ನಕಾರಾತ್ಮಕ ಯೋಚನೆ ವಿರುದ್ಧ ಜಯ ಸಾಧಿಸಿ-ಶಾಸಕ ಲಮಾಣಿ

| Published : Jul 03 2025, 11:47 PM IST

ನಕಾರಾತ್ಮಕ ಯೋಚನೆ ವಿರುದ್ಧ ಜಯ ಸಾಧಿಸಿ-ಶಾಸಕ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ನಕಾರಾತ್ಮಕ ಯೋಚನೆಗಳೇ ಜೀವನದ ಬಹುದೊಡ್ಡ ಶತ್ರುವಾಗಿದ್ದು, ವಿದ್ಯಾರ್ಥಿಗಳು ಅದರ ಮೇಲೆ ಜಯ ಗಳಿಸಬೇಕು. ದುರಾಲೋಚನೆಯ ವಿರುದ್ಧ ಹೋರಾಡುವ ಜತೆಗೆ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ ಜ್ಞಾನವಂತರಾಗಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ಶಿರಹಟ್ಟಿ: ನಕಾರಾತ್ಮಕ ಯೋಚನೆಗಳೇ ಜೀವನದ ಬಹುದೊಡ್ಡ ಶತ್ರುವಾಗಿದ್ದು, ವಿದ್ಯಾರ್ಥಿಗಳು ಅದರ ಮೇಲೆ ಜಯ ಗಳಿಸಬೇಕು. ದುರಾಲೋಚನೆಯ ವಿರುದ್ಧ ಹೋರಾಡುವ ಜತೆಗೆ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ ಜ್ಞಾನವಂತರಾಗಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ತಾಲೂಕಿನ ರಣತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಲು ಗ್ರಾಮಸ್ಥರು ಸಲಹೆ ನೀಡಿ, ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕು ಎಂದು ಹೇಳಿದರು.

ರಾಜನಿಗೆ ಒಂದು ರಾಜ್ಯದಲ್ಲಿ ಮಾತ್ರ ಗೌರವ ಇರುತ್ತದೆ. ಆದರೆ ಜ್ಞಾನಿಗೆ ಇಡೀ ಜಗತ್ತು ತಲೆಬಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸದಾ ಒಳಿತನ್ನು ಯೋಚಿಸಬೇಕು. ಯಶಸ್ವಿ ಜೀವನಕ್ಕೆ ಯಾವುದೇ ಅಡ್ಡ ಮಾರ್ಗವಿಲ್ಲ ಎನ್ನುವುದನ್ನು ತಿಳಿದುಕೊಂಡು, ದೇಶ ಬೆಳಗಿಸುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಉತ್ತಮವಾಗಿ ಓದಿ ರಾಷ್ಟ್ರಕ್ಕೆ ಕೊಡುಗೆ ನೀಡಬೇಕು. ಇತ್ತಿತ್ತಲಾಗಿ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಉಳಿಯುತ್ತಿರುವುದು ವಿಷಾದದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಓದಿ ರಾಷ್ಟ್ರಕ್ಕೆ ಕೊಡುಗೆ ನೀಡುವುದು ನಿಮ್ಮ ಜವಾಬ್ದಾರಿ ಎಂಬುದನ್ನು ಅರಿತುಕೊಳ್ಳಬೇಕು. ತಂದೆ ತಾಯಿಗಳು ಮಕ್ಕಳನ್ನು ಕಳಕಳಿಯಿಂದ ಓದಿಸುವ ಪ್ರಯತ್ನ ಮಾಡಬೇಕು ಎಂದು ಕರೆ ಕೊಟ್ಟರು.

ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಚವ್ಹಾಣ, ಶಾಲಾ ಸುಧಾರಣಾ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಚಂದ್ರಶೇಖರ ದಾನಮ್ಮನವರ, ಉಪಾಧ್ಯಕ್ಷ ಸಂತೋಷ ಓಬಾಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕಿ ನಾಯಕ, ಬಿ.ಡಿ. ಪಲ್ಲೇದ, ಜಾನು ಲಮಾಣಿ, ಶಂಕರ ಮರಾಠೆ, ಅಶೋಕ ಬಳ್ಳಾರಿ ಮಾತನಾಡಿದರು.

ಸುರೇಶ ಸಣ್ಣತಂಗಿ, ವಿಠೋಬ ಬಡಕಂಡಪ್ಪನವರ, ಫಕ್ಕೀರೇಶ ವಾರದ, ಧರ್ಮಣ್ಣ ಚವ್ಹಾಣ, ಬಸಪ್ಪ ಪ್ಯಾಟಿ, ಮಲ್ಲನಗೌಡ ಪಾಟೀಲ, ಗಂಗಾಧರ ಬಳಿಗಾರ, ಶಿವಯೋಗಪ್ಪ ನಿರ್ವಾಣಶೆಟ್ಟರ, ಹನುಮಂತಪ್ಪ ದೊಡ್ಡಮನಿ, ಹನುಮಂತಪ್ಪ ಸಂಗಮ್ಮನವರ, ಅರ್ಜುನಪ್ಪ ಸಂಗಮ್ಮನವರ, ಕುರುಗೋಡಪ್ಪ ಬಡಖಂಡಪ್ಪನವರ್, ದೇವಪ್ಪ ಮಾಗಡಿ, ಅಜ್ಜಪ್ಪ ಛಬ್ಬಿ, ಪರಶುರಾಮ ವಡವಿ, ಮಲ್ಲಪ್ಪ ಪ್ಯಾಟಿ, ಭಾರ್ಗವ ಗದಗ, ಶ್ರೀಕಾಂತ ಕಮ್ಮಾರ, ದೇವು ಶಲವಡಿ, ಶಾಂತಮ್ಮ ತಳವಾರ, ಹನುಮಂತ ದಾಸರ, ರಾಜು ಪರಸಪ್ಪನವರ, ಪಿಡಿಒ ಅನಿತಾ ಮಾಡಳ್ಳಿ ಇತರರು ಇದ್ದರು.