ಮಹಿಳೆಯರು ಸಮಾಜಕ್ಕೆ ಪ್ರೇರಣಾ ಶಕ್ತಿ: ಡಾ. ಶಿಲ್ಪಾ ದಿವಟರ್‌

| Published : Mar 31 2024, 02:02 AM IST

ಸಾರಾಂಶ

ದೇಶದಲ್ಲಿ ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ಪ್ರೇರಣಾ ಶಕ್ತಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರಟಗಿ

ದೇಶದಲ್ಲಿ ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ಪ್ರೇರಣಾ ಶಕ್ತಿಯಾಗಿದ್ದಾರೆ. ದೇಶದ ಸ್ತ್ರೀ ಶಕ್ತಿ ವಿದೇಶದಲ್ಲಿಯೂ ಹೆಸರು ಮಾಡಿದೆ ಎಂದು ಹೆಜ್ಜೆ ಮಹಿಳಾ ಸಂಘದ ಅಧ್ಯಕ್ಷೆ ಡಾ. ಶಿಲ್ಪಾ ದಿವಟರ್ ಹೇಳಿದರು.

ಇಲ್ಲಿನ ಲಕ್ಷ್ಮೀ ಕನ್ವೆಶನ್ ಹಾಲ್‌ನಲ್ಲಿ ಹೆಜ್ಜೆ ಮಹಿಳಾ ಸಂಘದಿಂದ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಮಹಿಳೆಯರು ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಕಾರಣವೇ ಅವರ ಛಲ ಮತ್ತು ವಿಶ್ವಾಸಭರಿತ ಜೀವನ ಶೈಲಿ. ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಂಘಟಿತರಾಗಿ ತೊಡಗಿಸಿಕೊಂಡಿದ್ದಾರೆ. ಸಾಧನೆಗಳ ಮೂಲಕ ಇನ್ನಷ್ಟು ಉತ್ತಮ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸಲು ಇದು ಪ್ರೇರಣಾ ಶಕ್ತಿಯಾಗಲಿ ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಟಿಇಟಿ ಪರೀಕ್ಷೆ ಉತ್ತೀರ್ಣಳಾಗಿ ಸಾಧನೆಗೈದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಮಾಡಿಸಲು ಜಿಪಂನಿಂದ ಲೋಕಸಭಾ ಚುನಾವಣೆ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದ ಕಾರಟಗಿಯ ತೃತೀಯಲಿಂಗಿ ರಮ್ಯಾಳಿಗೆ, ಪರಿಸರ ಕಾಳಜಿಯಿಂದ ಆನೆಗುಂದಿ ಗ್ರಾಪಂ ವ್ಯಾಪ್ತಿಯ ಚಿಕ್ಕರಾಂಪುರದಲ್ಲಿ ಸಾವಿರಗಟ್ಟಲೇ ಸಸಿ ನೆಟ್ಟು ಬೆಳೆಸಿರುವ ಶಾಲಾ ಬಾಲಕಿ, ಪರಿಸರ ಪ್ರೇಮಿ ಡಿ.ಸಿಂಧೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಾಡಿದ ಮಹಿಳೆಯರಾದ ಶಿಕ್ಷಕಿ ಸಿ.ಎಚ್. ಗೀತಾ, ಶಿಕ್ಷಣ ಪ್ರೇಮಿ ಶಾರದಾ ಮಲ್ಲಿಕಾರ್ಜುನ ತೊಂಡಿಹಾಳ, ವಿಜಯಲಕ್ಷ್ಮೀ ವೀರೇಂದ್ರ ಪಾಟೀಲ್, ಸರಸ್ವತಿ ವಿಶ್ವನಾಥ್ ಪಾಟೀಲ್, ಸ್ತ್ರೀ ಸ್ವಸಹಾಯ ಸಂಘದ ಯಮನಮ್ಮ, ರೇಣುಕಾ ನಾಯಕ್, ಶಿವಲೀಲಾ, ವೀಣಾ ನೀಲಕಂಠಯ್ಯಸ್ವಾಮಿ, ವೈಯುಕ್ತಿಕ ಸಾಧನೆಗೈದ ರಾಜೇಶ್ವರಿ ಹಿರೇಮಠ, ಭಾರತಿ ಹುಲಗಿ, ನರ್ಮದಾ ಶ್ರೇಷ್ಠಿ, ಕೆಜಿವಿಬಿ ಶಾಲೆಯ ಕವಿತಾ ಗಣವಾರಿ ಸೇರಿದಂತೆ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಹಾಗೂ ವಿವಿಧ ಮಹಿಳಾ ಸಂಘ-ಸಂಸ್ಥೆಗಳ ಪ್ರಮುಖರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅತಿಥಿಗಳಾಗಿ ಡಾ. ಸುಲೋಚನಾ ಚಿನಿವಾಲ್, ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ರೇಖಾ ಅಕ್ಕನವರು ಸಿ.ಎಚ್. ಮೀನಾಕ್ಷಿ ಮತ್ತು ಲೀಲಾ ಬಿಜಕಲ್ ಸೇರಿದಂತೆ ಸಂಘದ ಪದಾಧಿಕಾರಿಗಳಾದ ಪೂಜಾ ಪಾಟೀಲ, ಹಂಪಮ್ಮ, ಸುಮಾ ಹಿರೇಮಠ, ರತ್ನಾ ಬಪ್ಪೂರು, ಶೀಲಾ ಸಜ್ಜನ್, ಜ್ಯೋತಿ ಹಿರೇಮಠ ಇತರರಿದ್ದರು.