ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ನಲ್ಲಿಕತ್ರಿ ಸಮೀಪ ಕಾಡಾನೆ ದಾಳಿ ನಡೆಸಿ ಓರ್ವ ಸ್ಥಳದಲ್ಲಿ ಸಾವನಪ್ಪಿದ್ದು, ಮತ್ತೋರ್ವ ಪಾರಾಗಿದ್ದಾನೆ. ಮತ್ತೊಂದೆಡೆ ಚಿರತೆ ಉಪಟಳದಿಂದ ಹೈರಾಣಾದ ಗ್ರಾಮಸ್ಥರು ಭಯದ ವಾತಾವರಣದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂಬೆಗಲ್ಲು ಗ್ರಾಮದ ಕೇತೇಗೌಡ (75) ಕಾಡಾನೆ ದಾಳಿಯಿಂದ ಸ್ಥಳದಲ್ಲಿ ಮೃತಪಟ್ಟ ದುರ್ದೈವಿ. ಮತ್ತೋರ್ವ ವೀರೇಗೌಡ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಜರುಗಿದೆ.ಘಟನೆಯ ವಿವರ:
ಕಾಡಾನೆ ದಾಳಿಯಿಂದ ಮೃತಪಟ್ಟ ಕೇತೇಗೌಡ ಮತ್ತು ವೀರೇಗೌಡ ಇಬ್ಬರು ವ್ಯಕ್ತಿಗಳು ಗೊಂಬೆಗಲ್ಲು ಗ್ರಾಮದಿಂದ ಒಡೆಯರಪಾಳ್ಯ ಗ್ರಾಮಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ನೆಲ್ಲಿಕತ್ರಿ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ಕಾಡಾನೆ ದಾಳಿ ನಡೆಸಿ ಓರ್ವನನ್ನು ಬಲಿ ಪಡೆದಿದೆ. ಮತ್ತೊರ್ವ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ವರದಿಯಾಗಿದೆ.ಅರಣ್ಯ ಅಧಿಕಾರಿಗಳ ದೌಡು:
ಕಾಡಾನೆದಾಳಿಗೆ ವ್ಯಕ್ತಿ ಓರ್ವ ಬಲಿಯಾಗಿರುವ ಘಟನೆ ವಿಚಾರ ತಿಳಿಯುತ್ತಿದ್ದಂತೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವಿಭಾಗದ ಡಿಸಿಎಫ್ ಶ್ರೀಪತಿ, ಬೈಲೂರು ವಲಯ ಅರಣ್ಯ ಅಧಿಕಾರಿ ಪ್ರಮೋದ್, ಸಿಬ್ಬಂದಿ ವರ್ಗದವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸರ್ಕಾರದಿಂದ ಸಿಗುವ ಸೂಕ್ತ ಪರಿಹಾರವನ್ನು ಕುಟುಂಬದವರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಮುಂದಿನ ಕ್ರಮ ಕೈಗೊಂಡಿದ್ದಾರೆ .---------ಅರಣ್ಯದಂಚಿನ ಭಾಗದಲ್ಲಿರುವ ಕಚ್ಚಾ ರಸ್ತೆಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಓಡಾಡುವ ರಸ್ತೆಯ ಗಿಡಗಂಟೆಗಳನ್ನು ತೆರವುಗೊಳಿಸಿ , ಕಾಡುಪ್ರಾಣಿಗಳು ಇರುವುದನ್ನು ಮನದಟ್ಟು ಮಾಡಿಕೊಂಡು ಓಡಾಡಲು ಅನುಕೂಲ ಕಲ್ಪಿಸಬೇಕು ಪೊದೆಗಳಂತೆ ಬೆಳೆದು ನಿಂತಿರುವ ರಸ್ತೆಯಲ್ಲಿ ಕಾಡಾನೆ ಇರುವುದು ಕಾಣಿಸದೆ ಇರುವುದರಿಂದ ಕಾಡಾನೆ ದಾಳಿಗೆ ಸಮುದಾಯದ ಹಿರಿಯ ಮುಖಂಡ ಬಲಿಯಾಗಿದ್ದಾರೆ. ಹೀಗಾಗಿ ಸರ್ಕಾರದಿಂದ ಸಿಗುವ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು.
