ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಬೈಕ್ ಆಯತಪ್ಪಿ ಬಿದ್ದು ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಯೊರ್ವಳು ಮೃತಪಟ್ಟ ಘಟನೆ ದೇವೂರ ತಾಂಡದ ಹತ್ತಿರ ಭಾನುವಾರ ನಡೆದಿದೆ.ತಾಲೂಕಿನ ಪಡಗಾನೂರ ಗ್ರಾಮದ ಮಂಜುಳಾ ದೇಸು ರಾಠೋಡ (30) ಮೃತ ಮಹಿಳೆ. ಪಡಗಾನೂರಿನಿಂದ ದೇವೂರ ತಾಂಡಾದ ಕಡೆಗೆ ಹೋಗುವಾಗ ಬೈಕ್ ಆಯತಪ್ಪಿ ಬಿದ್ದಿದೆ. ಈ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕರ ಭೇಟಿ, ಸಾಂತ್ವನ:ದೇವರಹಿಪ್ಪರಗಿ ಪಟ್ಟಣದಿಂದ ಕೊಂಡಗೂಳಿ ಮಾರ್ಗವಾಗಿ ಭಾನುವಾರ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ರಸ್ತೆಯಲ್ಲಿ ಹೋಗುವ ಮಾರ್ಗದ ಮಧ್ಯೆ ದೇವೂರ ತಾಂಡದ ಹತ್ತಿರ ದ್ವಿಚಕ್ರ ವಾಹನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಕಂಡು ಶಾಸಕರು ದೇವರ ಹಿಪ್ಪರಗಿ ಪೊಲೀಸ್ ಠಾಣೆ ಪಿಎಸ್ಐ ಬಸವರಾಜ ತಿಪ್ಪರಡ್ಡಿ ಅವರಿಗೆ ಕರೆ ಮಾಡಿ ತಿಳಿಸಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲು ತಿಳಿಸಿದರು. ನಂತರ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವ ಜೊತೆ ಕುಟುಂಬದ ಇತರೆ ಸದಸ್ಯರನ್ನು ಮಾತನಾಡಿಸಿ ಅವರ ದುಃಖದಲ್ಲಿ ತಾವು ಭಾಗಿಯಾಗಿದ್ದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ರಾಜಶೇಖರ ಪಾಟೀಲ, ಬಂದೆ ನವಾಜ್ ಕತ್ನಳ್ಳಿ,ಅಜೀತ ರಾಠೋಡ,ಲಕ್ಷ್ಮಣ್ ರಾಗೇರಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.