ನಡುರಸ್ತೆಯಲ್ಲಿ ಒಂಟಿ ಕಾಡಾನೆ ಓಡಾಟ

| Published : Dec 13 2024, 12:48 AM IST

ಸಾರಾಂಶ

ಸಕಲೇಶಪುರದಿಂದ ಅರೇಹಳ್ಳಿಗೆ ಬರುತ್ತಿದ್ದ ಬೈಕ್ ಸವಾರರು ರಸ್ತೆಯನ್ನು ದಾಟುತ್ತಿದ್ದ ಕಾಡಾನೆಯನ್ನು ಕಂಡು ದೂರದಲ್ಲಿಯೇ ಬೈಕ್ ನಿಲ್ಲಿಸಿಕೊಂಡು ಕಾಡಾನೆಯು ಪಕ್ಕದ ತೋಟಕ್ಕೆ ಹೋಗುವವರೆಗೂ ಕಾದು ನಂತರ ಭಯದಿಂದಲೇ ಮನೆ ಸೇರಿದ ಘಟನೆಯು ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಅರೇಹಳ್ಳಿಯ ಮೇಲನಹಳ್ಳಿ ಬೀದಿಯ ಯುವಕರಾದ ಯಾಸೀನ್ ಹಾಗೂ ಅಬ್ರಾರ್ ಕೆಲಸ ಮುಗಿಸಿಕೊಂಡು ಸಕಲೇಶಪುರದಿಂದ ಅರೇಹಳ್ಳಿಗೆ ವಾಪಾಸ್ಸಾಗುತ್ತಿದ್ದ ವೇಳೆ ದೈತ್ಯ ಆನೆ ಎದುರಾಗಿದ್ದು, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ.

ಬೇಲೂರು: ಸಕಲೇಶಪುರದಿಂದ ಅರೇಹಳ್ಳಿಗೆ ಬರುತ್ತಿದ್ದ ಬೈಕ್ ಸವಾರರು ರಸ್ತೆಯನ್ನು ದಾಟುತ್ತಿದ್ದ ಕಾಡಾನೆಯನ್ನು ಕಂಡು ದೂರದಲ್ಲಿಯೇ ಬೈಕ್ ನಿಲ್ಲಿಸಿಕೊಂಡು ಕಾಡಾನೆಯು ಪಕ್ಕದ ತೋಟಕ್ಕೆ ಹೋಗುವವರೆಗೂ ಕಾದು ನಂತರ ಭಯದಿಂದಲೇ ಮನೆ ಸೇರಿದ ಘಟನೆಯು ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಬಾಳಗುಲಿಯಿಂದ ಸಕಲೇಶಪುರ- ಅರೇಹಳ್ಳಿ ಮುಖ್ಯರಸ್ತೆಯನ್ನು ದಾಟಿ ಹುಲ್ಲೆಮಕ್ಕಿ ಕಡೆ ಕಾಡಾನೆಯು ತೆರಳುತ್ತಿತ್ತು. ಅರೇಹಳ್ಳಿಯ ಮೇಲನಹಳ್ಳಿ ಬೀದಿಯ ಯುವಕರಾದ ಯಾಸೀನ್ ಹಾಗೂ ಅಬ್ರಾರ್ ಕೆಲಸ ಮುಗಿಸಿಕೊಂಡು ಸಕಲೇಶಪುರದಿಂದ ಅರೇಹಳ್ಳಿಗೆ ವಾಪಾಸ್ಸಾಗುತ್ತಿದ್ದ ವೇಳೆ ದೈತ್ಯ ಆನೆ ಎದುರಾಗಿದ್ದು, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ.

ಅರೇಹಳ್ಳಿ ಹಾಗೂ ಬಿಕ್ಕೋಡು ಹೋಬಳಿ ವ್ಯಾಪ್ತಿ ಕಾಡಾನೆಗಳ ಗುಂಪಿನಿಂದ ನಾನಾ ಸಮಸ್ಯೆಗಳಾಗುತ್ತಿದ್ದು, ಹಗಲು ಹಾಗೂ ರಾತ್ರಿ ಸಂಚಾರ ಮಾಡಲು ದುಸ್ತರವೆನಿಸಿದೆ. ಹಾಗಾಗಿ ಕಾಡಾನೆಗಳನ್ನು ಶೀಘ್ರವಾಗಿ ಸ್ಥಳಾಂತರಿಸಿ ಸೂಕ್ತವಾದ ರಕ್ಷಣೆ ಒದಗಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.