ಸಾರಾಂಶ
ಮುದ್ದೇಬಿಹಾಳ: ತಾಲ್ಲೂಕಿನ ಮುದ್ನಾಳ ಗ್ರಾಮದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ. ಮುದ್ನಾಳ ಗ್ರಾಮದ ಮುತ್ತಪ್ಪ ಶಿವಪ್ಪ ಅಮರಪ್ಪಗೋಳ ಹಾಗೂ ಸುರೇಶ ನಿಂಗಪ್ಪ ದೊಡಮನಿ ಬಂಧಿತ ಆರೋಪಿಗಳು. ಇದರಲ್ಲಿ ಮುತ್ತಪ್ಪ ಅಮರಪ್ಪಗೋಳ ಎಂಬಾತನೇ ಮುಖ್ಯ ಆರೋಪಿಯಾಗಿದ್ದು, ಆತನನ್ನು ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಎಸ್ಪಿ ಪ್ರಸನ್ನ ದೇಸಾಯಿ, ಮಾರಿಹಾಳ, ರಾಮನಗೌಡ ಹಟ್ಟಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಭಾಯಿ ಹಾಗೂ ಸಿಬ್ಬಂದಿ ಆರ್.ಎಸ್.ಪಾಟೀಲ್, ಸಲೀಂ ಹತ್ತರಕಿಹಾಳ, ಸಂಗಮೇಶ ಚಲವಾದಿ, ವಿರೇಶ ಹಾಲಗಂಗಾಧರಮಲ, ರಮೇಶ ಬಿದರಿ, ಚನ್ನು ಬಿರಾದಾರ, ಎಂ.ಬಿ.ಹೂಗಾರ, ಎನ್.ಆರ್.ಚೌಧರಿ, ಮಂಜು ಬುಳ್ಳಾ, ಪ್ರಭು ಠಾಣೇದ, ವಿ.ಎಸ್.ಹಿಪ್ಪರಗಿ, ಗುಂಡು ಗಿರಣಿವಡ್ಡರ ನೇತೃತ್ವದ ವಿಶೇಷ ತಂಡವು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಹೆಚ್ಚುವರಿ ಎಸ್ಪಿ ಶಂಕರ ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ತಂಡಕ್ಕೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ.