ಸಾರಾಂಶ
ವಿದ್ಯಾರ್ಥಿಯರ ಒಕ್ಕೂಟ ಕಾರ್ಯಕ್ರಮಕ್ಕೆ ಎಸ್. ನಿಜಲಿಂಗಪ್ಪಾ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರಾದ ಡಾ. ಅಶ್ವಿನಿ ಮುತಾಲಿಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಹಿಳೆಯರು ಇಂದು ಅಬಲೆಯರಲ್ಲ. ಅವರು ಸಬಲೆಯರು. ಅವರಲ್ಲಿ ಅಪರಿಮಿತವಾದ ಶಕ್ತಿ, ಅಡಕವಾಗಿದೆ. ಅದು ಪ್ರಕಟಗೊಳ್ಳಲು ಸೂಕ್ತ ವಾತಾವರಣದ ವೇದಿಕೆ ಅವಶ್ಯಕವಾಗಿದ್ದು ಮಹಿಳೆಯರು ಸ್ವಾಭಿಮಾನ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿದರೆ ಏನನ್ನಾದರೂ ಸಾಧಿಸಬಹುದು ಎಂದು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯೆ ಡಾ.ಅಶ್ವಿನಿ ಮುತಾಲಿಕ ಹೇಳಿದರು.ಬಿವಿವಿ ಸಂಘದ ಕಲಾವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪಪೂ ಮಹಾವಿದ್ಯಾಲಯ ವಿದ್ಯಾಗಿರಿ ಬಾಗಲಕೋಟೆ ವತಿಯಿಂದ ವಿದ್ಯಾರ್ಥಿಯರ ಒಕ್ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್.ಎಚ್ ವಟವಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೈಲಜಾ ಗುಡಗುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿಯರಾದ ಅನ್ನಪೂರ್ಣಾ ಪಾಟೀಲ ಸ್ವಾಗತಿಸಿದರು, ಉಪನ್ಯಾಸಕಿಯರಾದ ಡಾ.ಶ್ರೀದೇವಿ ಕುಲಕರ್ಣಿಯವರು ಪರಿಚಯಿಸಿದರು. ಸ್ನೇಹಾ ಭಂಗಿ ನಿರೂಪಿಸಿದರು.