ಸಾರಾಂಶ
ಬೆಳಗಾವಿ: ನಗರದ ಜೆಎಂಎಫ್‌ಸಿ ನ್ಯಾಯಾಲಯ ಸಂಕೀರ್ಣ ಆವರಣದ ಗೇಟ್ ಹತ್ತಿರ ಕಿಡಿಗೇಡಿಗಳಿಂದ ವಾಮಾಚಾರ ಮಾಡಿರುವುದು ಪತ್ತೆಯಾಗಿದೆ. ಗೇಟಿನ್ ಮುಂದೆ ದಾರದಿಂದ ಸುತ್ತಿರುವ ಮಣ್ಣಿನ ಕುಡಿಕೆ, ಅರಿಶಿಣ, ಕುಂಕಮ ತೆಂಗಿನಕಾಯಿ ಇಟ್ಟು ವಾಮಾಚಾರ ಮಾಡಿದ್ದಾರೆ.
ಬೆಳಗಾವಿ: ನಗರದ ಜೆಎಂಎಫ್‌ಸಿ ನ್ಯಾಯಾಲಯ ಸಂಕೀರ್ಣ ಆವರಣದ ಗೇಟ್ ಹತ್ತಿರ ಕಿಡಿಗೇಡಿಗಳಿಂದ ವಾಮಾಚಾರ ಮಾಡಿರುವುದು ಪತ್ತೆಯಾಗಿದೆ. ಗೇಟಿನ್ ಮುಂದೆ ದಾರದಿಂದ ಸುತ್ತಿರುವ ಮಣ್ಣಿನ ಕುಡಿಕೆ, ಅರಿಶಿಣ, ಕುಂಕಮ ತೆಂಗಿನಕಾಯಿ ಇಟ್ಟು ವಾಮಾಚಾರ ಮಾಡಿದ್ದಾರೆ. ಅರಿಸಿನ ಕುಂಕುಮ ಹಚ್ಚಿ, ಬಣ್ಣಬಣ್ಣದ ದಾರದಿಂದ ಕುಡಿಕೆಯ ಸುತ್ತಲೂ ಸುತ್ತಿ ತಟ್ಟೆಯೊಂದರಲ್ಲಿ ಇಟ್ಟು ಪರಾರಿಯಾಗಿದ್ದರೆ. ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು ಪ್ರದೇಶವಾಗಿರುವ ಜೆಎಂಎಫ್‌ಸಿ ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ವಾಮಾಚಾರ ಘಟನೆ ನಡೆದಿರುವುದು ದಿಗ್ಬ್ರಮೆಗೆ ಕಾರಣವಾಗಿದೆ. ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ತಮ್ಮ ಪರವಾಗಿ ತೀರ್ಪು ಬರಬೇಕು ಎಂಬ ಉದ್ದೇಶದಿಂದ ಕೆಲ ಮೂರ್ಖರು ಈ ತರಹದ ಕೆಲಸವನ್ನು ಮಾಡಿರಬಹುದು ಇಂತಹ ಮೂಢನಂಬಿಕೆಗಳನ್ನು ಹುಟ್ಟುಹಾಕುವ ಇಂತಹ ಕೃತ್ಯಗಳನ್ನು ಯಾರೂ ಮಾಡಬಾರದು ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.