ಸ್ತ್ರೀಯರಲ್ಲಿ ನಿರ್ವಹಣಾ ಮನೋಸಾಮರ್ಥವಿದ್ದು, ಕುಟುಂಬದಲ್ಲಿ ಬರುವ ಸಂಕಷ್ಟ, ಸುಧಾರಣೆ, ಪ್ರಗತಿ, ಸಂಸ್ಕೃತಿ, ಉನ್ನತ ವ್ಯಕ್ತಿಯಾಗಿ ರೂಪಿಸುವ ಶಕ್ತಿ ಸ್ತ್ರೀಯರಲ್ಲಿದೆ ಎಂದರು. ಕುಟುಂಬದಲ್ಲಿ ಸ್ತ್ರೀಪಾತ್ರ ಬಹುರೂಪಿ ಎನ್ನಬಹುದು, ನಮ್ಮನ್ನು ಸಾಕಿದವಳು, ಸಲಹಿದವಳು, ಓಂಕಾರ ಕಲಿಸಿದವಳು, ಮಮಕಾರ ತುಂಬಿದವಳು ಜೀವನಕ್ಕೆ ಮಾರ್ಗದರ್ಶನ ನೀಡಿದವಳು ಹೆಣ್ಣು ಇಂತಹ ಶಕ್ತಿ ಹೊಂದಿರುವ ತಾವು ಸಾಹಿತ್ಯ ಕ್ಷೇತ್ರದಿಂದ ಹಿಡಿದು ಸರ್ಕಾರ ನಡೆಸುವ ಹಂತದವರೆವಿಗೂ ಮುಂಚೂಣಿಯಲ್ಲಿ ತನ್ನದೇ ಛಾಪು ಮೂಡಿಸಿರುವುದನ್ನು ಮನಗಾಣಬಹುದು ಎಂದು ಶಾಸಕ ಎ. ಮಂಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಮನಾಥಪುರಮಹಿಳೆಯರು ಕೇವಲ ಅಡುಗೆಮನೆಗೆ ಮಾತ್ರ ಸೀಮಿತವಾಗಿರದೇ ಇಂದು ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲೂ ಪ್ರವೇಶ ಮಾಡಿ ಸಾಧನೆಯ ಉತ್ತುಂಗದಲ್ಲಿದ್ದಾರೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಎ. ಮಂಜು ತಿಳಿಸಿದರು.ರಾಮನಾಥಪುರದ ಶ್ರೀ ಕಾವ್ಯಾಂಜಲಿ ಕಾರ್ಯಕ್ರಮದಲ್ಲಿ ನಡೆದ ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅರಕಲಗೂಡು ಇವರವತಿಯಿಂದ ಐಸಿಡಿಎಸ್ ಸುವರ್ಣ ಸಂಭ್ರಮ ಹಾಗೂ ಅಂತಾರಾಷ್ಟ್ರಿಯ ಮಹಿಳಾ ದಿನಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀಯರಲ್ಲಿ ನಿರ್ವಹಣಾ ಮನೋಸಾಮರ್ಥವಿದ್ದು, ಕುಟುಂಬದಲ್ಲಿ ಬರುವ ಸಂಕಷ್ಟ, ಸುಧಾರಣೆ, ಪ್ರಗತಿ, ಸಂಸ್ಕೃತಿ, ಉನ್ನತ ವ್ಯಕ್ತಿಯಾಗಿ ರೂಪಿಸುವ ಶಕ್ತಿ ಸ್ತ್ರೀಯರಲ್ಲಿದೆ ಎಂದರು. ಕುಟುಂಬದಲ್ಲಿ ಸ್ತ್ರೀಪಾತ್ರ ಬಹುರೂಪಿ ಎನ್ನಬಹುದು, ನಮ್ಮನ್ನು ಸಾಕಿದವಳು, ಸಲಹಿದವಳು, ಓಂಕಾರ ಕಲಿಸಿದವಳು, ಮಮಕಾರ ತುಂಬಿದವಳು ಜೀವನಕ್ಕೆ ಮಾರ್ಗದರ್ಶನ ನೀಡಿದವಳು ಹೆಣ್ಣು ಇಂತಹ ಶಕ್ತಿ ಹೊಂದಿರುವ ತಾವು ಸಾಹಿತ್ಯ ಕ್ಷೇತ್ರದಿಂದ ಹಿಡಿದು ಸರ್ಕಾರ ನಡೆಸುವ ಹಂತದವರೆವಿಗೂ ಮುಂಚೂಣಿಯಲ್ಲಿ ತನ್ನದೇ ಛಾಪು ಮೂಡಿಸಿರುವುದನ್ನು ಮನಗಾಣಬಹುದು ಎಂದು ಶಾಸಕ ಎ. ಮಂಜು ತಿಳಿಸಿದರು. ಈ ಸಂದರ್ಭದಲ್ಲಿ ಅರಕಲಗೂಡು. ಸಿಡಿಪಿಒ, ವೆಂಕಟೇಶ್ ಮಲ್ಲಿಪಟ್ಟಣ ಕಾಲೇಜು ಪ್ರಾಂಶುಪಾಲರು ಚಂದ್ರಕಲಾ ಸಮಾಜ ಸೇವಕರು ಶ್ರೀ ಸುಂದರೇಶ್ ಉಡವಾರು, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು ಮುಂತಾದವರು ಇದ್ದರು.