ಸಾರಾಂಶ
18 ವರ್ಷದ ಕಾಡಾನೆಗೆ ಅರವಳಿಕೆ ನೀಡಿ ವಶ । ಕ್ರೇನ್ ಮೂಲಕ ಸ್ಥಳಾಂತರಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಕಣದೂರು ಗ್ರಾಮದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ನಡೆದಿದ್ದು ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ. ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಗಳು ಕಾಡು ಬಿಟ್ಟು ನಾಡಿಗೆ ಬಂದು ಮನೆಯ ಬಳಿ ನಿಲ್ಲಿಸಿದ್ದ ಬೈಕ್, ಆಟೋ ಜಖಂಗೊಳಿಸುತ್ತಿತ್ತು. ರೈತರ ಬೆಳೆ ಹಾಳು ಮಾಡಿ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆಯಾಗಿದೆ.ಕಾಫಿ ತೋಟದೊಳಗೆ ಜೊತೆಯಾಗಿದ್ದ ಎರಡು ಕಾಡಾನೆಗಳನ್ನು ಬೇರ್ಪಡಿಸಲು ಅರಣ್ಯ ಅಧಿಕಾರಿಗಳು ಮುಂದಾದರು. ಪರಿಣಿತ ವೈದ್ಯರು ಅರವಳಿಕೆ ನೀಡಲು ಹರಸಾಹಸ ಪಡಬೇಕಾಯಿತು. ಕೊನೆಗೂ ಸುಮಾರು 18 ವರ್ಷದ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾದರು. ನಂತರ ಸ್ವಲ್ಪ ದೂರ ಓಡಿದ ಕಾಡಾನೆ ಪ್ರಜ್ಞೆತಪ್ಪಿ ಬಿದ್ದಿತು. ಪಳಗಿಸಿದ ಆನೆಗಳು, ಕಾಡಾನೆಯನ್ನು ರಸ್ತೆಗೆ ಎಳೆದು ತಂದು ಕ್ರೇನ್ ಮೂಲಕ ಲಾರಿಗೆ ಇಳಿಸಿ ಸ್ಥಳಾಂತರಕ್ಕೆ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಸಿಸಿಎಪ್ ಸುಭಾಷ್ ಮಾಲ್ಕಡೆ, ಡಿಸಿಎಫ್ ಸೌರಬ್ ಕುಮಾರ್, ಎಸಿಎಫ್ ಪುಳಕಿತ್ ಮೀನ, ಮಹದೇವ್ ಹಾಜರಿದ್ದರು.ಕಾಡಾನೆಗಳಿಂದ ಲಕ್ಷಾಂತರ ರು. ಮೌಲ್ಯದ ಬೆಳೆ ನಾಶಬಿಕ್ಕೋಡು ಹೋಬಳಿಯ ಬೆಳಗುಳಿ ಗ್ರಾಮದಲ್ಲಿ ಘಟನೆಕನ್ನಡಪ್ರಭ ವಾರ್ತೆ ಬೇಲೂರುಕಾಡಾನೆಗಳ ಉಪಟಳಕ್ಕೆ ಸುಮಾರು ೪ ಎಕರೆ ಅಡಿಕೆ, ತೆಂಗು ಸೇರಿದಂತೆ ಸುಮಾರು ೫ ಲಕ್ಷ ಮೌಲ್ಯದ ಬೆಳೆ ನಾಶವಾಗಿರುವ ಘಟನೆ ತಾಲೂಕಿನ ಬಿಕ್ಕೋಡು ಹೋಬಳಿಯ ಮದಘಟ್ಟ ಗ್ರಾಪಂ ವ್ಯಾಪ್ತಿಯ ಬೆಳಗುಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಜೈದೇವ್ ರುದ್ರೇಶ್‌ಗೆ ಸೇರಿದ ಸುಮಾರು ೪ ಎಕರೆಯಲ್ಲಿ ಬೆಳೆದ ಅಡಿಕೆ ತೆಂಗು ಜೋಳ ಇನ್ನಿತರೆ ಬೆಳೆಗಳು ಹಾಗೂ ಕೃಷಿ ಪರಿಕರಗಳನ್ನು ತುಳಿದು ಸಂಪೂರ್ಣ ಹಾನಿ ಮಾಡಿದೆ. ಇದರಿಂದ ಸುಮಾರು ೫ ಲಕ್ಷ ರು. ಮೌಲ್ಯದ ಸಂಪೂರ್ಣ ಬೆಳೆ ನಾಶವಾಗಿದೆ ಎಂದು ರೈತರು ಕಣ್ಣೀರು ಹಾಕಿದ್ದಾರೆ. ಈ ವೇಳೆ ಮಾತನಾಡಿದ ರೈತ ರುದ್ರೇಶ್, ‘ಸುಮಾರು ೫ ದಿನಗಳಿಂದ ೧೫ ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಈ ಭಾಗದಲ್ಲಿ ಬೀಡು ಬಿಟ್ಟಿದೆ. ಅಲ್ಲದೆ ಸಂಪೂರ್ಣವಾಗಿ ಬೆಳೆದಂತ ಅಡಿಕೆ, ಕಾಫಿ, ಜೋಳ, ತೆಂಗು ಸೇರಿದಂತೆ ಕೃಷಿ ಪರಿಕರಗಳನ್ನು ನಾಶಮಾಡಿದೆ. ಸುಮಾರು ೧೦೦ಕ್ಕೂ ಹೆಚ್ಚು ಅಡಿಕೆ ೧.೫ ಎಕರೆ ಜೋಳವನ್ನು ಸಂಪೂರ್ಣ ತಿಂದು ಹಾಳು ಮಾಡಿವೆ. ನಮಗೆ ಶಾಶ್ವತ ಪರಿಹಾರಬೇಕು ನಮಗೆ ನಷ್ಟವನ್ನು ಭರಿಸಿಕೊಡಬೇಕು’ ಎಂದು ಅಳಲು ತೋಡಿಕೊಂಡರು. ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಶಾಸಕ ಸುರೇಶ್, ‘ಕಾಡಾನೆಗಳ ಹಾವಳಿ ನಮ್ಮ ತಾಲೂಕಿನಲ್ಲಿ ವ್ಯಾಪಕವಾಗಿದ್ದು ನಮ್ಮ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈಗಾಗಲೇ ಸಚಿವರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಶ್ವತ ಪರಿಹಾರ ನೀಡುವಂತೆ ಸೂಚಿಸಲಾಗಿದ್ದು ರೈತರಿಗೆ ಆಗಿರುವ ನಷ್ಟವನ್ನು ಕೂಡಲೇ ಪರಿಹರಿಸುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದ್ದೇನೆ. ಕೂಡಲೇ ಬೀಡುಬಿಟ್ಟಿರುವ ಆನೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಇಲ್ಲಿಂದ ಓಡಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದೇನೆ’ ಎಂದರು. ತಹಸೀಲ್ದಾರ್ ಎಂ ಮಮತಾ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.ಬೇಲೂರು ತಾಲೂಕಿನ ಕಣದೂರು ಗ್ರಾಮದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ನಡೆದಿದ್ದು ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ. ಕಾರ್ಯಚರಣೆಯಲ್ಲಿ ಪಿಸಿಸಿಎಪ್ ಸುಭಾಷ್ ಮಾಲ್ಕಡೆ, ಡಿಸಿಎಫ್ ಸೌರಬ್ ಕುಮಾರ್, ಎಸಿಎಫ್ ಪುಳಕಿತ್ ಮೀನ, ಮಹದೇವ್ ಹಾಜರಿದ್ದರು.