ಸೂರ್ಲಬ್ಬಿಯಲ್ಲಿ ಕಾಡಾನೆಗಳ ಹಾವಳಿ: ಬತ್ತದ ಸಸಿಮಡಿ ನಾಶ

| Published : Jul 06 2025, 01:48 AM IST

ಸೂರ್ಲಬ್ಬಿಯಲ್ಲಿ ಕಾಡಾನೆಗಳ ಹಾವಳಿ: ಬತ್ತದ ಸಸಿಮಡಿ ನಾಶ
Share this Article
  • FB
  • TW
  • Linkdin
  • Email

ಸಾರಾಂಶ

ಕಾಡಾನೆಗಳ ಹಾವಳಿ ಪ್ರಾರಂಭಗೊಂಡಿದ್ದು, ರೈತರು ಬತ್ತ ಬೆಳೆಯಲು ತಯಾರಿಸಿದ್ದ ಬತ್ತದ ಸಸಿಮಡಿ ತುಳಿದು ನಾಶ ಪಡಿಸಿವೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆಉತ್ತರ ಕೊಡಗಿನ ಕುಗ್ರಾಮವಾದ ಸೂರ್ಲಬ್ಬಿಯಲ್ಲಿ ಕಾಡಾನೆಗಳ ಹಾವಳಿ ಪ್ರಾರಂಭಗೊಂಡಿದ್ದು, ಗ್ರಾಮದ ರೈತರು ಬತ್ತ ಬೆಳೆಯಲು ತಯಾರಿಸಿದ್ದ ಬತ್ತದ ಸಸಿಮಡಿಯನ್ನು ತುಳಿದು ನಾಶ ಪಡಿಸಿವೆ.ಮುಟ್ಲು, ಹಮ್ಮಿಯಾಲ ಹಾಗೂ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಮೂರರಿಂದ ನಾಲ್ಕು ಕಾಡಾನೆಗಳು ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಪ್ರಸಕ್ತ ಸಾಲಿನಲ್ಲಿ ಈ ಭಾಗಕ್ಕೆ 100 ಇಂಚಿಗೂ ಅಧಿಕ ಮಳೆಯಾಗಿದ್ದು, ಗ್ರಾಮಸ್ಥರು ಬತ್ತದ ನಾಟಿ ಕೆಲಸಕ್ಕೆ ತಯಾರಿ ನಡೆಸಿದ್ದರು.ಸೂರ್ಲಬ್ಬಿ ಗ್ರಾಮದ ಅಪ್ಪುಡ ಉತ್ತಪ್ಪ, ಅಪ್ಪುಡ ಗಣಪತಿ ಅವರ ಗದ್ದೆಯಲ್ಲಿ ಬೆಳೆದು ನಿಂತಿದ್ದ ಸಸಿಮಡಿಯನ್ನು ಆನೆಗಳ ಹಿಂಡು ನಾಶ ಪಡಿಸಿವೆ. ಕಳೆದ ಕೆಲವು ದಿನಗಳಿಂದ ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ ಗ್ರಾಮದಲ್ಲೂ ಆನೆಗಳ ದಾಳಿ ಮುಂದುವರೆದಿದ್ದು, ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಂಕ್ಯ ಗ್ರಾಮದ ಚಾಮೇರ ದಿನೇಶ್ ಬೆಳ್ಯಪ್ಪ ಪತ್ರಿಕೆಗೆ ತಿಳಿಸಿದ್ದಾರೆ.