ವಿದ್ಯುತ್‌ ಸ್ಪರ್ಶಿಸಿ ಕಾಡಾನೆ ಸಾವು

| Published : May 11 2025, 01:15 AM IST

ಸಾರಾಂಶ

ರಸ್ತೆಯಲ್ಲೇ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿದೆ.ಶನಿವಾರ ಮುಂಜಾನೆ ಐದು ಗಂಟೆಯ ಸಮಯದಲ್ಲಿ ಗ್ರಾಮ ಸಂಪರ್ಕಿಸುವ ರಸ್ತೆಯಲ್ಲಿ ಆಹಾರ ಅರಸಿ ಮರದ ರಂಬೆಗಳನ್ನು ಎಳೆದ ವೇಳೆ ಮರದ ರಂಬೆ ವಿದ್ಯುತ್ ತಂತಿಗಳಿಗೆ ತಾಗಿ ಮರಕ್ಕೆ ಕಟ್ಟಲಾಗಿದ್ದ ವಿದ್ಯುತ್ ತಂತಿಯ ಮೂಲಕ ಮರಕ್ಕೆ ವಿದ್ಯುತ್ ಪ್ರವಹಿಸಿ ಆಹಾರ ತಿನ್ನುತಿದ್ದ ಸುಮಾರ ೨೦ ವರ್ಷದ ಗಂಡಾನೆ ರಸ್ತೆ ಮಧ್ಯವೇ ಮೃತಪಟ್ಟಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಶಾಂತಪುರ ಗ್ರಾಮ ಸಂಪರ್ಕಿಸುವ ರಸ್ತೆಯಲ್ಲೇ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿದೆ.ಶನಿವಾರ ಮುಂಜಾನೆ ಐದು ಗಂಟೆಯ ಸಮಯದಲ್ಲಿ ಗ್ರಾಮ ಸಂಪರ್ಕಿಸುವ ರಸ್ತೆಯಲ್ಲಿ ಆಹಾರ ಅರಸಿ ಮರದ ರಂಬೆಗಳನ್ನು ಎಳೆದ ವೇಳೆ ಮರದ ರಂಬೆ ವಿದ್ಯುತ್ ತಂತಿಗಳಿಗೆ ತಾಗಿ ಮರಕ್ಕೆ ಕಟ್ಟಲಾಗಿದ್ದ ವಿದ್ಯುತ್ ತಂತಿಯ ಮೂಲಕ ಮರಕ್ಕೆ ವಿದ್ಯುತ್ ಪ್ರವಹಿಸಿ ಆಹಾರ ತಿನ್ನುತಿದ್ದ ಸುಮಾರ ೨೦ ವರ್ಷದ ಗಂಡಾನೆ ರಸ್ತೆ ಮಧ್ಯವೇ ಮೃತಪಟ್ಟಿದೆ.

ವಿದ್ಯುತ್ ಪ್ರವಹಿಸಿದ್ದರಿಂದ ಕಾಡಾನೆಯಿಂದ ಭಾರಿ ಪ್ರಮಾಣದ ರಕ್ತಸ್ರಾವವಾಗಿದ್ದು, ಆನೆ ಮೃತಪಟ್ಟ ಪ್ರದೇಶ ಸಂಪೂರ್ಣ ರಕ್ತದಿಂದ ತೊಯ್ದು ಹೋಗಿತ್ತು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳದಲ್ಲೆ ಹೊಂಡ ತೋಡಿ ಹೂಳುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಿದರು.ಚೆಸ್ಕಾಂ ಸಿಬ್ಬಂದಿ ವಿರುದ್ಧ ಆಕ್ರೋಶ:

ಕಾಡಾನೆ ಸಾವಿಗೆ ಚೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಮರಕ್ಕೆ ಕಟ್ಟಲಾಗಿದ್ದ ವಿದ್ಯುತ್ ಕಂಬದ ಗಯ್‌ ತಂತಿಯನ್ನು ಬದಲಿಸುವಂತೆ ಸಾಕಷ್ಟು ಬಾರಿ ಲೈನ್‌ಮ್ಯಾನ್‌ಗೆ ತಿಳಿಸಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದ ಪರಿಣಾಮ ಕಳೆದ ಒಂದು ವಾರದ ಹಿಂದೆ ಶಾಂತಪುರ ಗ್ರಾಮದ ಉದಯ ಎಂಬುವವರಿಗೆ ಸೇರಿದ ಹಸು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿತ್ತು. ಈ ಹಸುವನ್ನು ಕಾಡಾನೆ ಮೃತಪಟ್ಟ ಪ್ರದೇಶದಲ್ಲೇ ಹೂಳಲಾಗಿತ್ತು. ಇಂದು ಕಾಡಾನೆ ಮೃತಪಟ್ಟಿದೆ. ಆದ್ದರಿಂದ ಕಾಡಾನೆ ಸಾವಿಗೆ ಕಾರಣವಾಗಿರುವ ಲೈನ್‌ಮ್ಯಾನ್ ಸೇರಿದಂತೆ ಸಂಬಂಧಪಟ್ಟ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.