ಸಾರಾಂಶ
ಇಂದಾವರ, ಹುಕ್ಕುಂದ, ಕಾರೇಮನೆ ಸುತ್ತಮುತ್ತ ಬೀಟಮ್ಮ ಆ್ಯಂಡ್ ಟೀಂ ಸಂಚಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಡಾನೆಗಳ ಉಪಟಳ ಹೆಚ್ಚಳವಾಗಿದೆ. ಕೂಡಲೇ ಆನೆಗಳನ್ನು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಇಂದಾವರ ಗ್ರಾಮಸ್ಥರು ಗುರುವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಇಂದಾವರ, ಹುಕ್ಕುಂದ, ಕಾರೇಮನೆ ಸೇರಿದಂತೆ ಸುತ್ತಮುತ್ತ ಬೀಟಮ್ಮ ಆ್ಯಂಡ್ ಟೀಂ ಸಂಚಾರ ಮಾಡುತ್ತಿವೆ. ಕಳೆದ ನಾಲ್ಕು ದಿನಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟಿದ್ದರಿಂದ ಕಾಫಿ, ಬಾಳೆ ಸೇರಿದಂತೆ ಇತರೆ ಬೆಳೆಗಳಿಗೆ ಅಪಾರ ಹಾನಿ ಉಂಟಾಗಿದೆ. ಇದರ ಜತೆಗೆ ತೋಟಗಳಲ್ಲಿನ ಪಂಪ್‌ಸೆಟ್ ಹಾಗೂ ಇತರೆ ವಸ್ತುಗಳನ್ನು ಹಾಳು ಮಾಡುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.ಕೂಡಲೇ ಆನೆಗಳನ್ನು ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದರು. ಬೆಳಿಗ್ಗೆ ಪ್ರತಿಭಟನೆ ನಡೆಸಿದ್ದರಿಂದ ವಾಹನಗಳ ಸಂಚಾರಕ್ಕೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಡಚಣೆಯಾಗಿತ್ತು.ಸ್ಥಳಕ್ಕೆ ಆಗಮಿಸಿದ ಡಿಎಫ್‌ಓ ರಮೇಶ್ ಬಾಬು ಮಾತನಾಡಿ, ದೊಡ್ಡ ಸಂಖ್ಯೆಯಲ್ಲಿರುವ ಕಾಡಾನೆಗಳನ್ನು ಹಿಮ್ಮೆಟ್ಟಲು ಯತ್ನಿಸಿದರೆ ತುಂಬಾ ಸಮಸ್ಯೆ ಎದುರಾಗಲಿದೆ. ಅವುಗಳು ತಾವಾಗಿಯೇ ಕಾಡಿಗೆ ಹೋಗಬೇಕಾಗಿದೆ. ಅವುಗಳು ಭದ್ರಾ ಅಭಯಾರಣ್ಯಕ್ಕೆ ಹೋಗುವ ಸಾಧ್ಯತೆ ಇದೆ. ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದರು.ವಾಸ್ತವಿಕ ಪರಿಸ್ಥಿತಿ ಅರಿತ ಗ್ರಾಮಸ್ಥರು ನಂತರ ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನೆಯಲ್ಲಿ ಇಂದಾವರ ಲೋಕೇಶ್, ಐ.ಡಿ. ಚಂದ್ರಶೇಖರ್, ಯತೀಶ್ ಹಾಗೂ ಗ್ರಾಮಸ್ಥರು.ಪೋಟೋ ಫೈಲ್ ನೇಮ್ 15 ಕೆಸಿಕೆಎಂ 3ಕಾಡಾನೆಗಳನ್ನು ಹಿಮ್ಮೆಟ್ಟುವಂತೆ ಆಗ್ರಹಿಸಿ ಚಿಕ್ಕಮಗಳೂರಿನ ಇಂದಾವರ ಗ್ರಾಮಸ್ಥರು ಗುರುವಾರ ರಸ್ತೆ ತಡೆ ನಡೆಸಿದರು.