ಹಿರೇಹಸಡೆ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಅಡಿಕೆ ತೋಟಕ್ಕೆ ನುಗ್ಗಿ ವ್ಯಾಪಕ ಹಾನಿ ಮಾಡಿರುವ ಘಟನೆ ನಡೆದಿದೆ. ಸುಮಾರು 26 ರಿಂದ 28 ಆನೆಗಳಿರುವ ಬೃಹತ್ ಹಿಂಡು ರೈತ ಶರತ್ ಕುಮಾರ್ ಸಿ.ಜಿ. ಅವರಿಗೆ ಸೇರಿದ ತೋಟದ ಮೇಲೆ ದಾಳಿ ನಡೆಸಿ, ಬೆಳೆದು ನಿಂತಿದ್ದ ಅಡಿಕೆ , ಕಾಫಿ ಮರಗಿಡಗಳನ್ನು ಧ್ವಂಸಗೊಳಿಸಿವೆ. "ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಬೆಳೆ ಕಣ್ಣಮುಂದೆಯೇ ನಾಶವಾಗುತ್ತಿರುವುದನ್ನು ಕಂಡು ದಿಗಿಲಾಗಿದೆ. 20ಕ್ಕೂ ಹೆಚ್ಚು ಆನೆಗಳು ಒಟ್ಟಾಗಿ ಬಂದಾಗ ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಶಾಶ್ವತ ಪರಿಹಾರ ಸಿಗುತ್ತಿಲ್ಲ " ಎಂದು ಪ್ಲಾಂಟರ್ ಶರತ್ ಕುಮಾರ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಹಿರೇಹಸಡೆ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಅಡಿಕೆ ತೋಟಕ್ಕೆ ನುಗ್ಗಿ ವ್ಯಾಪಕ ಹಾನಿ ಮಾಡಿರುವ ಘಟನೆ ನಡೆದಿದೆ. ಸುಮಾರು 26 ರಿಂದ 28 ಆನೆಗಳಿರುವ ಬೃಹತ್ ಹಿಂಡು ರೈತ ಶರತ್ ಕುಮಾರ್ ಸಿ.ಜಿ. ಅವರಿಗೆ ಸೇರಿದ ತೋಟದ ಮೇಲೆ ದಾಳಿ ನಡೆಸಿ, ಬೆಳೆದು ನಿಂತಿದ್ದ ಅಡಿಕೆ , ಕಾಫಿ ಮರಗಿಡಗಳನ್ನು ಧ್ವಂಸಗೊಳಿಸಿವೆ. "ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಬೆಳೆ ಕಣ್ಣಮುಂದೆಯೇ ನಾಶವಾಗುತ್ತಿರುವುದನ್ನು ಕಂಡು ದಿಗಿಲಾಗಿದೆ. 20ಕ್ಕೂ ಹೆಚ್ಚು ಆನೆಗಳು ಒಟ್ಟಾಗಿ ಬಂದಾಗ ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಶಾಶ್ವತ ಪರಿಹಾರ ಸಿಗುತ್ತಿಲ್ಲ " ಎಂದು ಪ್ಲಾಂಟರ್ ಶರತ್ ಕುಮಾರ್ ತಮ್ಮ ಅಳಲು ತೋಡಿಕೊಂಡಿದ್ದಾರೆ.​ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ ಮತ್ತು ಆಲೂರು ಭಾಗಗಳಲ್ಲಿ ಮಾನವ-ಆನೆ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.