ಮುತ್ತಯ್ಯ, ಸೋಲಿಗ ಸಮುದಾಯದ, ಹಿರಿಯ ಮುಖಂಡ------------
ಚಿರತೆ ಉಪಟಳ ಗ್ರಾಮಸ್ಥರ ಅಳಲುಹನೂರು:
ತಾಲೂಕಿನ ಕೆಕ್ಕೆಹೊಲ ಗ್ರಾಮದ ಬಳಿ ರಾತ್ರಿ ಹಗಲು ಎನ್ನದೆ ಚಿರತೆ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿದೆ. ನಾಯಿ, ಮೇಕೆ, ಕುರಿ ಕೋಳಿಗಳನ್ನು ದಿನನಿತ್ಯ ಕೊಲ್ಲುತ್ತಿದೆ. ಗ್ರಾಮದಲ್ಲಿ ಚಿರತೆ ಕಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದು ಉಪಟಳ ತಪ್ಪಿಸುವಂತೆ ಅರಣ್ಯಾಧಿಕಾರಿಗಳಿಗೆ ಕೆಕ್ಕೆಹೊಲ ಗ್ರಾಮದ ಕಮಲ, ಚಿತ್ರ, ಶಿವ ರತ್ನ ಸೇರಿದಂತೆ ಗ್ರಾಮದ ಮಹಿಳೆಯರು ತಮ್ಮ ಆತಂಕವನ್ನು ಸಾಮಾಜಿಕ ಜಾಲತಾಣದ ಮೂಲಕ ಹೊರಹಾಕಿದ್ದಾರೆ.ಗ್ರಾಮದ ಬಳಿಯೇ ಚಿರತೆ ಸಾಕುಪ್ರಾಣಿಗಳನ್ನು ದಿನನಿತ್ಯ ಹೊತ್ತೊಯ್ದುತ್ತಿದೆ. ಮತ್ತೊಂದಡೆ ಗ್ರಾಮದಲ್ಲಿ ಪುಟ್ಟ ಮಕ್ಕಳ ಹೆಚ್ಚಾಗಿರುವುದರಿಂದ ಶಾಲೆಗಳಿಗೆ ತೆರಳುವ ವೇಳೆ ಚಿರತೆ ದಾಳಿ ಮಾಡಿದರೆ ಏನು ಮಾಡುವುದು ಎಂದು ಅರಣ್ಯಾಧಿಕಾರಿಗಳಿಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದರು. ಅರಣ್ಯಾಧಿಕಾರಿಗಳು ಸ್ಪಂದಿಸದೆ ಇರುವುದರಿಂದ ಇಲ್ಲಿನ ಗ್ರಾಮದ ಜನತೆ ಚಿರತೆ ಕಾಟದಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚಿರತೆ ಸೆರೆಹಿಡಿಯಲು ಒತ್ತಾಯ:
ಕೆಕ್ಕೆ ಹೊಲ ಗ್ರಾಮದ ನೂರಾರು ಕೋಳಿಗಳನ್ನು ಮತ್ತು ಸಾಕು ನಾಯಿಗಳನ್ನು ಮೇಕೆ ಕುರಿಗಳನ್ನು ಸಹ ತಿಂದಿರುವ ಚಿರತೆ ಗ್ರಾಮದ ಜನತೆಯ ಮೇಲೆ ದಾಳಿ ಮಾಡಿ ಪ್ರಾಣಾಪಾಯ ಸಂಭವಿಸುವ ಮುನ್ನ ಸಂಬಂಧ ಪಟ್ಟ ಇಲಾಖೆ ಅರಣ್ಯಾಧಿಕಾರಿಗಳು ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆಹಿಡಿದು ಬೇರೆ ಬಿಡಬೇಕು ಎಂದು ಗ್ರಾಮದ ಮಹಿಳೆಯರು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ಸೂಕ್ತ ಪರಿಹಾರಕ್ಕೆ ಆಗ್ರಹ:
ದಿನನಿತ್ಯ ಕಾಡಂಚಿನ ಗ್ರಾಮಗಳಲ್ಲಿ ಕ್ರೂರ ಪ್ರಾಣಿ ಚಿರತೆ ದಿನನಿತ್ಯ ಗ್ರಾಮದ ಸುತ್ತಲೂ ಓಡಾಡುತ್ತಿರುವುದರಿಂದ ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದೇವೆ. ಜೊತೆಗೆ ಇಂತಹ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಅರಣ್ಯ ಅಧಿಕಾರಿಗಳು ಗ್ರಾಮದ ಬಳಿ ಚಿರತೆ ಸೆರೆಹಿಡಿಯಲು ಬೋನ್ ಇಡುವ ಮೂಲಕ ಕ್ರಮ ಕೈಗೊಳ್ಳಬೇಕು ಜೊತೆಗೆ ಸಾಕು ಪ್ರಾಣಿಗಳನ್ನು ಕಳೆದುಕೊಂಡಿರುವ ನಮಗೆ ಅರಣ್ಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ .18ಸಿಎಚ್ಎನ್14. ಹನೂರು ಗೊಂಬೆಗಲ್ಲು ಗ್ರಾಮದ ಕೇತೇಗೌಡ ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ...18ಸಿಎಚ್ಎನ್16
ಹನೂರು ತಾಲೂಕಿನ ಕೆಕ್ಕೆ ಹೊಲ ಗ್ರಾಮದ ಬಳಿ ಚಿರತೆ ಉಪಟಳ ಸೆರೆ ಹಿಡಿಯಲು ಗ್ರಾಮದ ಮಹಿಳೆಯರು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))