ಒಂದು ಎಕರೆ ಜಮೀನನ್ನು ಗುತ್ತಿಗೆ ಪಡೆದು ಭತ್ತ ಬೆಳೆ ಬೆಳೆಯಲಾಗಿತ್ತು. ಶುಕ್ರವಾರ ರಾತ್ರಿ ಬಸವನಬೆಟ್ಟದ ಕಾಡಿನಿಂದ ಬಂದ ಒಂಟಿ ಸಲಗ ಗದ್ದೆಯನ್ನು ತುಳಿದು ಫಸಲು ನಾಶಪಡಿಸಿ ಅಪಾರ ನಷ್ಟ ಮಾಡಿದೆ.
ಹಲಗೂರು: ಕಾಡಾನೆ ಹಾವಳಿಯಿಂದ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನಾಶವಾಗಿರುವ ಘಟನೆ ಸಮೀಪದ ಗೊಲ್ಲರಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಗ್ರಾಮದ ಮಹದೇವು ಅವರ ಜಮೀನಿಗೆ ತಡರಾತ್ರಿ ದಾಳಿ ಮಾಡಿದ ಕಾಡಾನೆ ಕಟಾವಿಗೆ ಬಂದಿದ್ದ ಭತ್ತವನ್ನು ತಿಂದು ತುಳಿದು ನಾಶಪಡಿಸಿದೆ. ಜಮೀನು ಮಾಲೀಕ ಮಹದೇವ ಮಾತನಾಡಿ, ಒಂದು ಎಕರೆ ಜಮೀನನ್ನು ಗುತ್ತಿಗೆ ಪಡೆದು ಭತ್ತ ಬೆಳೆ ಬೆಳೆಯಲಾಗಿತ್ತು. ಶುಕ್ರವಾರ ರಾತ್ರಿ ಬಸವನಬೆಟ್ಟದ ಕಾಡಿನಿಂದ ಬಂದ ಒಂಟಿ ಸಲಗ ಗದ್ದೆಯನ್ನು ತುಳಿದು ಫಸಲು ನಾಶಪಡಿಸಿ ಅಪಾರ ನಷ್ಟ ಮಾಡಿದೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.