ಡಿಸಿಸಿ ಬ್ಯಾಂಕ್ ಚುನಾವಣೆಗೆ ಕಾಂಗ್ರೆಸ್ -ರೈತ ಸಂಘ ಬೆಂಬಲಿತರನ್ನು ಗೆಲ್ಲಿಸಿ

| Published : Sep 05 2025, 01:00 AM IST

ಡಿಸಿಸಿ ಬ್ಯಾಂಕ್ ಚುನಾವಣೆಗೆ ಕಾಂಗ್ರೆಸ್ -ರೈತ ಸಂಘ ಬೆಂಬಲಿತರನ್ನು ಗೆಲ್ಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್ (ಡಿಸಿಸಿ)ನ ಚುನಾವಣೆಯಲ್ಲಿ ಪಾಂಡವಪುರ ಉಪವಿಭಾಗದ ಹಾಲು ಉತ್ಪಾದಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್- ರೈತಸಂಘದ ಬೆಂಬಲಿತ ಅಭ್ಯರ್ಥಿ ವಿಜಯೇಂದ್ರ ಮೂರ್ತಿ ಹಾಗೂ ಮಂಡ್ಯ ಉಪವಿಭಾಗದಿಂದ ಸ್ಪರ್ಧಿಸಿರುವ ತೈಲೂರು ಚಲುವರಾಜುಗೆ ಕ್ಷೇತ್ರದ ಮತದಾರರು ಹೆಚ್ಚಿನ ಮತಕೊಟ್ಟು ಗೆಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್ (ಡಿಸಿಸಿ)ನ ಚುನಾವಣೆಯಲ್ಲಿ ಪಾಂಡವಪುರ ಉಪವಿಭಾಗದ ಹಾಲು ಉತ್ಪಾದಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್- ರೈತಸಂಘದ ಬೆಂಬಲಿತ ಅಭ್ಯರ್ಥಿ ವಿಜಯೇಂದ್ರ ಮೂರ್ತಿ ಹಾಗೂ ಮಂಡ್ಯ ಉಪವಿಭಾಗದಿಂದ ಸ್ಪರ್ಧಿಸಿರುವ ತೈಲೂರು ಚಲುವರಾಜುಗೆ ಕ್ಷೇತ್ರದ ಮತದಾರರು ಹೆಚ್ಚಿನ ಮತಕೊಟ್ಟು ಗೆಲ್ಲಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಮೇಲುಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ವಿಜಯೇಂದ್ರಮೂರ್ತಿ ಅವರು ಪಾಂಡವಪುರ ಉಪ ವಿಭಾಗದ ನಾಲ್ಕು ತಾಲೂಕುಗಳ ಹಾಲು ಉತ್ಪಾದಕರ ಕ್ಷೇತ್ರದಿಂದ ಕಾಂಗ್ರೆಸ್-ರೈತ ಸಂಘದ ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದೇವೆ ಎಂದರು.

ಮಂಡ್ಯ ಉಪವಿಭಾಗದ ಹಾಲು ಉತ್ಪಾದಕರ ಕ್ಷೇತ್ರದಿಂದ ತೈಲೂರು ಚಲುವರಾಜು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಮಂಡ್ಯ ಕ್ಷೇತ್ರದಿಂದ ಸಾತನೂರು ಸತೀಶ್ ಅವರು ಸ್ಪರ್ಧಿಸಿದ್ದಾರೆ. ಮೇಲುಕೋಟೆ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಮತದಾರರು ನಮ್ಮ ಅಭ್ಯರ್ಥಿಗಳಿಗೆ ಕ್ಷೇತ್ರದ ಮತದಾರರು ಹೆಚ್ಚಿನ ಮತಕೊಟ್ಟು ಆಯ್ಕೆ ಮಾಡಲು ಸಹಕರಿಸಬೇಕು ಎಂದು ಕೋರಿದರು.

ಸಹಕಾರಿ ಕ್ಷೇತ್ರಗಳು ಅಭಿವೃದ್ಧಿಯಾದರೆ ಮಾತ್ರ ಗ್ರಾಮಗಳ ಸರ್ವತೋಮುಖವಾದ ಅಭಿವೃದ್ಧಿ ಸಾಧ್ಯ. ಹಾಗಾಗಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಎರಡು ಪಕ್ಷದ ಮತದಾರರು ಸೇರಿದಂತೆ ಜಿಲ್ಲೆಯ ಎಲ್ಲಾ ಮತದಾರರು ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಸಚಿವ ಎನ್.ಚಲುವರಾಯಸ್ವಾಮಿ ಅವರು ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ನಮ್ಮ ಸರಕಾರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.

ವಿಜಯೇಂದ್ರಮೂರ್ತಿ ಹಾಗೂ ತೈಲೂರು ಚಲುವರಾಜು ಮತ್ತು ಸಾತನೂರು ಸತೀಶ್ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತಕೊಟ್ಟು ಗೆಲ್ಲಿಸಿ ಬ್ಯಾಂಕ್ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳಾದ ವಿಜಯೇಂದ್ರಮೂರ್ತಿ, ತೈಲೂರು ಚಲುವರಾಜು, ಸಾತನೂರು ಸತೀಶ್, ಮೇಲುಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್, ಮುಖಂಡರಾದ ಕನಗೋನಹಳ್ಳಿ ಪರಮೇಶ್, ಚಂದ್ರಶೇಖರ್ ಹಾಜರಿದ್ದರು.