ವಿಷಭರಿತ ಹಾವು ಕಚ್ಚಿದ್ದರಿಂದ ಒದ್ದಾಡುತ್ತಿದ್ದ ಕಾಂತಾಮಣಿಯವರನ್ನು ಪ್ರಭುಸ್ವಾಮಿ ಗ್ರಾಮಸ್ಥರ ಜೊತೆ ಸೇರಿ ಕೆ.ಆರ್ ನಗರದ ಆಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ರಾಮನಾಥಪುರ: ಹುಲ್ಲು ಕೊಯ್ಯಲು ಹೋಗಿದ್ದ ಮಹಿಳೆಗೆ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಹೋಬಳಿಯ ಕೆರಗೋಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಭುಸ್ವಾಮಿ ಮತ್ತು ಅವರ ಪತ್ನಿ ಕಾಂತಾಮಣಿ (೪೫) ಬುಧವಾರ ಮಧ್ಯಾಹ್ನ ತಮ್ಮ ಜಮೀನಿನಲ್ಲಿ ದನಗಳಿಗೆ ಹುಲ್ಲು ಕೊಯ್ಯಲು ಹೋದ ವೇಳೆ ವಿಷಭರಿತ ಹಾವು ಕಚ್ಚಿದ್ದರಿಂದ ಒದ್ದಾಡುತ್ತಿದ್ದ ಕಾಂತಾಮಣಿಯವರನ್ನು ಪ್ರಭುಸ್ವಾಮಿ ಗ್ರಾಮಸ್ಥರ ಜೊತೆ ಸೇರಿ ಕೆ.ಆರ್ ನಗರದ ಆಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ.