ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ 9 ದಂಪತಿಗಳು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದಾಗುವ ಮೂಲಕ ಹೊಸ ಜೀವನಕ್ಕೆ ನಾಂದಿ ಹಾಡಿದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯ ನೇರಳೆ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕುಟುಂಬ ನ್ಯಾಯಾಲಗಳಲ್ಲಿ ವಿಚ್ಛೇದನ ಕೋರಿ 9 ಜೋಡಿಗಳು ಅರ್ಜಿ ಸಲ್ಲಿಸಿದ್ದರು. ಸಂಧಾನದಲ್ಲಿ ತಮ್ಮ ತಪ್ಪನ್ನು ಅರಿತು ಒಟ್ಟಿಗೆ ಬಾಳುವ ಸಂಕಲ್ಪ ಮಾಡಿ, ಹೊಂದಾಣಿಕೆಯಿಂದ ಜೀವನ ನಡೆಸುವುದಾಗಿ ತಿಳಿಸಿದರು. ಬಾಗಲಕೋಟೆ ನ್ಯಾಯಾಲಯದಲ್ಲಿ 1, ಜಮಖಂಡಿ 1, ಬಾದಾಮಿ 3, ಮುಧೋಳ 2 ಹಾಗೂ ಬನಹಟ್ಟಿ ಕೋರ್ಟ್‌ನಲ್ಲಿ 2 ಸೇರಿ ಒಟ್ಟು 9 ಜೋಡಿಗಳು ವಿಚ್ಚೇದನ ಹಿಂಪಡೆದು ಒಂದಾಗಿದ್ದಾರೆ.1999 ಪ್ರಕರಣಗಳು ಇತ್ಯರ್ಥ:ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಒಟ್ಟು 2646 ಪೈಕಿ 1999 ಪ್ರಕರಣಗಳು ಇತ್ಯರ್ಥವಾದರೆ, ಬೀಳಗಿ ಕೋರ್ಟ್‌ನಲ್ಲಿ 414 ಪ್ರಕರಣಗಳ ಪೈಕಿ 289, ಮುಧೋಳ ಕೋರ್ಟ್‌ನಲ್ಲಿ 810 ಪ್ರಕರಣಗಳ ಪೈಕಿ 695, ಬನಹಟ್ಟಿ ಕೋರ್ಟ್‌ನಲ್ಲಿ 828 ಪ್ರಕರಣಗಳ ಪೈಕಿ 686, ಹುನಗುಂದ ಕೋರ್ಟ್‌ನಲ್ಲಿ 551 ಪೈಕಿ 372, ಇಲಕಲ್ಲ ಕೋರ್ಟ್‌ನಲ್ಲಿ 398 ಪೈಕಿ 342, ಜಮಖಂಡಿ ಕೋರ್ಟ್‌ನಲ್ಲಿ 1707 ಪ್ರಕರಣಗಳ ಪೈಕಿ 1356 ಹಾಗೂ ಬಾದಾಮಿ ಕೋರ್ಟ್‌ನಲ್ಲಿ 679 ಪ್ರಕರಣಗಳ ಪೈಕಿ 483 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.
₹2527600ಗಳ ದಂಡ ಪಾವತಿ:ವಾಜ್ಯ ಪೂರ್ವ ಪ್ರಕರಣಗಳಲ್ಲಿ ನೀರಿನ ಬಿಲ್ ಮತ್ತು ಇತರೆ ಬಿಲ್ ಪಾವತಿಗೆ ಸಂಬಂಧಿಸಿದಂತೆ 1679 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 1312 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹5,92,879ಗಳ ಬಿಲ್ ನ್ಯಾಯಾಲಯದಲ್ಲಿ ಪಾವತಿಸಿದ್ದಾರೆ. ಟ್ರಾಪಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ 5382 ಸಣ್ಣ ಪ್ರಕರಣಗಳಲ್ಲಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಸಾರ್ವಜನಿಕರು ₹2527600ಗಳ ದಂಡ ಪಾವತಿಸಿದ್ದಾರೆ. ಗ್ರಾಹಕರ ವ್ಯಾಜ್ಯಗಳಿಗೆ ಸಂಬಂಧಿಸಿದ 38 ಪ್ರಕರಣಗಳಲ್ಲಿ 24 ಇತ್ಯರ್ಥಗೊಂಡಿದ್ದು, ₹2858548ಗಳ ದಂಡ ಪಾವತಿ ಮಾಡಿಸಿದ್ದಾರೆ.ಕಾರ್ಯಕ್ರಮದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮೂಲಿಮನಿ, ಕುಟುಂಬ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶೆ ಪಲ್ಲವಿ ಆರ್, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶೆ ಹೇಮಾ ಪಸ್ತಾಪೂರ, 2ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶ ಮಹೇಶ ಪಾಟೀಲ, ಪ್ರಧಾನ ದಿವಾನಿ ನ್ಯಾಯಾಧೀಶ ಮುರುಗೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ, ಸೇರಿದಂತೆ ಕಕ್ಷಿದಾರರು, ವಕೀಲರು ಇದ್ದರು.₹23.49 ಕೋಟಿಗಳಿಗೆ ರಾಜಿ:ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಬಾಕಿ ಇರುವ 8033 ಮತ್ತು 11534 ವಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 19567 ಪ್ರಕರಣಗಳನ್ನು ವಿಚಾರಣೆಗಾಗಿ ತೆಗೆದುಕೊಳ್ಳಲಾಗಿತ್ತು. ಈ ಪೈಕಿ 15962 ಪ್ರಕರಣಗಳನ್ನು ಇತ್ಯರ್ಥಪಡಿಸಿ ರಾಜೀ ಸಂಧಾನ ಮಾಡಲಾಯಿತು. ಈ ಎಲ್ಲ ಪ್ರಕರಣಗಳಿಗೆ ಒಟ್ಟು ₹23.49 ಕೋಟಿಗಳಿಗೆ ರಾಜಿ ಮಾಡಿಸಲಾಯಿತು.
-----------ಫೋಟೋ 13ಬಿಕೆಟಿ5- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯ ನೇರಳೆ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್.