ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಜೆ.ಕೆ. ಮೈದಾನದಲ್ಲಿ ಆಯೋಜಿಸಲಾಗಿದ್ದ 4 ದಿನಗಳ ಮಹಿಳಾ ದಸರಾ ಕಾರ್ಯಕ್ರಮಗಳು ಶುಕ್ರವಾರ ಅಂತ್ಯವಾಯಿತು.ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯು ಜೆ.ಕೆ. ಮೈದಾನದಲ್ಲಿ ಆಯೋಜಿಸಿದ್ದ ಮಹಿಳಾ ದಸರಾ ಕಾರ್ಯಕ್ರಮಗಳು ವೈವಿಧ್ಯತೆಯಿಂದ ಕೂಡಿತ್ತು. ಸಾವಿರಾರು ಮಹಿಳೆಯರು ಪಾಲ್ಗೊಂಡು ಮಹಿಳಾ ದಸರಾವನ್ನು ಯಶಸ್ವಿಗೊಳಿಸಿದರು.ಆಟೋಟ ಸ್ಪರ್ಧೆಹಿರಿಯ ನಾಗರಿಕರಿಗಾಗಿ ಆಯೋಜಿಸಿದ್ದ ವೇಗದ ನಡಿಗೆ ಹಾಗೂ ಬಾಲ್ ಇನ್ ದ ಬಕೆಟ್ ಸ್ಪರ್ಧೆಗಳಲ್ಲಿ ಹಿರಿಯರು ಭಾಗವಹಿಸಿ ಸಂಭ್ರಮಿಸಿದರು.70 ವರ್ಷ ಮೇಲ್ಪಟ್ಟ ಮಹಿಳೆಯರ ಬಕೆಟ್ ಇನ್ ಬಾಲ್ ಸ್ಪರ್ಧೆಯಲ್ಲಿ ಜಯಂತಿ(ಪ್ರಥಮ), ಎನ್. ಶಾಂತಕುಮಾರಿ (ದ್ವಿತೀಯ), ಯಧುಗಿರಿ (ತೃತೀಯ) ಬಹುಮಾನ ಪಡೆದರು. 60 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಕೆ. ಶಿವಮ್ಮ (ಪ್ರಥಮ), ವನಜಾ ಯಾದವ್ (ದ್ವಿತೀಯ), ಟಿ.ಎಸ್. ಸುಬ್ಬಲಕ್ಷ್ಮಿ (ತೃತೀಯ) ಬಹುಮಾನ ಪಡೆದರು.ಹಾಗೆಯೇ, 70 ವರ್ಷ ಮೇಲ್ಪಟ್ಟ ಪುರುಷ ವಿಭಾಗದಲ್ಲಿ ವೇಗದ ನಡಿಗೆ ಸ್ಪರ್ಧೆಯಲ್ಲಿ ಸೋಮಶೇಖರ್ (ಪ್ರಥಮ), ಎಚ್.ಎಸ್. ವಿಭಾಕರ (ದ್ವಿತೀಯ), ನಾಗೇಶ್ (ತೃತೀಯ) ಬಹುಮಾನ ಗಳಿಸಿದರು. 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪದ್ಮನಾಭ (ಪ್ರಥಮ), ಶ್ರೀಕಂಠೇಶ್ (ದ್ವಿತೀಯ) ಹಾಗೂ ಮಂಜುನಾಥ್ (ತೃತೀಯ) ಬಹುಮಾನ ಪಡೆದರು. ಲಿಂಗತ್ವ ಅಲ್ಪಸಂಖ್ಯಾತರು ಫ್ಯಾಷನ್ ಶೋಲಿಂಗತ್ವ ಅಲ್ಪಸಂಖ್ಯಾತರು ಫ್ಯಾಷನ್ ಶೋ ಗಮನ ಸೆಳೆದರು. ದಸರಾ ಮಹೋತ್ಸವದ ನವರಾತ್ರಿಯ ಬಣ್ಣಗಳಾದ ಬಿಳಿ, ಕೆಂಪು, ಕಡು ನೀಲಿ, ಹಳದಿ, ಹಸಿರು, ಬೂದು, ಕಿತ್ತಳೆ, ನವಿಲು ಹಸಿರು, ಗುಲಾಬಿಯ ಸೀರೆಗಳನ್ನು ತೊಟ್ಟು ಅಲಂಕಾರ ಮಾಡಿಕೊಂಡು ಬಂದಿದ್ದ ಲಿಂಗತ್ವ ಅಲ್ಪಸಂಖ್ಯಾತರು, ತಾವು ಯಾವ ಮಾಡಲ್‌ಗಳಿಗೂ ಕಮ್ಮಿ ಇಲ್ಲ ಎಂಬಂತೆ ಹೆಜ್ಜೆ ಹಾಕಿದರು. ಕೊಡವ ಮಹಿಳೆಯರು, ಕಾವೇರಿ ನೀರು ಕುರಿತಾದ ನೃತ್ಯ ಮಾಡಿನ ಕೊಡಗಿನ ಸಾಂಸ್ಕೃತಿಕ ಸಿರಿಯನ್ನು ವೇದಿಕೆ ಮೇಲೆ ಪಸರಿಸಿದರು.ಗಾಯಕ ರಾಹುಲ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುರಿತಾದ ಗೀತೆಯನ್ನು ಹಾಡಿದರೆ, ಮೈಸೂರಿನ ಪಡಿಪು ಕೈಯಾಲೆ ತಂಡದ ವಿನುತ ಕೇಸರಿ ಅವರು ನೃತ್ಯ ಮಾಡಿದರು. ಟಿ. ನರಸೀಪುರ, ಪಿರಿಯಾಪಟ್ಟಣ, ಮೈಸೂರು ಮಹಿಳೆಯರ ತಂಡಗಳು ಪ್ರತ್ಯೇಕವಾಗಿ ಸಮೂಹ ನೃತ್ಯ ಪ್ರಸ್ತುತಪಡಿಸಿದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸುವ ಮೂಲಕ ಮಹಿಳಾ ದಸರಾ ಸಮಾರಂಭಕ್ಕೆ ತೆರೆ ಎಳೆಯಲಾಯಿತು.