ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಿ

| Published : May 05 2024, 02:00 AM IST

ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯವಾಗಿದ್ದು, ಮೋದಿ ಪ್ರಧಾನಿಯಾಗುವುದ ನಿಶ್ಚಿತ

ಶಿರಹಟ್ಟಿ: ಸಾಮಾನ್ಯ ಜನರಲ್ಲೂ ಮೋದಿಯವರ ನಾಯಕತ್ವದ ಕುರಿತು ವಿಶ್ವಾಸ ಹೆಚ್ಚಾಗಿದೆ. ಕಳೆದ ೧೦ವರ್ಷಗಳಲ್ಲಿ ಮೋದಿ ದೇಶದ ಪ್ರಧಾನಿಯಾದ ಬಳಿಕ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಜಾನು ಲಮಾಣಿ ಹೇಳಿದರು.

ಬಂಜಾರ ಸಮಾಜದ ವತಿಯಿಂದ ಶನಿವಾರ ತಾಲೂಕಿನ ೪೦ಲಂಬಾಣಿ ತಾಂಡಾಗಳಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.

ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ನೀಡುತ್ತಿದ್ದು, ರಾಷ್ಟ್ರೀಯ ಚಿಂತನೆ ಮತ್ತು ಅಭಿವೃದ್ಧಿ ಮಂತ್ರಕ್ಕೆ ಮತದಾರರು ಮನಸೋತು ಬಿಜೆಪಿಗೆ ಮತ ನೀಡುತ್ತಾ ಬಂದಿದ್ದು, ದೇಶದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯವಾಗಿದ್ದು, ಮೋದಿ ಪ್ರಧಾನಿಯಾಗುವುದ ನಿಶ್ಚಿತ ಎಂದರು.

ದೇಶದ ಅಭಿವೃದ್ಧಿ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಜನರು ತಿರ್ಮಾನಿಸಿದ್ದಾರೆ. ಜತೆಗೆ ಎಲ್ಲರಿಗೂ ಮನವರಿಕೆಯಾಗಿದೆ. ರಾಜ್ಯದಲ್ಲಿಯೂ ಈ ಹಿಂದೆ ಆಡಳಿತ ನಡೆಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಸುಮಾರು ೩ ಲಕ್ಷ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿ ಕೇಂದ್ರದ ಮೋದಿ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ತಿಳಿದುಕೊಂಡಿದ್ದೇವೆ. ಪಾಕಿಸ್ತಾನದಂತ ಶತ್ರು ರಾಷ್ಟವೇ ಮೋದಿ ಒಬ್ಬ ಧೀಮಂತ ನಾಯಕ ಮತ್ತು ಅಭಿವೃದ್ಧಿ ಹರಿಕಾರ ನಮಗೂ ಕೂಡಾ ಬೇಕು ಎಂದು ಅಲ್ಲಿನ ಪ್ರಜೆಗಳೆ ಯಾವುದೇ ಅಂಜಿಕೆ ಅಳುಕಿಲ್ಲದೇ ಮಾಧ್ಯಮದ ಮೂಲಕ ಹೇಳಿದ್ದಾರೆ. ಅಂತಹ ಪ್ರಭಾವಿ ನಾಯಕನ ಅಡಿಯಲ್ಲಿ ದೇಶ ಮುನ್ನಡೆಯುವದು ಅಗತ್ಯವಿದೆ. ಆದ್ದರಿಂದ ನಾವೆಲ್ಲರೂ ಮೋದಿ ಕೈ ಬಲಪಡಿಸಬೇಕೆಂದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ಮತಯಾಚನೆ ವೇಳೆ ಮಾನು ನಾಯ್ಕ, ತಿಪ್ಪಣ್ಣ ಲಮಾಣಿ, ರಾಮಣ್ಣ ಲಮಾಣಿ, ರಾಮಪ್ಪ ಮಾಳಗಿಮನಿ, ಪಾಂಡಪ್ಪ ಲಮಾಣಿ, ಮಲ್ಲೇಶ ಲಮಾಣಿ, ಶೇಖಪ್ಪ ಲಮಾಣಿ, ಕೃಷ್ಣಪ್ಪ ಲಮಾಣಿ, ಗೋವಿಂದ ಜಾಧವ, ಮಹೇಶ ಲಮಾಣಿ, ನೀಲಪ್ಪ ಲಮಾಣಿ, ರವಿ ಲಮಾಣಿ, ರುದ್ರಪ್ಪ ಲಮಾಣಿ, ಮಲ್ಲೇಶ ನೆಲೋಗಲ್ಲ, ಕುಮಾರ ಲಮಾಣಿ, ಮಲ್ಲೇಶ ಪೂಜಾರ, ರೇಖಪ್ಪ ಪೂಜಾರ, ಹೀರಪ್ಪ ಪೂಜಾರ, ಲೋಕಪ್ಪ ಪೂಜಾರ, ನೀಲಪ್ಪ ಪೂಜಾರ ಇತರರು ಇದ್ದರು.