ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕೃಷಿ ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಂಟಂ ಆಟೋವೊಂದು ಪಲ್ಟಿಯಾಗಿದ್ದು, ಘಟನೆಯಲ್ಲಿ ಓರ್ವ ಕಾರ್ಮಿಕ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಅಲ್ಲದೇ, ದುರ್ಘಟನೆಯಲ್ಲಿ 9 ಜನ ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ತಂಗಡಗಿಯ ಸಮೀಪದ ಅಮರಗೋಳ ಕ್ರಾಸ್ ಬಳಿ ಸಂಭವಿಸಿದೆ. ಗಾಯಾಳುಗಳನ್ನು ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಮಾಲಾ ಖಾದರಸಾಬ ಹವಾಲ್ದಾರ್ (35) ಮೃತ ಮಹಿಳೆಯಾಗಿದ್ದಾಳೆ. ಮೃತ ಮಾಲಾ ಸೇರಿದಂತೆ ವಸಂತಿ ಶೇಖಪ್ಪ ಕತ್ತಿ, ಶರಣಮ್ಮ ಪವಡಪ್ಪ ಹಗಟಗಿ, ಲಾಲಮಾ ಅಕ್ಷರ ಮತ್ತೇದಾರ, ಬಸಮ್ಮ ಈರಪ್ಪ ತಾರನಾಳ, ಚನ್ನಮ್ಮ ರೇವಣೆಪ್ಪ ತಂಗಡಗಿ, ನಿಂಗಮ್ಮ ಹಣಮಂತ್ರಾಯ ಮಡಿವಾಳರ, ಶಂಕ್ರಮ್ಮ ಶಂಕ್ರಪ್ಪ ಪಾಟೀಲ, ರೇಖಾ ರಮೇಶ ಮಡಿವಾಳರ ಗಂಭಿರ ಗಾಯಗೊಂಡಿದ್ದಾರೆ. ಇವರನ್ನು ವಿಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಮಾಲಾ ಸೇರಿ ಗಾಯಾಳುಗಳು ತಾಲೂಕಿನ ಕೋಳೂರು ಗ್ರಾಮದ ಕೃಷಿ ಕೂಲಿ ಕಾರ್ಮಿಕರು. ಇವರು ಹುನಗುಂದ ತಾಲೂಕಿನ ಬೀಸಲದಿನ್ನಿ ಗ್ರಾಮಕ್ಕೆ ಉಳ್ಳಾಗಡ್ಡಿ ಕೀಳಲು ಟಂಟಂ ಆಟೋದಲ್ಲಿ ಹೊರಟ್ಟಿದ್ದರು. ಆದರೆ, ಮಾರ್ಗ ಮಧ್ಯ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಅವಘಡ ಸಂಭವಿಸಿದೆ ಎಂದು ಮುದ್ದೇಬಿಹಾಳ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಘಟನೆ ಬಳಿಕ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಹಾಗೂ ಪಿಎಸ್‌ಐ ಸಂಜಯ ತಿಪ್ಪಾರೆಡ್ಡಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಬಾಕ್ಸ್ ತಂಗಡಗಿಯ ಸಮೀಪದ ಅಮರಗೋಳ ಕ್ರಾಸ್ ಬಳಿ ಸಂಭವಿಸಿದ ಅಪಘಾತ ಸ್ಥಳಕ್ಕೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಭೇಟಿ ನೀಡಿ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು.
ಈ ವೇಳೆ ಮಾತನಾಡಿದ ಅವರು, ಇದು ಆಕಸ್ಮಿಕ ಘಟನೆಯಾಗಿದ್ದು, ಮೃತ ಮಹಿಳೆ ಕುಟುಂಬ ಕೃಷಿ ಕೂಲಿ ಕಾರ್ಮಿಕಳು. ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಗಂಭೀರ ಗಾಯಗೊಂಡವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳು ಒಂದೇ ಗ್ರಾಮದವರು. ಈ ಘಟನೆಯಿಂದಾಗಿ ಕೋಳೂರು ಗ್ರಾಮ ದುಃಖ ಮಡುವಿನಲ್ಲಿದೆ. ಮೃತಳ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಹಾಗೂ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಗ್ರಾಮಕ್ಕೆ ಭೇಟಿ ನೀಡಿ ಮೃತ ಮಹಿಳೆ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.------------ಕೋಟ್ಅಪಘಾತದಲ್ಲಿ ಮಹಿಳೆ ಮೃತಪಟ್ಟಿರುವ ಘಟನೆ ಕೇಳಿ ಒಂದು ಕ್ಷಣ ಧಿಗ್ಭ್ರಾಂತನಾದೆ, ಸಧ್ಯ ನಾನು ಉಪಚುನಾವಣೆ ನಿಮಿತ್ತ ಶಿಗ್ಗಾವಿಯಲ್ಲಿದ್ದೇನೆ. ಘಟನೆ ಕುರಿತು ಮಾಹಿತಿ ತಿಳಿದ ನನಗೆ ಈ ಘಟನೆಯಿಂದಾಗಿ ಮನಸ್ಸಿಗೆ ನೋವನ್ನುಂಟು ಮಾಡಿದೆ. ಬಡ ರೈತ ಕುಟುಂಬಕ್ಕೆ ಈ ರೀತಿ ಘಟನೆ ನಡೆಯಬಾರದಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ. ನ.14 ರಂದು ಮತಕ್ಷೇತ್ರಕ್ಕೆ ಬರಲಿದ್ದೇನೆ. ಆಗ ಗ್ರಾಮಕ್ಕೆ ತೆರಳಿ ಮೃತ ಕುಟುಂಬದ ಮನೆಗೆ ತೆರಳಿ ಸಾಂತ್ವಾನ ಹೇಳುವುದರ ಜೊತೆಗೆ ಸಿಎಂ ಸಿದ್ದರಾಮಯ್ಯರ ಜೊತೆ ಚರ್ಚಿಸಿ ಮುಖ್ಯಮಂತ್ರಿ ವಿಮೋಚನಾ ವಿಶೇಷ ನಿಧಿಯಿಂದ ಪರಿಹಾರ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸಧ್ಯ ಗಂಭಿರ ಗಾಯಗೊಂಡು ಆಸ್ಪತ್ರೆಯಲ್ಲಿರುವ ಗಾಯಾಳುಗಳು ಬೇಗ ಗುಣಮಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ಸಿ ಎಸ್ ನಾಡಗೌಡ(ಅಪ್ಪಾಜಿ), ಶಾಸಕ, ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