ಕನ್ನಡಪ್ರಭ ವಾರ್ತೆ, ತುಮಕೂರುಒಳಮೀಸಲಾತಿ ಇಲ್ಲದೆ ರಾಜ್ಯದಲ್ಲಿ 56432 ಹುದ್ದೆಗಳ ತುಂಬಲು ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು, ವಿಶ್ವವಿದ್ಯಾಲಯಗಳನ್ನು ಒಂದು ಘಟಕವಾಗಿ ಪರಿಗಣಿಸಿ ನೇಮಕಾತಿ ಕೈಬಿಡಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಆರ್.ಪಿ.ಐ ಕರ್ನಾಟಕ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಾ.ಎನ್.ಮೂರ್ತಿ ಬಣದ ವತಿಯಿಂದ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ, ಸರ್ಕಾರ ಒಳಮೀಸಲಾತಿ ಹೊರತಾಗಿ ಶೇ 15 ರ ಮೀಸಲಾತಿ ಅಡಿಯಲ್ಲಿ 56432 ಹುದ್ದೆಗಳನ್ನು ತುಂಬಲು ಮುಂದಾಗಬಾರದು.ಇದರಿಂದ ಮಾದಿಗ ಸಮುದಾಯಕ್ಕೆ ಬಾರಿ ಅನ್ಯಾಯ ವಾಗಲಿದೆ. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.ಈ ವೇಳೆ ಮಾತನಾಡಿದಡಿ ಎಸ್‌ಎಸ್ ಡಾ.ಎನ್.ಮೂರ್ತಿ ಬಣದಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ,ಕರ್ನಾಟಕರಾಜ್ಯ ಸರ್ಕಾರ ಸುಪ್ರೀಕೋರ್ಟಿನ ತೀರ್ಪಿನ ಅನ್ವಯನಿ.ನ್ಯಾಯ ಮೂರ್ತಿ ನಾಗ ಮೋಹನ್‌ದಾಸ್‌ಆಯೋಗ ರಚಿಸಿ ವರದಿ ಪಡೆದು. ವರದಿಯನ್ನು ಅಂಗೀಕರಿಸಿತು. ಆ ನಂತರ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಪರಿಶಿಷ್ಟರ ಉಪ ವಗೀರ್ಕರಣ ಮಸೂದೆ 2026 ನ್ನು ಅಂಗೀಕರಿಸಿ ರಾಜ್ಯಪಾಲರ ಅಂಕಿತ ಪಡೆದು ಮಸೂದೆ ಅಧಿಕೃತವಾಯಿತು. ಆದರೆ ರಾಜ್ಯ ಸರ್ಕಾರ ಎಲ್ಲವನ್ನು ಕಡೆಗಣಿಸಿ ಒಳಮೀಸಲಾತಿ ಇಲ್ಲದೆ 56432 ಉದ್ಯೋಗ ನೇಮಕಾತಿ ಮಾಡಲು ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯಂತೆ ಉದ್ಯೋಗ ನೇಮಕಾತಿ ನಡೆದರೆ ಮಾದಿಗ ಮತ್ತು ಸಂಬಂಧಿತ ಉಪಜಾತಿಗಳಿಗೆ ಜನಸಂಖ್ಯೆ ಅನುಗುಣವಾಗಿ ಉದ್ಯೋಗ ದೊರಕದೆ ಅನ್ಯಾಯವಾಗುತ್ತದೆ ಎಂದರು.ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳು ತೀರ ಬಡತನ, ನಿರುದ್ಯೋಗವಿಲ್ಲದೆ ದಯನೀಯ ಸ್ಥಿತಿಯಲ್ಲಿ ಬರಡುಜೀವನ ನಡೆಸುತ್ತಿದ್ದಾರೆ. 101 ಪರಿಶಿಷ್ಟ ಜಾತಿಗಳ ಅಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ನೀಡಿ ಸಮಪಾಲು ಸಮಬಾಳು ನೀತಿ ಅನುಸರಿಸಲಿ ಎಂದರು.ರಾಜ್ಯ ಸರ್ಕಾರ ಉದ್ಯೋಗಳಲ್ಲಿ ಮೀಸಲಾತಿ ಕಲ್ಪಿಸಲು ಕಾನೂನು ತೊಡಕು, ತಾಂತ್ರಿಕ ಅಡಚಣೆಯ ಕುಂಟು ನೆಪ ಹೇಳುತ್ತಿರುವುದು ಈ ಸಮಾಜವನ್ನು ವಂಚಿಸುವ ರಾಜಕೀಯ ಹುನ್ನಾರವಾಗಿದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್, ಬಿ.ಜೆ.ಪಿ. ಜೆ.ಡಿ.ಎಸ್ ಪಕ್ಷಗಳು ತಮ್ಮಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಪ್ರಾಮಾಣಿಕ ಪ್ರಯತ್ನ ಮಾಡದೆ ವಂಚಿಸಿವೆ ಎಂದು ಪಿ.ಎನ್.ರಾಮಯ್ಯದೂರಿದರು.ಸರ್ಕಾರ ಈ ನಿಟ್ಟಿನಲ್ಲಿಯಾವ ಪಕ್ಷಪಾತ ತೋರದೆ ಎಲ್ಲಾ ನೇಮಕಾತಿಗಳಲ್ಲಿಯೂ ಒಳಮೀಸಲಾತಿ ಅಳವಡಿಸಬೇಕು.ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆದೊಡ್ಡ ಹೊಡೆತವನ್ನು ಮಾದಿಗ ಸಂಘಟನೆಗಳು ನೀಡಲಿವೆ ಎಂಬ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿಡಿಎಸ್.ಎಸ್ ಪದಾಧಿಕಾರಿಗಳಾದ ಗೂಳೂರು ರಾಜಣ್ಣ, ನಾಗರಾಜ ಗೂಳರಿವೆ,ಸುನಿಲ್, ಹರಿನಾಥ್, ಶಾಂತ ಕುಮಾರ್, ರಂಗನಾಥ್, ಟಿ.ಕೆ.ನರಸೀಯಪ್ಪ, ಎ.ನಾಗೇಶ್, ಲಕ್ಷ್ಮಮ್ಮ, ಬೆಣ್ಣೇನಹಳ್ಳಿ ರಾಜು, ಸಾಕ್ಷರತಾ ಪ್ರೇರಕರ ಸಂಘದ ರಾಜಣ್ಣ.ಜಿ,ಸತೀಶ್ ಕಂಟಲಗೆರೆ, ರಂಗಸ್ವಾಮಿ, ಉಮೇಶ್.ಕೆ.ಆರ್.,ಮಾನಂಗಿ ನಾರಾಯಣಪ್ಪ, ಹುನಮಂತಯ್ಯ, ರಾಮಚಂದ್ರಯ್ಯ, ಹನುಮಂತರಾಜು,ಪುಟ್ಟರಾಜು,ಪುಟ್ಟಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಒಳಮೀಸಲಾತಿಯಿಲ್ಲದೆ ಹುದ್ದೆ ಭರ್ತಿ ಅಧಿಸೂಚನೆ ಹಿಂಪಡೆಯಿರಿ
ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಆರ್.ಪಿ.ಐ ಕರ್ನಾಟಕ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.