ಕೌಟುಂಬಿಕ ಕಲಹ ಮನನೊಂದ ಮಹಿಳೆ ನೇಣಿಗೆ ಶರಣು

| Published : Apr 18 2025, 12:36 AM IST

ಕೌಟುಂಬಿಕ ಕಲಹ ಮನನೊಂದ ಮಹಿಳೆ ನೇಣಿಗೆ ಶರಣು
Share this Article
  • FB
  • TW
  • Linkdin
  • Email

ಸಾರಾಂಶ

ಕೌಟುಂಬಿಕ ಕಲಹ , ಕಿರುಕುಳ ತಾಳಲಾರದೇ ಮನನೊಂದ ಪತ್ನಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರಿಗೂ ತಿಳಿ ಹೇಳಿದ್ದೆವು. ಆ ಬಳಿಕ ದಂಪತಿಗಳಿಬ್ಬರೂ ಕೆಲ ದಿನಗಳ ಸಮಯಾವಕಾಶ ನೀಡಿ ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದರು. ಆದರೆ ಇದೀಗ ಅವನ ಚಿತ್ರಹಿಂಸೆಗೆ ನನ್ನ ಮಗಳ ದಾರುಣ ಸಾವು ಸಂಭವಿಸಿದೆ ಎಂದು ಮೃತಳ ತಂದೆ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಕೌಟುಂಬಿಕ ಕಲಹ , ಕಿರುಕುಳ ತಾಳಲಾರದೇ ಮನನೊಂದ ಪತ್ನಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಶೇಖರ್ ಎಂಬುವವರು ಕಳೆದ 16 ವರ್ಷಗಳ ಹಿಂದೆ ಸಕಲೇಶಪುರ ತಾಲೂಕಿನ ಮಾಗಲು ಗ್ರಾಮದ ಹರಿಣಾಕ್ಷಿ ಎಂಬುವವರನ್ನು ವಿವಾಹವಾಗಿದ್ದರು. ತಂದೆ ಗುರುವಪ್ಪ ಮಾತನಾಡಿ, ಈ ನಡುವೆ ಇಬ್ಬರ ನಡುವೆ ಸಣ್ಣ ಪುಟ್ಟ ವಿಷಯಕ್ಕೆ ಮನಸ್ತಾಪ, ಜಗಳ ನಡೆಯುತ್ತಿತ್ತು. ಜಗಳ ನಡೆಯುತ್ತಿದ್ದ ಸಂದರ್ಭದಲ್ಲೆಲ್ಲ ನಾವುಗಳು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ರಾಜಿ ಮಾಡಿ ಸಂಧಾನ ಮಾಡುತ್ತಿದ್ದೆವು, ಇತ್ತೀಚೆಗೆ ನನ್ನ ಮಗಳ ಮೇಲೆ ಅನೈತಿಕ ಸಂಬಂಧದ ಸಂಶಯ ಪಟ್ಟು ನಾನು ಬೇರೆ ವಿವಾಹವಾಗುತ್ತೇನೆ ನೀನು ಸಹ ಬೇರೆ ಆಗು ಎಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತ ವಿಚ್ಛೇದನ ಕೊಡುವಂತೆ ಪೀಡಿಸುತ್ತಿದ್ದ. ಇತ್ತೀಚೆಗೆ ಅವನು ಪರಸ್ತ್ರೀ ಯೊಂದಿಗೆ ಸ್ನೇಹ ಸಂಬಂಧ ಬೆಳೆಸಿರಬಹುದೆಂದು ಸ್ಥಳೀಯ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನನ್ನ ಮಗಳು ಆಗಿಂದಾಗ್ಗೆ ತನ್ನ ನೋವನ್ನು ಹೇಳಿಕೊಂಡಿದ್ದಳು. ಅದರಂತೆ ಕೆಲ ದಿನಗಳ ಹಿಂದಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರಿಗೂ ತಿಳಿ ಹೇಳಿದ್ದೆವು. ಆ ಬಳಿಕ ದಂಪತಿಗಳಿಬ್ಬರೂ ಕೆಲ ದಿನಗಳ ಸಮಯಾವಕಾಶ ನೀಡಿ ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದರು. ಆದರೆ ಇದೀಗ ಅವನ ಚಿತ್ರಹಿಂಸೆಗೆ ನನ್ನ ಮಗಳ ದಾರುಣ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಮಹಿಳೆಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.