ಇವಿಎಂ ಸರಿಯಿಲ್ಲ ಎಂದು ಹೇಳುವ ಕಾಂಗ್ರೆಸ್ ನಾಯಕರು ಯಾವ ಮಾನ ಮರ್ಯಾದೆ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ ಎನ್‌ಡಿಎಗೆ ಅಧಿಕಾರ: ಆರ್.ಅಶೋಕ್

ಕನ್ನಡಪ್ರಭ ವಾರ್ತೆ ಕೋಲಾರ

ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಉದ್ದೇಶದಿಂದ ಕಾಕ್ರೋಚ್ ಪಾರ್ಟಿ ಮೂಲಕ ಕಾಂಗ್ರೆಸ್ ಅರಾಜಕತೆ ಸೃಷ್ಟಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ಕೋಲಾರದಲ್ಲಿ ಬೃಹತ್ ಪಾದಯಾತ್ರೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬ್ಯಾಲೆಟ್ ಸರಿಯಿಲ್ಲ, ಇವಿಎಂ ಸರಿಯಿಲ್ಲ ಎಂದು ಹೇಳುವ ಕಾಂಗ್ರೆಸ್ ನಾಯಕರು ಯಾವ ಮಾನ ಮರ್ಯಾದೆ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಬೆಲೆ ಏರಿಕೆಗೆ ಸಿದ್ದರಾಮಯ್ಯ ಹೆದರಿಕೊಂಡಿದ್ದಾರೆ, ಒಂದು ಬಾಂಡ್ಲಿ ಜೆಲ್ಲಿ ಹಾಕುವ ಯೋಗ್ಯತೆಯೂ ಇಲ್ಲ. ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಮ್ಯಾನಿಫೆಸ್ಟೊದಲ್ಲಿ ಹಾಲಿನ ದರಕ್ಕೆ ಬೆಂಬಲ ಕೊಡುತ್ತೇವೆ ಎಂದಿದ್ದ ಕಾಂಗ್ರೆಸ್, ಇದುವರೆಗೆ ನಾಲ್ಕು ಬಾರಿ ಹಾಲಿನ ದರ ಏರಿಕೆ ಮಾಡಿದೆ. ಸರ್ಕಾರ ಪಾಪರ್ ಆಗಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ೧೪ ರು. ಜಾಸ್ತಿ ಮಾಡಿ ೨ ರು. ಇಳಿಕೆ ಎನ್ನುತ್ತಾರೆ ಸಿಎಂ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಹಣ ಲೂಟಿ ಮಾಡಿ ಕಾಂಗ್ರೆಸ್‌ಗೆ ಫಂಡ್ ಮಾಡಲು ಇದೆಲ್ಲ ನಡೆಯುತ್ತಿದೆ, ಬಿಜೆಪಿ ಇದರ ವಿರುದ್ಧ ಹೋರಾಟ ಮಾಡಲಿದೆ ಎಂದರು.ದೀಪಾವಳಿ ಬಂದರೂ ಯಾರಿಗೂ ಸಿಹಿ ಇಲ್ಲ. ಒಂದೆಡೆ ಬೆಲೆ ಏರಿಕೆ, ಮತ್ತೊಂದೆಡೆ ಸ್ಟಿಂಗ್ ವಿಚಾರ. ಹರಿ ಪ್ರಸಾದ್ ಅವರು ೨೦೧೩ರದ್ದು ಎಂದು ಸರ್ಟಿಫೈ ಮಾಡಿದ್ದಾರೆ ಎಂದು ಸ್ಟಿಂಗ್ ಗೊಂದಲದ ಬಗ್ಗೆ ಮಾತನಾಡಿದರು.

"ಕಾಂಗ್ರೆಸ್ ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿದೆ, ವೈಯಕ್ತಿಕ ಹಾಗೂ ಪಕ್ಷಕ್ಕೆ ಅವಮಾನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ದೂರಿನಲ್ಲಿ ಹೇಳಿದ್ದಾರೆ. ಸಿಡಿ ಮಾಡಿದವರನ್ನು ಬಿಟ್ಟು ಅಲ್ಲಿ ಹಂಚಿದರು, ಇಲ್ಲಿ ಹಂಚಿದರು ಎನ್ನುತ್ತಾರೆ. ಮೆರವಣಿಗೆ ವಿಗ್ರಹ ಹಿಡಿಯಬೇಡಿ, ಮೂಲ ವಿಗ್ರಹ ಹಿಡಿಯಿರಿ. ಸಿದ್ದರಾಮಯ್ಯ ಅವರ ಮಗ ಕಾಂಗ್ರೆಸ್‌ನವರೇ ಮಾಡಿದ್ದಾರೆ ಎನ್ನುತ್ತಾರೆ " ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಸಿಡಿ ವಿಚಾರದಲ್ಲಿ ಬಂಧಿಸಿ, ಅಂದೇ ಬಿಡುಗಡೆ ಮಾಡುತ್ತಾರೆ ಎಂದು ಬೇಸರ ಹೊರಹಾಕಿದ್ದಾರೆ. ಶಾಲೆ ಸರಿಯಿಲ್ಲ, ರಸ್ತೆ ಹಾಕಿಲ್ಲ, ೨ ಸಾವಿರ ರೈತರಿಗೆ ಬರ ಪರಿಹಾರ ಎನ್ನುತ್ತಾರೆ, ಆ ದಾಖಲೆ ಪಡೆಯಲು ೨ ಸಾವಿರ ಖರ್ಚಾಗುತ್ತದೆ ಎಂದು ಟೀಕಿಸಿದ ಅವರು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.