ಸಾರಾಂಶ
ಬೇಲೂರು ತಾಲೂಕಿನ ದೊಡ್ಡಸಾಲವಾರ ಗ್ರಾಮದಲ್ಲಿ ಇಂದು ಮುಂಜಾನೆ ಕೂಲಿ ಕೆಲಸಕ್ಕೆಂದು ರೇವತಿ ಎಂಬುವವರು ಗ್ರಾಮದ ಉಮೇಶ್ ಎಂಬುವವರ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಾಡಾಣೆ ಮಹಿಳೆ ಮೇಲೆ ದಾಳಿ ನಡೆಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿ ತಮ್ಮ ವಾಹನದಲ್ಲಿಯೇ ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿ ಮುಂದುವರಿದಿದೆ. ಒಂಟಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆಯ ತಲೆಗೆ ಪೆಟ್ಟಾಗಿದೆ.ತಾಲೂಕಿನ ದೊಡ್ಡಸಾಲವಾರ ಗ್ರಾಮದಲ್ಲಿ ಇಂದು ಮುಂಜಾನೆ ಕೂಲಿ ಕೆಲಸಕ್ಕೆಂದು ರೇವತಿ ಎಂಬುವವರು ಗ್ರಾಮದ ಉಮೇಶ್ ಎಂಬುವವರ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಾಡಾಣೆ ಮಹಿಳೆ ಮೇಲೆ ದಾಳಿ ನಡೆಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿ ತಮ್ಮ ವಾಹನದಲ್ಲಿಯೇ ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಘಟನೆ ನಡೆದಿದೆ.
ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಸಾಲವರ ಗ್ರಾಮದ ರೇವತಿ (50ವರ್ಷ) ಎಂಬುವವರು ಇಂದು ಮುಂಜಾನೆ ಕೂಲಿ ಕೆಲಸಕ್ಕೆಂದು ಗ್ರಾಮದ ಉಮೇಶ್ ಎಂಬುವವರ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ದೊಡ್ಡಸಾಲವರ ಗ್ರಾಮದ ಬಳಿ ರಸ್ತೆ ದಾಟುತ್ತಿದ್ದ ಎರಡು ಕಾಡಾನೆಗಳನ್ನು ಕಂಡು ತಕ್ಷಣ ಬೈಕ್ ನಿಲ್ಲಿಸಲು ಪ್ರಯತ್ನಿಸುತ್ತಿದಂತೆ ಒಂಟಿ ಕಾಡಾನೆ ಬೆನ್ನತ್ತಿ ತನ್ನ ಸೊಂಡಿಲಿನಿಂದ ಬೈಕ್ ಹಾಗೂ ಮಹಿಳೆಯನ್ನು ತಳ್ಳಾಡಿದ ಪರಿಣಾಮ ಮಹಿಳೆಯ ಸೊಂಟ ಹಾಗೂ ತಲೆ ಪೆಟ್ಟಾಗಿದ್ದು ಉಮೇಶ್ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.ಮಾಹಿತಿ ಪಡೆದ ಕೆಲ ನಿಮಿಷದಲ್ಲಿಯೇ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ಆನೆ ಕಾರ್ಯ ಪಡೆಯ ಸಿಬ್ಬಂದಿ ಗಾಯಾಳುವನ್ನು ತಮ್ಮ ವಾಹನದಲ್ಲಿಯೇ ಕೂರಿಸಿಕೊಂಡು ಹತ್ತಿರದ ಅರೇಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.