೆ.ಆನೆಗಳು ಕೆರೆಯಲ್ಲಿ ಬೀಡುಬಿಟ್ಟಿರುವ ವಿಚಾರ ತಿಳಿದು ನೂರಾರು ಜನ ಕೆರೆಯ ಸುತ್ತಾ ಜಮಾಯಿಸಿದ್ದರು. ಕೆಲವರು ಆನೆಗಳ ಪೊಟೋ ವಿಡಿಯೋ ತೆಗೆಯುವ ದೃಶ್ಯ ಸಾಮಾನ್ಯವಾಗಿತ್ತು. ಆನೆಗಳನ್ನು ರಾತ್ರಿ ಕಬ್ಬಾಳು ಅರಣ್ಯ ವ್ಯಾಪ್ತಿಗೆ ಡ್ರೈವ್ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪೊಟೋ೬ಸಿಪಿಟಿ೨: ತಾಲೂಕಿನ ಕೋಡಂಬಳ್ಳಿ ಕೆರೆಯಲ್ಲಿ ಆನೆಗಳು ಬೀಡುಬಿಟ್ಟಿರುವುದು.