ಸಾರಾಂಶ
ಕುದೂರು: ಕುದೂರು ಗ್ರಾಮದ ಕೋಟೆ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಾಮಾಚಾರ ಮಾಡಿರುವ ಘಟನೆ ನಡೆದಿದೆ.
ಕುದೂರು: ಕುದೂರು ಗ್ರಾಮದ ಕೋಟೆ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಾಮಾಚಾರ ಮಾಡಿರುವ ಘಟನೆ ನಡೆದಿದೆ.
ಗುರುವಾರ ಸಂಜೆ ಶಾಲೆಯ ಕಟ್ಟಡದ ಬಾಗಿಲಿನಲ್ಲಿ ನಿಂಬೆಹಣ್ಣು, ಮೊಟ್ಟೆ ಒಡೆದು ಕುಂಕುಮ ಉದುರಿಸುತ್ತಿರುವ ಗ್ರಾಮದ ಇಬ್ಬರು ಅಪ್ರಾಪ್ತ ಹುಡುಗರನ್ನು ಶಾಲೆಯ ಮೂವರು ಚಿಕ್ಕ ಮಕ್ಕಳು ನೋಡಿದಾಗ ಮೊಟ್ಟೆ ಒಡೆಯುತ್ತಿದ್ದ ಪುಂಡು ಹುಡುಗರು ಶಾಲೆಯ ಮಕ್ಕಳಿಗೆ ಚಾಕು ತೋರಿಸಿ ಬೆದರಿಸಿ, ಹಲ್ಲೆಗೆ ಮುಂದಾಗಿದ್ದಾರೆ. ಹೆದರಿ ಓಡಿದ ಹುಡುಗರು ಬೆಳಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದಾರೆ.ನಂತರ ದಾರಿಯಲ್ಲಿ ಶಾಲೆಯ ಹೆಣ್ಣು ಮಕ್ಕಳಿಗೆ ಮೈಕೈ ತಾಕಿಸಿಕೊಂಡು ಓಡಾಡುವುದು, ಅಶ್ಲೀಲವಾಗಿ ಮಾತನಾಡುವುದು ಮಾಡುತ್ತಿದ್ದ ಈ ಪುಂಡ ಹುಡುಗರ ಮನೆಗಳನ್ನು ಹುಡುಕಿಕೊಂಡು ಹೋದ ಶಿಕ್ಷಕಿಗೆ ಮತ್ತು ಮಕ್ಕಳಿಗೆ ಅದೇನ್ ಮಾಡ್ತೀರೋ ಮಾಡ್ಕೋ ಹೋಗಿ ಎಂದು ಅಸಡ್ಡೆಯಾಗಿ ಮಾತನಾಡಿದ್ದಾರೆ.
ಶಾಲೆಯ ಬಳಿಗೆ ತಾಪಂ ಮಾಜಿ ಅಧ್ಯಕ್ಷ ಯತಿರಾಜು ಮತ್ತು ಗ್ರಾಪಂ ಸದಸ್ಯೆ ಲತಾ, ಗ್ರಾಮಸ್ಥ ಹೊನ್ನರಾಜು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ್, ಮಕ್ಕಳ ಮೇಲಿನ ಲೈಂಗಿಕ ಹಿಂಸೆಗೆ ಬೇಸರಗೊಂಡು ಪೊಲೀಸರಿಗೆ ದೂರು ನೀಡಿದ್ದು, ಪ್ರಾಥಮಿಕ ಶಾಲಾ ಹೆಣ್ಣು ಮಕ್ಕಳ ಮೇಲೆ ಅಸಭ್ಯ ಮತ್ತು ಆಶ್ಲೀಲವಾಗಿ ವರ್ತಿಸಿದ್ದ ಇಬ್ಬರು ಪುಂಡರನ್ನು ಪೊಲೀಸರು ಠಾಣೆಗೆ ಎಳೆದೊಯ್ದಿದ್ದಾರೆ.2ಕೆಆರ್ ಎಂಎನ್ 9.ಕುದೂರು ಗ್ರಾಮದ ಕೋಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಂಡರು ವಾಮಾಚಾರ ಮಾಡಿರುವುದು.