ಸಾರಾಂಶ
ಶೃಂಗೇರಿ, ತಾಲೂಕಿನ ಕೆರೆ ಪಂಚಾಯಿತಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಬಳಿ ಕೆಲ ದಿನಗಳ ಹಿಂದೆ ಕಾಡಾನೆ ದಾಳಿ ನಡೆಸಿ ಎರಡು ಜೀವಗಳನ್ನು ಬಲಿಪಡೆದ ಘಟನೆ ಮಾಸುವ ಮುನ್ನವೇ ಮತ್ತೆ ಕಾಡಾನೆ ಪ್ರತ್ಯಕ್ಷಗೊಂಡು ಜನರಲ್ಲಿ ಆತಂಕ ಹುಟ್ಟಿಸಿದೆ.
ಕೆರೆಪಂಚಾಯಿತಿ ಹೆಗ್ಗಾನೆ ಬಳಿ ಜಮೀನು, ತೋಟಗಳಿಗೆ ನುಗ್ಗಿದ ಕಾಡಾನೆ
ಕನ್ನಡಪ್ರಭ ವಾರ್ತೆ, ಶೃಂಗೇರಿತಾಲೂಕಿನ ಕೆರೆ ಪಂಚಾಯಿತಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಬಳಿ ಕೆಲ ದಿನಗಳ ಹಿಂದೆ ಕಾಡಾನೆ ದಾಳಿ ನಡೆಸಿ ಎರಡು ಜೀವಗಳನ್ನು ಬಲಿಪಡೆದ ಘಟನೆ ಮಾಸುವ ಮುನ್ನವೇ ಮತ್ತೆ ಕಾಡಾನೆ ಪ್ರತ್ಯಕ್ಷಗೊಂಡು ಜನರಲ್ಲಿ ಆತಂಕ ಹುಟ್ಟಿಸಿದೆ.
ಕೆರೆ ಪಂಚಾಯಿತಿ ಹೆಗ್ಗಾನೆ, ಭಲೆಕಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆ ಕಳೆದ ಕೆಲದಿನಗಳಿಂದ ಓಡಾಡುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಮಂಗಳವಾರ ಕೆರೆಪಂಚಾಯಿತಿ ಹೆಗ್ಗಾನೆ ಬಳಿ ಜಮೀನು, ತೋಟಗಳಿಗೆ ನುಗ್ಗಿ ಹಾನಿಮಾಡಿದೆ.ಕೆಲದಿನಗಳ ಹಿಂದೆ ಈ ಭಾಗದಲ್ಲಿ ಜಮೀನು, ತೋಟಗಳನ್ನು ಹಾನಿ ಮಾಡಿ, ಎರಡು ಜೀವಗಳನ್ನು ಬಲಿಪಡೆದ ಕಾಡಾನೆಯನ್ನು ಸೆರೆ ಹಿಡಿದು ದೊಡ್ಡ ಹರಾವೆ ಆನೆ ಶಿಬಿರಕ್ಕೆ ಕೊಂಡೊಯ್ಯಲಾಗಿತ್ತು. ಸದ್ಯ ಆನೆ ಕಾಟ ತಪ್ಪಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಗ್ರಾಮಸ್ಥರಿಗೆ ಮತ್ತೆ ಆನೆ ದಾಳಿ ಮಾಡುತ್ತಾ ಜನರನ್ನು ಬೆಚ್ಚಿ ಬೀಳಿಸಿದೆ.
ಈಗಾಗಲೇ ಈ ಭಾಗದಲ್ಲಿ ಓಡಾಡುತ್ತಿದ್ದ ಒಂದು ಕಾಡಾನೆಯನ್ನು ಇಬ್ಬರನ್ನು ಕೊಂದು ಹಾಕಿದ ಘಟನೆ ನಂತರ ಸೆರೆಹಿಡಿಯ ಲಾಗಿತ್ತು. ಈಗ ಮೊತ್ತೊಂದು ಆನೆ ಎಲ್ಲಿಂದ ಒಂತು ಎಂಬ ಪ್ರಶ್ನೆ ಜನರಲ್ಲಿ ಅನುಮಾನ ಹುಟ್ಟಿಸುತ್ತಿದೆ. ಕಾಡಾನೆ ಪ್ರತ್ಯಕ್ಷ ಸುದ್ದಿ ಮತ್ತೆ ಜನರ ನೆಮ್ಮದಿ ಕೆಡಿಸುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕಿದೆ.12 ಶ್ರೀ ಚಿತ್ರ 2-
ಶೃಂಗೇರಿ ಕೆರೆಕಟ್ಟೆ ಹೆಗ್ಗಾನೆ ಬಳಿ ಆನೆಯಿಂದ ಹಾನಿಗೊಳಗಾದ ಜಮೀನು.;Resize=(128,128))
;Resize=(128,128))
;Resize=(128,128))
;Resize=(128,128))