ತೀರ್ಥಹಳ್ಳಿ: ವಿದ್ಯುತ್ ಸ್ಪರ್ಶ: ಮಹಿಳೆ ಸಾವು
KannadaprabhaNewsNetwork | Published : Oct 11 2023, 12:45 AM IST
ತೀರ್ಥಹಳ್ಳಿ: ವಿದ್ಯುತ್ ಸ್ಪರ್ಶ: ಮಹಿಳೆ ಸಾವು
ಸಾರಾಂಶ
ಮಂಗಳವಾರ ತೋಟಕ್ಕೆ ಹೋಗಿದ್ದ ಸಂದರ್ಭ ಈ ಅವಘಡ
ತೀರ್ಥಹಳ್ಳಿ: ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗುಂಡಿ ಗ್ರಾಮದಲ್ಲಿ ಮಂಗಳವಾರ ಅಡಕೆ ತೋಟದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಸುಮಿತ್ರಮ್ಮ (72) ಮೃತದುರ್ದೈವಿ. ಅವರಿಗೆ ಇಬ್ಬರು ಪುತ್ರರು, ಮತ್ತು ಪುತ್ರಿ ಇದ್ದಾರೆ. ಮಂಗಳವಾರ ತೋಟಕ್ಕೆ ಹೋಗಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಕೋಣಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.