ಸಾರಾಂಶ
ಕಾಫಿ ತೋಟಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಬೆಳೆಗಾರ ನಾಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಇಂದು ಬೆಳಗ್ಗೆ ಕಾಫಿ ತೋಟಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತೋಟದ ಮಾಲೀಕ ನಾಗೇಶ್ ಮೇಲೆ 6 ಕಾಡಾನೆಗಳ ಗುಂಪೊಂದು ಹಠಾತ್ ದಾಳಿ ನಡೆಸಿ, ವಾಹನದ ಸಮೇತ ಅವರನ್ನು ಎಸೆದು ಬೈಕಿನ ಮೇಲೆ ದಾಳಿ ನಡೆಸಿ ಜಖಂ ಮಾಡಿದೆ. ಕೂಡಲೇ ನಾಗೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೇಲೂರು: ಕಾಫಿ ತೋಟಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಬೆಳೆಗಾರ ನಾಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಇಂದು ಬೆಳಗ್ಗೆ ಕಾಫಿ ತೋಟಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತೋಟದ ಮಾಲೀಕ ನಾಗೇಶ್ ಮೇಲೆ 6 ಕಾಡಾನೆಗಳ ಗುಂಪೊಂದು ಹಠಾತ್ ದಾಳಿ ನಡೆಸಿ, ವಾಹನದ ಸಮೇತ ಅವರನ್ನು ಎಸೆದು ಬೈಕಿನ ಮೇಲೆ ದಾಳಿ ನಡೆಸಿ ಜಖಂ ಮಾಡಿದೆ. ಅದೃಷ್ಟವಶಾತ್ ದ್ವಿಚಕ್ರ ವಾಹನದಿಂದ ಕೇವಲ ೫ ಅಡಿ ದೂರದಲ್ಲಿ ಬಿದ್ದ ನಾಗೇಶ್ ಅವರಿಗೆ ಪಕ್ಕೆಲುಬು ಬಲ ಭಾಗದ ಕಾಲಿಗೆ ಸೇರಿ ಇನ್ನಿತರ ಭಾಗಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕೂಡಲೇ ನಾಗೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.