7ನೇ ಹೊಸಕೋಟೆ ತೊಂಡೂರು ಸಲಿ ಎಂವರ ಮನೆಯ ಹಿಂಭಾಗದಲ್ಲಿ ಕಾಡಾನೆ ಕಳೇಬರ ಗುರುವಾರ ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

7ನೇ ಹೊಸಕೋಟೆ ತೊಂಡೂರು ಸಲಿ ಎಂವರ ಮನೆಯ ಹಿಂಭಾಗದಲ್ಲಿ ಕಾಡಾನೆ ಕಳೇಬರ ಗುರುವಾರ ಪತ್ತೆಯಾಗಿದೆ.

ಆಹಾರ ಅರಸಿ ಬಂದ ಅಂದಾಜು 20 ರಿಂದ 25 ವರ್ಷ ಪ್ರಾಯದ ಗಂಡಾನೆ ಕೆಸರಿನಲ್ಲಿ ಹೂತುಕೊಂಡಿರುವ ಸ್ಥಿತಿಯಲ್ಲಿದ್ದು ಮೇಲೇಳಲು ಆಗದೆ ಉಸಿರುಗಟ್ಟಿ ಸತ್ತಿರಬಹುದೆಂದು ಅಂದಾಜಿಸಲಾಗಿದೆ. ಗುರುವಾರ ಪ್ರಕರಣ ಬೆಳಕಿಗೆ ಬಂದಿದ್ದು, ಆನೆಯ ಶವವನ್ನು ಕೊಂಡೊಯ್ದು ಅರಣ್ಯ ಇಲಾಖೆಯ ವೈದ್ಯ ಡಾ. ಮುಜಿಬು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೇ ನಡೆಸಲಾಯಿತು. ಸ್ಥಳದಲ್ಲಿ ಎಸಿಎಫ್ ನವೀನ್‌ಕುಮಾರ್, ಕುಶಾಲನಗರ ವಲಯ ಆರ್‌ಎಫ್‌ಓ ರಕ್ಷಿತ್ ಮತ್ತು ಸಿಬ್ಬಂದಿ ಹಾಜರಿದ್ದರು.