ಚನ್ನಪಟ್ಟಣ: ರೈತರ ಜಮೀನಿಗೆ ನುಗ್ಗಿರುವ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ಹರಿಸಂದ್ರ ಮತ್ತು ನೀಲಸಂದ್ರ ಗ್ರಾಮದಲ್ಲಿ ನಡೆದಿದೆ.
ಚನ್ನಪಟ್ಟಣ: ರೈತರ ಜಮೀನಿಗೆ ನುಗ್ಗಿರುವ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ಹರಿಸಂದ್ರ ಮತ್ತು ನೀಲಸಂದ್ರ ಗ್ರಾಮದಲ್ಲಿ ನಡೆದಿದೆ. ಹರಿಸಂದ್ರ ಗ್ರಾಮದ ರಮೇಶ್, ನೀಲಸಂದ್ರ ಗ್ರಾಮದ ದೊಡ್ಡ ಸಿದ್ದಯ್ಯ ಮತ್ತು ಹಾಗೂ ವೆಂಕಟೇಶ್ ಎಂಬುವವರ ಜಮೀನಿಗೆ ನುಗ್ಗಿರುವ ಕಾಡಾನೆಗಳ ಹಿಂಡು ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳನ್ನು ಧ್ವಂಸಗೊಳಿಸಿವೆ. ಹರಿಸಂದ್ರ ಗ್ರಾಮದ ರಮೇಶ ಜಮೀನಿನಲ್ಲಿ ಬೆಳೆದಿದ್ದ ಸೌತೆ, ಬಾಳೆ ನೀಲಸಂದ್ರ ಗ್ರಾಮದ ದೊಡ್ಡ ಸಿದ್ದಯ್ಯನವರ ಜಮೀನಿನಲ್ಲಿದ್ದ ಟೊಮೊಟೋ ಮತ್ತು ರಾಗಿಮೆದೆ ಹಾಗೂ ವೆಂಕಟೇಶ್ ಜಮೀನಿನಲ್ಲಿದ್ದ ರಾಗಿ, ಜೋಳ ಮುಂತಾದ ಫಸಲನ್ನು ನಾಶ ಮಾಡಿವೆ. ಈ ಭಾಗದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ರೈತರು ಕಂಗಲಾಗಿದ್ದಾರೆ. ಅರಣ್ಯ ಇಲಾಖೆಯವರು ಬೆಳೆನಷ್ಟಕ್ಕೆ ನೀಡುವ ಪರಿಹಾರ ಯಾವುದಕ್ಕೂ ಸಾಲದಾಗಿದೆ. ನಷ್ಟಕ್ಕೊಳಗಾದ ರೈತರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ..